ವಿಶ್ವ ಹಿಂದೂ ಪರಿಷತ್ ಬಜರಂಗದಳ ರೆಂಜಿಲಾಡಿ ಗ್ರಾಮ ಸಮಿತಿ ರಚನೆ
ಗೌರವಾಧ್ಯಕ್ಷ ಮೃತ್ಯುಂಜಯ ಭಿಡೆ, ಅಧ್ಯಕ್ಷ: ರಾಮಚಂದ್ರ ಗೌಡ, ಕಾರ್ಯದರ್ಶಿ ಪದ್ಮನಾಭ ಗೌಡ, ಸಂಚಾಲಕ: ಚೇತನ್ ಎಲುವಾಳೆ
ಗೌರವಾಧ್ಯಕ್ಷ ಮೃತ್ಯುಂಜಯ ಭಿಡೆ ಕೆರೆತೋಟ,
ಅಧ್ಯಕ್ಷ: ರಾಮಚಂದ್ರ ಗೌಡ,
ಕಾರ್ಯದರ್ಶಿ ಪದ್ಮನಾಭ ಗೌಡ,
ಸಂಚಾಲಕ: ಚೇತನ್ ಎಲುವಾಳೆ
ಕಡಬ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಡಬ ಪ್ರಖಂಡ ಇದರ ರೆಂಜಿಲಾಡಿ ಗ್ರಾಮ ಸಮಿತಿ ರಚನೆ ಶ್ರೀ ನೂಜಿ ಉಳ್ಳಾಲ್ತಿ ದೈವಸ್ಥಾನದಲ್ಲಿ ನಡೆಯಿತು.
ಗೌರವಾಧ್ಯಕ್ಷರಾಗಿ ಮೃತ್ಯುಂಜಯ ಭಿಡೆ ಕೆರೆತೋಟ, ಅಧ್ಯಕ್ಷರಾಗಿ ರಾಮಚಂದ್ರ ಗೌಡ ಎಳುವಾಲೆ, ಕಾರ್ಯದರ್ಶಿಯಾಗಿ ಪದ್ಮನಾಭ ಗೌಡ ಕೇಪುಂಜ, ಉಪಾಧ್ಯಕ್ಷರಾಗಿ ಶೇಖರ ಗೌಡ ಮಾರಪ್ಪೆ, ಬಜರಂಗದಳ ಸಂಯೋಜಕ ರಾಗಿ ಚೇತನ್ ಎಲುವಾಳೆ, ಸಹ ಸಂಯೋಜಕರಾಗಿ ಗಂಗಾಧಾರ ಗರ್ಗಸ್ ಪಾಲ್, ಗೋ ರಕ್ಷಕ ಪ್ರಮುಖ್ರಾಗಿ ಉಮೇಶ್ ಅರ್ತಿತ್ತಡಿ, ಸತ್ಸಂಗ ಪ್ರಮುಖ್ ತಿರುಮಲೇಶ್ವರ, ಸುರಕ್ಷಾ ಪ್ರಮುಖ್ ನಾಗೇಶ್ ತಲೇಕಿ, ವಿದ್ಯಾರ್ಥಿ ಪ್ರಮುಖ್ ವಿಶ್ವನಾಥ ಹೇರ, ಸಾಪ್ತಾಹಿಕ ಮಿಲನ್ ದಿನೇಶ್ ಗೌಡಿಗೆ, ಅಖಾಡ ಪ್ರಮುಖ್ ಪ್ರದೀಪ್ ಪಟ್ಟೆ ಆಯ್ಕೆಯಾಗಿದ್ದರೆ. ನೂತನ ಸಮಿತಿ ರಚನೆಯ ಸಭೆಯು ವಿ.ಹಿಂ.ಪ ಜಿಲ್ಲಾ ಗೋ ರಕ್ಷಕ್ ಪ್ರಮುಖ್ ಅಶೋಕ್ ಶೆಟ್ಟಿ ಸರಪಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಜರಂಗದಳ ಜಿಲ್ಲಾ ಸಹ ಸಂಯೋಜಕರಾದ ಲತಿಶ್ ಗುಂಡ್ಯ ಅವರು ಪದಾಧಿಕಾರಿಗಳಿಗೆ ಜವಾಬ್ದಾರಿ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ಜವಾಬ್ದಾರಿಯನ್ನು ಘೋಷಿಸಿದರು. ಈ ಸಂಧರ್ಭದಲ್ಲಿ ವಿಹಿಂಪ ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಬಜರಂಗದಳ ಕಡಬ ಪ್ರಖಂಡ ಸಂಯೋಜಕ ಮೂಲಚಂದ್ರ ಕಾಂಚನ, ಉಮೇಶ್ ಶೆಟ್ಟಿ ಸಾಯಿರಾಂ, ತಿಲಕ್ ರೈ ಉಪಸ್ಥಿತರಿದ್ದರು.