ಪುತ್ತೂರು: ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಯುವತಿಯರಿಂದ ಹಣ ವಸೂಲಿ ಮಾಡಿದ್ದಲ್ಲದೆ, ಕೆಲಸ ಕೊಡಿಸದೆ ವಂಚಿಸಿದ ಹಾಗೂ ತಮಗೆ ಆದ ಅನ್ಯಾಯವನ್ನು ಪ್ರಶ್ನಿಸಿದ್ದಕ್ಕೆ ಪುತ್ತೂರಿನ ಮರೀಲ್ನ ಯುವಕರೊಬ್ಬರು ನಿಂಧಿಸಿದ್ದಾರೆ ಎಂದು ಆರೋಪಿಸಿ ನೊಂದ ಯುವತಿ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಗಳೂರಿನ ಶ್ರುತಿ ಎಂಬವರು ದೂರು ದಾರರು. ನನಗೆ ನನ್ನ ಗೆಳತಿಯಾದ ನವ್ಯಾ ಎಂಬವರು ಕೆಲಸ ಕೊಡಿಸುವ ಹೆಸರಿನಲ್ಲಿ ತನ್ನ ಅಣ್ಣನಾದ ಯತೀಶ್ ಮರೀಲ್ ಎಂದು ಪರಿಚಯಿಸಿ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡಿಸಿಕೊಡುತ್ತೇನೆ. ಅಲ್ಲಿ 10 ಜನರಿಗೆ ಕೆಲಸ ಇದೆ. ಒಬ್ಬರಿಗೆ ಕೆಲಸ ಕೊಡಿಸಲು ಆಗುವುದಿಲ್ಲ ಎಂದು ನಂಬಿಸಿದ ಕಾರಣ ನಾನು ಕೆಲಸ ಆಸೆಯಲ್ಲಿ ನಾನು ರೂ. 8 ಸಾವಿರ ನಗದು ರೂಪದಲ್ಲಿ ಕೊಟ್ಟಿದ್ದೆ. ಅದೇ ರೀತಿ ಇತರರು ಗೂಗಲ್ ಪೇ ಮುಖಾಂತರ ಹಣ ಸಂದಾಯ ಮಾಡಿದ್ದಾರೆ. ಹೀಗೆ ಒಟ್ಟು 10 ಮಂದಿಯಿಂದ ರೂ. 80ಸಾವಿರ ಸಂಗ್ರಹ ಮಾಡಿದ ಯತೀಶ್ ಅವರು ಪುನಃ ಹಣಕ್ಕಾಗಿ ನಮ್ಮಲ್ಲಿ ಬೇಡಿಕೆ ಇಟ್ಟರು. ಹಣ ಕೊಡಲು ಸಾಧ್ಯವಿಲ್ಲ ಎಂದಾಗ ನಮಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಪೋನ್ ಸ್ವಿಚ್ ಆಫ್ ಮಾಡಿದ್ದಾರೆ. ಬಳಿಕ ನಾವು ನವ್ಯಾ ಅವರಿಗೂ ಕರೆ ಮಾಡಿದಾಗ ಅವಳು ಕೂಡಾ ಉಡಾಫೆಯಗಿ ಮಾತನಾಡಿದ್ದಾರೆ. ಒಟ್ಟಿನಲ್ಲಿ ನಾವು ವಂಚನೆಗೊಳ್ಳಾಗಿದ್ದೇವೆ. ಮೊದಲೇ ಕೋವಿಡ್ನಿಂದಾಗಿ ಕೆಲಸವಿಲ್ಲದ ಸಂದರ್ಭದಲ್ಲಿ ಕೆಲಸಕ್ಕಾಗಿ ಒಂದಷ್ಟು ಹಣ ಸಂಗ್ರಹ ಮಾಡಿದ ಹಣ ಕಳೆದು ಕೊಂಡಿದ್ದೇವೆ. ನಮ್ಮಂತೆ ಇತರ ಹಲವಾರು ಭಾಗಗಳಲ್ಲೂ ವಂಚನೆ ಮಾಡಿರುವ ಕುರಿತು ನಮಗೆ ಮಾಹಿತಿ ಲಭ್ಯವಾಗಿದ್ದು, ಆದ್ದರಿಂದ ವಂಚಕರಿಬ್ಬರ ಮೇಲೆ ಸೂಕ್ತ ಕಾನುನು ಕ್ರಮ ಕೈಗೊಳ್ಳುವಂತೆ ಶೃತಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ದುರ್ಗಾವಾಹಿನಿ ಸಹಕಾರ:
ತಮಗಾದ ವಂಚನೆಯನ್ನು ಹಿಂದೂ ಪರ ಸಂಘಟನೆಯ ಮುಂದಿಟ್ಟಾಗ ವಿಶ್ವಹಿಂದೂ ಪರಿಷತ್, ಬಜರಂಗದಳ ಮತ್ತು ದುರ್ಗಾವಾಹಿನಿ ಘಟಕ ಸ್ಪಂಧಿಸಿ ತಕ್ಷಣ ನೊಂದ ಯುವತಿಯನ್ನು ಪುತ್ತೂರು ನಗರ ಪೊಲೀಸ್ ಠಾಣೆಗೆ ಕರೆದು ಕೊಂಡು ಹೋಗಿ ದೂರು ಕೊಡಿಸಿದ್ದಾರೆ. ವಂಚನೆ ಮಾಡಿದವನರನ್ನು ಇದರ ಹಿಂದಿರುವ ಶಕ್ತಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸಂಘಟನೆ ಆಗ್ರಹಿಸಿದೆ.