ಪುತ್ತೂರು: ಪಂಜಳ ಸಮೀಪದ ಕೆಮ್ಮಿಂಜೆ ಗ್ರಾಮದ ಕೊರೊಂಗು ನಿವಾಸಿ ವಿಜಯಭಾಸ್ಕರ(50 ವ.)ರವರು ಅನಾರೋಗ್ಯದಿಂದ ನ.26ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ತೂರಿನಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದು ಕಳೆದ ಏಳೆಂಟು ತಿಂಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಮೃತರು ಪತ್ನಿ ಮೀನಾಕ್ಷಿ, ಪುತ್ರರಾದ ನಿತಿನ್, ಸಚಿನ್ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.