ಕಾಣಿಯೂರು: ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಕೊರಗಪ್ಪ ಗೌಡ ಕುಕ್ಕುನಡ್ಕ ಆಯ್ಕೆಯಾಗಿದ್ದಾರೆ. ದೇವಸ್ಥಾನದ ಆಡಳಿತಾಧಿಕಾರಿ, ಕಾಣಿಯೂರು ಗ್ರಾ.ಪಂ, ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ ಕರಂದ್ಲಾಜೆ, ಕಾಸ್ಪಾಡಿ ಜೋಡುದೈವಗಳ ಮೊಕ್ತೇಸರ ಕುಸುಮಾಧರ ರೈ ಕಾಸ್ಪಾಡಿಗುತ್ತು, ನೂತನ ಸಮಿತಿ ಸದಸ್ಯರಾದ ಚಲ್ಲ ಮುಗೇರ ಮೆಣಸಿನಡ್ಕ, ಜಾನಕಿ ಎರ್ಕ, ತಾರಾವತಿ ಬೀರೊಳಿಗೆ, ಆನಂದ ಗೌಡ ಕೂರೇಲು, ಉಮೇಶ ಮಾರ್ಲಾಣಿ, ನಾರ್ಣಪ್ಪ ಗೌಡ ಜತ್ತೋಡಿ, ವಸಂತ ಪೂಜಾರಿ ದಲಾರಿ, ಅರ್ಚಕರಾದ ವೆಂಕಟಕೃಷ್ಣ ಭಟ್, ಪ್ರಮುಖರಾದ ಜತ್ತಪ್ಪ ಗೌಡ ಗಾಳಿಬೆಟ್ಟು, ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಡೊಂಬಯ್ಯ ಬೀರೊಳಿಗೆ, ಉದಯಾನಂದ ಅಬಿಕಾರ, ಆನಂದ ಗೌಡ ಇಡ್ಯಡ್ಕ, ಕೊರಗಪ್ಪ ಗೌಡ ಇಡ್ಯಡ್ಕ, ಬೆಳಂದೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಗಣೇಶ್ ಉದನಡ್ಕ ಮತ್ತಿತರರು ಉಪಸ್ಥಿತರಿದ್ದರು. ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ ಕರಂದ್ಲಾಜೆ ಸ್ವಾಗತಿಸಿದರು.