HomePage_Banner
HomePage_Banner
HomePage_Banner
HomePage_Banner

ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ | ಯುವ ಮೋರ್ಚಾ ಮಂಡಲದ ಪ್ರಬಲ ಮೋರ್ಚಾ – ಸಾಜ ರಾಧಾಕೃಷ್ಣ ಆಳ್ವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಮಂಡಲದ ಕಾರ್ಯಕಾರಣಿ ಸಭೆ ನ.27ರಂದು ಜಿ.ಎಲ್.ಸಭಾಂಗಣದಲ್ಲಿ ನಡೆಯಿತು.

ಸಭೆಯನ್ನು ಉದ್ಘಾಟಿಸಿದ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಮಾತನಾಡಿ ಬಿಜೆಪಿ ಯುವ ಮೋರ್ಚಾ ನಮ್ಮ ಮಂಡಲ ಮೋರ್ಚ ಗಳಲ್ಲಿ ಬಹಳ ಪ್ರಬಲ ಮೋರ್ಚಾ ವಾಗಿದೆ ಪಕ್ಷವು ತಮ್ಮನ್ನು ಗುರುತಿಸಿ ಯುವಮೋರ್ಚ ದಲ್ಲಿ ತಮಗೆ ಜವಾಬ್ದಾರಿಯನ್ನು ನೀಡಿದೆ ತಮಗೆ ನೀಡಿದ ಜವಾಬ್ದಾರಿಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ತಮ್ಮ ಕಾರ್ಯವೈಖರಿಯನ್ನು ಮಾಡಬೇಕಾಗಿದೆ ಇಂದಿನ ಯುವ ಮೋರ್ಚಾದ ಯುವಕರು ಮುಂದಿನ ಪಕ್ಷದ ಮಂಡಲ ಮಟ್ಟದ ಜವಾಬ್ದಾರಿಯನ್ನು ಕೂಡ ಪಡೆಯಬಹುದು, ಅಂತಹ ಜವಾಬ್ದಾರಿ ಪಡೆಯಬೇಕಾದರೆ ನೀವು ಇವಾಗಲೇ ನಿಮಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಾಗಿದೆ ಎಂದ ಅವರು ಕೆಲವು ಪಕ್ಷ ಸಂಘಟನೆ ಬಗ್ಗೆ ಮಾರ್ಗದರ್ಶನ ನೀಡಿದರು. ಬಿಜೆಪಿ ಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್ತ್ ನಾಯಕ್ ಅವರು ಮಾತನಾಡಿ ಯುವ ಮೋರ್ಚಾ ಮಾಡಬೇಕಾದ ಕೆಲವೊಂದು ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು ಬಿಜೆಪಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಸಹಜ್ ರೈ ಮತ್ತು ಪುತ್ತೂರು ಮಂಡಲ ಬಿಜೆಪಿ ಯುವ ಮೋರ್ಚಾ ಪ್ರಭಾರಿ ಯತಿಂದ್ರ ಕೊಚ್ಚಿ ಸಂದರ್ಭೋಚಿತವಾಗಿ ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ನವೀನ್ ಪಡ್ನೂರು ಅಧ್ಯಕ್ಷೀಯ ಮಾತನ್ನು ಮಾತನಾಡಿದರು. ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ರತನ್ ರೈ ಕುಂಬ್ರ ಅತಿಥಿಗಳನ್ನುಸ್ವಾಗತಿಸಿದರು ಕಾರ್ಯದರ್ಶಿ ಶ್ರೀಕಾಂತ್ ವಂದಿಸಿದರು ಕಾರ್ಯಕ್ರಮದಲ್ಲಿ ಯುವ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.