HomePage_Banner
HomePage_Banner
HomePage_Banner
HomePage_Banner

ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಅತ್ಯುತ್ತಮ ಸಾಧನೆ |ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರಶಸ್ತಿ ಪುರಸ್ಕಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ 2019-20 ಸಾಲಿನ ಸಾಧನೆಗಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಪ್ರಶಸ್ತಿ ಪುರಸ್ಕಾರ ನಡೆಯಿತು.

ನ.27ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ಗೌರಿ ಯಚ್, ಮತ್ತು ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಿದ್ಯಾ ಎಸ್,ರವರನ್ನು ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರಕುಮಾರ್ ಮತ್ತು ಆಡಳಿತ ಮಂಡಳಿಯವರು ಪುರಸ್ಕಾರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್‌ನ ನಿರ್ದೇಶಕರಾದ ಶಶಿಕುಮಾರ್ ಬಾಲ್ಯೊಟ್ಟು, ಎಸ್.ಬಿ.ಜಯರಾಮ ರೈ, ಸಹಕಾರಿ ಯೂನಿಯರ್ ಜಿಲ್ಲಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕಿ ಶ್ರೀಮತಿ ಮೋಹಿನಿ ದಿವಾಕರ್ ಉಪಸ್ಥಿತರಿದ್ದರು.

ರೂ.25.92 ಲಕ್ಷ ನಿವ್ವಳ ಲಾಭ ಗಳಿಸಿದ ಸಂಘ:
ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವು ಸತತ 12 ವರ್ಷಗಳಿಂದ ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿಯನ್ನು ಪಡೆದಿರುತ್ತದೆ. ೨೦೧೯-೨೦ ಸಾಲಿನಲ್ಲಿ ಸಂಘದಲ್ಲಿ ೧೯೨೫ ‘ಎ’ ತರಗತಿ ಸದಸ್ಯರನ್ನು ಮತ್ತು ರೂ 90.41 ಲಕ್ಷ ಪಾಲುಬಂಡವಾಳ ಹೊಂದಿರುತ್ತದೆ, ಸಂಘದಲ್ಲಿ 8.91 ಕೋಟಿ ಠೇವಣಿ ಸಂಗ್ರಹ ಹಾಗೂ ರೂ. ೭೫೭ ಕೋಟಿ ಸಾಲ ಹೊರಬಾಕಿ ಇರುತ್ತದೆ. ತಗಾದೆಯ ಶೇ. ೯೬,೬ ಸಾಲ ವಸೂಲಿಯಾಗಿರುತ್ತದೆ. ಸದಸ್ಯರಿಗೆ ಸಂಘದ ಸ್ವಂತ ಬಂಡವಾಳದಿಂದಲೇ ಸಾಲ ವಿತರಿಸಲಾಗಿದೆ. ಒಟ್ಟು ವಹಿವಾಟು ರೂ. ೪೭.೨೮ ಕೋಟಿ ಯಾಗಿದ್ದು, ರೂ. 1194 ಕೋಟಿ ದುಡಿಯುವ ಬಂಡವಾಳವಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಸಂಘವು ರೂ ೨೫.೯೨ ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ. ಸಂಘವು ಅವಿಭಜಿತ ಪುತ್ತೂರು ತಾಲೂಕಿನ ಕಾರ್ಯ ವ್ಯಾಪ್ತಿಯನ್ನೊಳಗೊಂಡಿದ್ದು, ಜಿಲ್ಲಾ ಮಟ್ಟದ ಕಾರ್ಯವ್ಯಾಪ್ತಿಗೆ ವಿಸ್ತರಿಸುವ ಯೋಜನೆಯಲ್ಲಿದೆ. ಪುತ್ತೂರು ಕೋರ್ಟು ಕಟ್ಟಡದ ಬಳಿ ಸಂಘದ ಪ್ರಧಾನ ಕಛೇರಿ ಮತ್ತು ದರ್ಜೆ ವೃತ್ತದ ಬಳಿ ದರ್ಜೆ ಶಾಖಾ ಕಛೇರಿ ಇವುಗಳು ಸ್ವಂತ ನಿವೇಶನದಲ್ಲಿ ಸ್ವಂತ ಕಟ್ಟಡದಲ್ಲಿದೆ. ಉಪ್ಪಿನಂಗಡಿ ಎದೆಯು ಬಾಡಿಗೆ ಕಟ್ಟಡದಲ್ಲಿ ವ್ಯವಹರಿಸುತ್ತಿದೆ. ನೆಹರು ನಗರ ಶಾಖೆ ಮತ್ತು ಪ್ರಧಾನ ಕಛೇರಿ ವ್ಯಾಪಾರ ವಿಭಾಗದಲ್ಲಿ ಪಡಿತರ ವಿತರಣೆ ಸೌಲಭ್ಯ ಕಲ್ಪಿಸಲಾಗಿದೆ. ಪ್ರಧಾನ ಕಛೇರಿ ಮತ್ತು ಉಪ್ಪಿನಂಗಡಿ ಶಾಖೆಯಲ್ಲಿ ಇ- ಸ್ಟಾಂಪಿಂಗ್ ವಿತರಣಾ ವ್ಯವಸ್ಥೆ ಇರುತ್ತದೆ. ದರ್ಬೆ ಶಾಖೆಯಲ್ಲಿ ಸೇಪ್ ಡೆಪಾಸಿಟ್ ಲಾಕರ್ ಸೌಲಭ್ಯವಿದೆ.

ಪ್ರಶಸ್ತಿಗಳು:
೫೫ನೇ ಅಖಿಲ ಭಾರತ ಸಹಕಾರಿ ಸಪ್ತಾಹ -2008 ರಲ್ಲಿ ಮತ್ತು ೬೭ನೇ ಅಖಿಲ ಭಾರತ ಸಹಕಾರಿ ಸಪ್ತಾಹ -೨೦೧೭ ರಲ್ಲಿ ೨ ನೇ ಬಾರಿ ಉತ್ತಮ ಸಹಕಾರ ಸಂಘದ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ., ಬೆಂಗಳೂರು ಇವರಿಂದ ಗುರುತಿಸಿ ಸನ್ಮಾನಿಸಲ್ಪಟ್ಟಿದೆ. ೨೦೧೯-೨೦ ನೇ ಸಾಲಿನ ಸಾಧನೆಗಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಗುರುತಿಸಿ ೨೭-೧೧-೨೦೨೦ ರಂದು ಪುರಸ್ಕಾರ ನೀಡಿ ಗೌರವಿಸಿದೆ. ಸಂಘದ ಆಡಳಿತ ಮಂಡಳಿಯಲ್ಲಿ ೧೩ ಮಂದಿ ಚುನಾಯಿತ ಸದಸ್ಯರಿದ್ದು, ಶ್ರೀಮತಿ ಗೌರಿ ಯ ೨: ಅಧ್ಯಕ್ಷರು, ಶ್ರೀಮತಿ ಉಮಾ: ಡಿ ಪ್ರಸನ್ನ, ಉಪಾಧ್ಯಕ್ಷರು, ಮತ್ತು ನಿರ್ದೇಶಕರಾಗಿ ಶ್ರೀಮತಿ ಮೋಹಿನಿ ದಿವಾಕರ್, ಪ್ರೇಮಲತಾ ರಾವ್, ಶಶಿಕಲಾ, ವತ್ಸಲಾರಾಜ್ಞಿ, ಮೋಹಿನಿ ಪಿ ನಾಯ್ಕ, ಉಷಾ ಮುಳಿಯ, ಯಶೋದಾ, ಜಯಶ್ರೀ ಎಸ್. ಶೆಟ್ಟಿ, ವಿಜಯ ಲಕ್ಷ್ಮೀ, ಇಂದಿರಾ ಪಿ ಆಚಾರ್ಯ, ಅರ್ಪಣಾ ಮಿಸ್, ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.