HomePage_Banner
HomePage_Banner
HomePage_Banner
HomePage_Banner

ಸಂಪ್ಯ ಹಾ.ಉ ಸಂಘದ ವಾರ್ಷಿಕ ಸಾಮಾನ್ಯ ಸಭೆ | ರೂ.2.95 ಲಕ್ಷ ಲಾಭ, ಶೇ.15 ಡಿವಿಡೆಂಡ್, 88 ಪೈಸೆ ಬೋನಸ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ಹಾಲು ಉತ್ಪಾದಕರ ಸಹಕಾರಿ ಸಂಘವು 2019-20ನೇ ಸಾಲಿನಲ್ಲಿ ರೂ.2,95,935.71 ಲಾಭಗಳಿಸಿದೆ. ಸಂಘ ಗಳಿಸಿದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.15 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀ. ಹಾಲಿಗೆ ೮೮ ಪೈಸೆ ಬೋನಸ್ ನೀಡಲಾಗವುದು ಎಂದು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಿಸಲಾಯಿತು.

ಸಭೆಯು ಸಂಘದ ಅಧ್ಯಕ್ಷ ಲಿಂಗಪ್ಪ ಗೌಡ ಕೊಲ್ಯರವರ ಅಧ್ಯಕ್ಷತೆಯಲ್ಲಿ ನ.27ರಂದು ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಂಘದಲ್ಲಿ 123 ಮಂದಿ ಸದಸ್ಯರಿದ್ದು ಒಟ್ಟು 48,300 ಪಾಲು ಬಂಡವಾಳವಿರುತ್ತದೆ. ವರದಿ ವರ್ಷದಲ್ಲಿ ಸಂಘವು ಹಾಲು ಉತ್ಪಾದಕರಿಂದ 1,61,296.30 ಲೀ. ಹಾಲು ಖರೀದಿಸಿದ 1,34,144.80 ಲೀ.ಹಾಲನನು ಒಕ್ಕೂಟಕ್ಕೆ ನೀಡಲಾಗಿದೆ. 750.2ಲೀ ಹಾಲು ಸ್ಯಾಂಪಲ್ ಹಾಲು ಆಗಿರುತ್ತದೆ. 31,058.5  ಲೀ. ಹಾಲನ್ನು ಸ್ಥಳಿಯವಾಗಿ ಮಾರಾಟ ಮಾಡಿದ್ದು 13,13,766 ಆದಾಯ ಬಂದಿರುತ್ತದೆ.

100 ಚೀಲ ಪಶು ಆಹಾರ, ೫೨೪ ಕೆ.ಜಿ ಲವಣ ಮಿಶ್ರಣ ಹಾಗೂ ೧೨೧೮.೨೪ ಜಂತು ಹುಳದ ಮಾತ್ರೆಯನ್ನು ಮಾರಾಟ ಮಾಡಲಾಗಿದೆ. ಸಂಘವು ವಾರ್ಷಿಕವಾಗಿ ಗಳಿಸಿದ ಲಾಭಾಂಶವನ್ನು ನಿಯಮಾನುಸಾರ ವಿಂಗಡಣೆ ಮಾಡಲಾಗಿದೆ ಎಂದು ಕಾರ್ಯದರ್ಶಿ ರಜತರವರು ವಾರ್ಷಿಕ ವರದಿಯಲ್ಲಿ ತಿಳಿಸಿದರು.

ದ.ಕ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಎಂ. ಶ್ರೀನಿವಾಸ ಮಾತನಾಡಿ, ಒಕ್ಕೂಟ ಹಾಗೂ ಸರಕಾರದಿಂದ ದೊರೆಯುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.

ಸನ್ಮಾನ, ಬಹುಮಾನ ವಿತರಣೆ
ಸಹಕಾರಿ ಸಂಘದ ಮಾಜಿ ಕಾರ್ಯದರ್ಶಿ ಕುಸುಮ ಪೂಕಳರವರನ್ನು ಸನ್ಮಾನಿಸಲಾಯಿತು. ವರದಿ ವರ್ಷದಲ್ಲಿ ಅತೀ ಹೆಚ್ಚು ಹಾಲು ನೀಡಿದ ವಸಂತ ಗೌಡ ಬಾರಿಕೆ(ಪ್ರ) ವಿಶಾಲಾಕ್ಷಿ ಕರಿಮೊಗರು(ದ್ವಿ), ವೆಂಕಪ್ಪ ಗೌಡ ಬಾರಿಕೆ(ತೃ), ಲಿಂಗಪ್ಪ ಗೌಡ(ಚ) ಹಾಗೂ ಜಯಂತಿ ಪೂಜಾರಿ(ಪ) ಹಾಗೂ ವರದಿ ವರ್ಷದಲ್ಲಿ 90 ದಿನಗಳಿಗೂ ಅಧಿಕ ನೀಡಿದ ಉತ್ಪಾದಕರಿಗೆ ಪ್ರೋತ್ಸಾಹಕರ ಬಹುಮಾನಗಳನ್ನು ನೀಡಲಾಯಿತು.

ಉಪಾಧ್ಯಕ್ಷೆ ಪುಷ್ಪಲತಾ ಹೊಸಮನೆ, ನಿರ್ದೇಶಕರಾದ ಕೆ. ಶಿವಪ್ರಸಾದ್ ಕುಕ್ಕಾಡಿ ಶಾಂತಿಕುಂಜ, ಹೇಮಲತ ಕುಕ್ಕಾಡಿ, ಆನಂದ ಗೌಡ ಕುಕ್ಕಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕರಾದ ಶಂಕರನಾರಾಯಣ ಭಟ್ ಪ್ರಾರ್ಥಿಸಿದರು. ಗೀತಾ ಬಾರಿಕೆ ಸ್ವಾಗತಿಸಿ, ವಿಜಯ ಬಿ.ಎಸ್ ವಂದಿಸಿದರು. ಕಾರ್ಯದರ್ಶಿ ರಜತ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಮೂಲಚಂದ್ರ ಕುಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು. ಹಾಲು ಪರೀಕ್ಷಕಿ ಪ್ರೇಮ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.