ಉಪ್ಪಿನಂಗಡಿ: ಬಿದ್ದು ಸಿಕ್ಕಿದ ಪರ್ಸ್ವೊಂದನ್ನು ವಾರೀಸುದಾರರಿಗೆ ತಲುಪಿಸುವ ಮೂಲಕ ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ)ಯ ದ.ಕ. ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್ ಮಾನವೀಯತೆ ಮೆರೆದಿದ್ದಾರೆ.
ಉಪ್ಪಿನಂಗಡಿಯಲ್ಲಿ ಪ್ರವಾಸಿಗರೋರ್ವರಿಗೆ ಹಣ ಹಾಗೂ ದಾಖಲೆಗಳಿದ್ದ ಪರ್ಸ್ವೊಂದು ಬಿದ್ದು ಸಿಕ್ಕಿದ್ದು, ಅದನ್ನು ಅವರು ಹೆದ್ದಾರಿ ಬದಿಯಲ್ಲಿರುವ ರೈತ ಸಂಘದ ಅಡಿಕೆ ಖರೀದಿ ಕೇಂದ್ರವನ್ನು ನೋಡಿ ಅಲ್ಲಿದ್ದ ರೂಪೇಶ್ ರೈಯವರಿಗೆ ನೀಡಿ ತೆರಳಿದ್ದರು. ಪರ್ಸ್ ಸಿಕ್ಕಿರುವ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟನೆ ಸಂದೇಶ ಕಳುಹಿಸಿದ್ದು, ಗುರುತು ಹೇಳಿ ಪರ್ಸ್ ಪಡೆದುಕೊಳ್ಳುವಂತೆ ತಿಳಿಸಿದ್ದರು. ಪರ್ಸ್ನ ನಿಜವಾದ ವಾರೀಸುದಾರ ಉಪ್ಪಿನಂಗಡಿಯ ಹೊಟೇಲ್ ಸಿಬ್ಬಂದಿ ಅನ್ಸಾರ್ ಅವರದ್ದಾಗಿದ್ದು, ಅವರು ಬಂದು ಪರ್ಸ್ ಪಡೆದುಕೊಂಡರು. ಬಿದ್ದು ಸಿಕ್ಕಿದ ಪರ್ಸ್ವೊಂದನ್ನು ವಾರೀಸುದಾರರಿಗೆ ಮರಳಿಸಿದ ಪ್ರವಾಸಿಗರು ಹಾಗೂ ರೂಪೇಶ್ ರೈ ಅವರು ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.