HomePage_Banner
HomePage_Banner
HomePage_Banner
HomePage_Banner

ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಮಾಂಡೋವಿಯಿಂದ ಗ್ರಾಮೀಣ ಮಹೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಂಡೋವಿ ಮೋಟಾರ್‍ಸ್ ಕಡಬ ಶಾಖೆಯ ವತಿಯಿಂದ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಮಾಂಡೋವಿಯಿಂದ ಗ್ರಾಮೀಣ ಮಹೋತ್ಸವ ನ. 27 ರಂದು ಆರಂಭಗೊಂಡಿದ್ದು, ನ.28ರಂದು ಕೊನೆಯ ದಿನವಾಗಿರುತ್ತದೆ.

ಗ್ರಾಮೀಣ ಮಹೋತ್ಸವವನ್ನು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಾಲಯದ ಮಾಜಿ ಆಡಳಿತ ಮೊಕ್ತೇಸರ ಜನಾರ್ಧನ ಗೌಡರವರು ಉದ್ಘಾಟಿಸಿ, ಮಾತನಾಡಿ ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ವಾಹನ ಖರೀದಿಯು ಒಂದಾಗಿದ್ದು, ಮಾರುತಿ ಸುಜುಕಿ ಸಂಸ್ಥೆಯ ವಾಹನಗಳು ಗ್ರಾಹಕರಿಗೆ ಕಡಿಮೆದರದಲ್ಲಿ ಮತ್ತು ಉತ್ತಮ ಗುಣ ಮಟ್ಟದಲ್ಲಿ ದೊರೆಯುತ್ತದೆ, ಅದರಲ್ಲೂ ಕಡಬ ಮಾಂಡೋವಿ ಮೋಟಾರ್‍ಸ್ ಸಂಸ್ಥೆಯು ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುತ್ತಿದೆ ಜೊತೆಗೆ ಲೋನ್ ವ್ಯವಸ್ಥೆಯನ್ನು ಮಾಡಿಕೊಡುವ ಮೂಲಕ ಕಡಬ ಪರಿಸರದಲ್ಲಿ ಜನರ ಪ್ರೀತಿಯನ್ನು ಗಳಿಸಿದೆ ಎಂದು ಹೇಳಿದರು.

ಮಾಂಡೋವಿ ಮೋಟಾರ್‍ಸ್‌ನ ಡಿಜಿಎಂ ಶಶಿಧರ್ ಕಾರಂತ್‌ರವರು ಮಾತನಾಡಿ ಗ್ರಾಹಕರ ಮನಸಿಗೆ ಖುಷಿ ಕೊಡುವ ಮಾರುತಿ ಸುಜುಕಿ ವಾಹನಗಳನ್ನು ಮಾಂಡೋವಿ ಸಂಸ್ಥೆಯು ಕ್ಲಪ್ತ ಸಮಯದಲ್ಲಿ ಒದಗಿಸಿಕೊಡುತ್ತದೆ. ಗ್ರಾಹಕರ ಇಷ್ಟದಂತೆ ಅವರಿಗೆ ಲೋನ್ ವ್ಯವಸ್ಥೆಯನ್ನು ಮಾಡಿಕೊಡುತ್ತವೆ. ಕಡಿಮೆ ಬಡ್ಡಿದರದಲ್ಲಿ ಲೋನ್ ವ್ಯವಸ್ಥೆ ಇರುವುದರಿಂದ ಹಾಗೂ ವಿಶೇಷವಾದ ಕೊಡುಗೆಗಳನ್ನು ಗ್ರಾಹಕರು ಗ್ರಾಮೀಣ ಮಹೋತ್ಸವದಿಂದ ಪಡೆಯಬಹುದು ಎಂದರು.
ವೆಂಕಟ್ರಮಣ ಕ್ರೆಡಿಟ್ ಕೋಒಪರೇಟಿವ್ ಸೊಸೈಟಿಯ ಕಡಬ ಶಾಖೆಯ ಮ್ಯಾನೇಜರ್ ಅನಿಲ್, ಬ್ಯಾಂಕ್ ಅಫ್ ಬರೋಡಾ ಕಡಬ ಶಾಖೆಯ ಮೇನೇಜರ್ ಚಂದ್ರಹಾಸ್, ಕಡಬ ಪಟ್ಟಣ ಪಂಚಾಯತ್‌ನ ಹರೀಶ್‌ರವರುಗಳು ಗ್ರಾಮೀಣ ಮಹೋತ್ಸವಕ್ಕೆ ಶುಭಕೋರಿದರು.

ಮಾಂಡೋವಿ ಮೋಟಾರ್‍ಸ್‌ನ ಸಿನಿಯರ್ ಮ್ಯಾನೇಜರ್ ಕಿಶನ್ ಶೆಟ್ಟಿ, ಎಜಿಎಂ ಸುಜಿತ್, ಮಾಂಡೋವಿ ಮೋಟಾರ್‍ಸ್‌ನ ಫೈನಾನ್ಸ್ ಮ್ಯಾನೇಜರ್ ಸುಪಾರ್ಶ್ವ, ಟ್ರೂವ್ಯಾಲ್ಯೂನ ಅಕ್ಷಯ್ ಕುಮಾರ್, ಮಾಂಡೋವಿ ಮೋಟಾರ್‍ಸ್‌ನ ಕಡಬ ಶಾಖೆಯ ಸಿನಿಯರ್ ರಿಲೇಷನ್‌ಶಿಫ್ ಮ್ಯಾನೇಜರ್ ಅರ್ಜುನ್ ಪುತ್ತೂರು ಹಾಗೂ ಕಡಬ ಶಾಖೆಯ ಸಿಬ್ಬಂಧಿಗಳು ಉಪಸ್ಥಿತರಿದ್ದರು. ಗ್ರಾಮೀಣ ಮಹೋತ್ಸವದಲ್ಲಿ ಮಾಜಿ ಸೈನಿಕ ಭಾಸ್ಕರ್ ಗೌಡರವರಿಗೆ ಹೊಸ ಕಾರಿನ ಕೀಲಿಕೈಯನ್ನು ಮಾಂಡೋವಿ ಸಂಸ್ಥೆಯ ಡಿಜಿಎಂ ಶಶಿಧರ್ ಕಾರಂತ್‌ರವರು ಹಸ್ತಾಂತರ ಮಾಡಿದರು. ಮಾಂಡೋವಿ ಮೋಟಾರ್‍ಸ್ ಅಸಿಸೆಂಟ್ ಮ್ಯಾನೇಜರ್ ಮುರಳಿಧರ್‌ರವರು ಕಾರ್‍ಯಕ್ರಮ ನಿರೂಪಿಸಿದರು.

ಗ್ರಾಮೀಣ ಮಹೋತ್ಸವಕ್ಕೆ ಗ್ರಾಹಕರ ಪ್ರೋತ್ಸಾಹ
ಕಡಬ ಮಾಂಡೋವಿ ಮೋಟಾರ್‍ಸ್ ಸಂಸ್ಥೆಯ ವತಿಯಿಂದ ಕಡಬದಲ್ಲಿ ಹಮ್ಮಿಕೊಂಡ ಗ್ರಾಮೀಣ ಮಹೋತ್ಸವಕ್ಕೆ ಗ್ರಾಹಕರಿಂದ ಉತ್ತಮ ಪ್ರೋತ್ಸಾಹ ದೊರೆತಿದೆ. ಮಾಂಡೋವಿ ಕಡಬ ಶಾಖೆಯಿಂದ ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಲೋನ್ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ(9686699039) ಸಂಪರ್ಕಿಸಬಹುದು – ಅರ್ಜುನ್ ಪುತ್ತೂರು, ಸಿನಿಯರ್ ರಿಲೇಷನ್‌ಶಿಫ್ ಮ್ಯಾನೇಜರ್ ಮಾಂಡೋವಿ ಮೋಟಾರ್‍ಸ್ ಕಡಬ ಶಾಖೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.