ಪುತ್ತೂರು: ಬಿಜೆಪಿ ಯುವ ಮೋರ್ಛಾದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ಯುವ ಉದ್ಯಮಿ ಅಕ್ಷಯ್ ರೈ ದಂಬೆಕ್ಕಾನ ನಿರ್ಮಾಣದಲ್ಲಿ ಮೂಡಿ ಬರಲಿರುವ ಸಾಮಾಜಿಕ ಪರಿವರ್ತನೆಯ ಸಂದೇಶಗಳನ್ನು ಸಾರುವ ೨೫ ಕಿರುಚಿತ್ರಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮೊದಲ ಚಿತ್ರದ ಚಿತ್ರೀಕರಣಕ್ಕೆ ಬಿಜೆಪಿ ಹಿರಿಯ ಮುಖಂಡ ಉರಿಮಜಲು ರಾಮ್ ಭಟ್ರವರು ದೀಪ ಬೆಳಗಿಸಿ ಶುಭ ಹಾರೈಸಿದರು. ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ನಿರ್ಭರ ಭಾರತ್ ಪರಿಕಲ್ಪನೆ, ಸ್ವಚ್ಛ ಭಾರತ್, ಅಚ್ಛೇ ದಿನ ಇತ್ಯಾದಿ ವಿಷಯಗಳನ್ನು ಮತ್ತು ಇತರ ಸಾಮಾಜಿಕ ಪರಿವರ್ತನೆಯ ಸಂದೇಶಗಳನ್ನು ಸಾರುವ ಕಿರುಚಿತ್ರಗಳು ಚಿತ್ರೀಕರಣಗೊಳ್ಳಲಿವೆ. ರತನ್ ಪೂಜಾರಿ ನಿರ್ದೇಶನದಲ್ಲಿ ಛಾಯಾಗ್ರಹಕ ಪ್ರಮೋದ್ರವರು ವಿವಿಧ ದೃಶ್ಯಗಳನ್ನು ಚಿತ್ರೀಕರಿಸಿಕೊಂಡರು.