ಮೃತ ಮೊಹಮ್ಮದ್ ಹಾಸೀಮ್
ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲ-ಪರ್ಲಡ್ಕ ಬೈಪಾಸ್ ರಸ್ತೆಯ ಶಿವನಗರ ಎಂಬಲ್ಲಿ ನ.೨೭ರಂದು ಬೈಕ್ ಮತ್ತು ಬೊಲೆರೊ ಜೀಪು ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಪರ್ಲಡ್ಕದ ಹಾಸೀಮ್ ಎಂಬವರು ಮೃತಪಟ್ಟಿದ್ದಾರೆ.
ಮೀನು ವ್ಯಾಪಾರಿ ಪರ್ಲಡ್ಕ ಹಾಜಿ ಹಂಝ ಅವರ ಪುತ್ರ ಮೊಹಮ್ಮದ್ ಹಾಸೀಮ್(19ವ)ಅವರು ಚಲಾಯಿಸುತ್ತಿದ್ದ ಬೈಕ್ ಮತ್ತು ಬೈಪಾಸ್ ರಸ್ತೆಗೆ ಎಂಟ್ರಿ ಕೊಡುತ್ತಿದ್ದ ಬೊಲೆರೊ ಜೀಪು ನಡುವೆ ಡಿಕ್ಕಿ ಸಂಭವಿಸಿದೆ.ಘಟನೆಯಿಂದಾಗಿ ಬೈಕ್ ಸವಾರ ಮೊಹಮ್ಮದ್ ಹಾಸೀಮ್ ಅವರು ತೀವ್ರ ಗಾಯಗೊಂಡಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಫಲಕಾರಿಯಾಗದೆ ಅವರು ರಾತ್ರಿ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಗಿರಿಯಪ್ಪ ಮತ್ತು ಸಿಬ್ಬಂದಿ ವೆಂಕಪ್ಪ ಅವರು ಭೇಟಿ ನೀಡಿ ಮಾಹಿತಿ ಪಡೆದು ಕೊಂಡಿದ್ದಾರೆ.
ಪೊಟೋ: ಬೈಕ್, ಬೊಲೆರೋ