HomePage_Banner
HomePage_Banner
HomePage_Banner
HomePage_Banner

ರೋಟರಿ ಕ್ಲಬ್ ಎಲೈಟ್‌ನಿಂದ ಮೊಬೈಲ್ ಕುರಿತ ‘ಕೇಳಿ ಮಕ್ಕಳೇ’ ಶೀರ್ಷಿಕೆಯ ಜಾಗೃತಿ ವಿಡಿಯೋ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಎಲೈಟ್ ನಿರ್ಮಿಸಿದ ‘ಕೇಳಿ ಮಕ್ಕಳೇ’ ಶೀರ್ಷಿಕೆಯ ಮೊಬೈಲ್ ಕುರಿತ ಜಾಗೃತಿ ವಿಡಿಯೋದ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಪುತ್ತೂರು-ಬೈಪಾಸ್ ರಸ್ತೆಯ ಆಶ್ಮಿ ಕಂಫರ್ಟ್‌ನ ಸಭಾಂಗಣದಲ್ಲಿ ಜರಗಿತು.

ರೋಟರಿ ಜಿಲ್ಲೆ ೩೧೮೧ ಇದರ ನಿಯೋಜಿತ ಗವರ್ನರ್ ಪ್ರಕಾಶ್ ಕಾರಂತ್‌ರವರು ‘ಕೇಳಿ ಮಕ್ಕಳೇ’ ಶೀರ್ಷಿಕೆಯ ಮೊಬೈಲ್ ಕುರಿತ ಜಾಗೃತಿ ವಿಡಿಯೋವನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಪಬ್ಲಿಕ್ ಇಮೇಜ್‌ನ ಡಿಸ್ಟ್ರಿಕ್ಟ್ ಚೇರ್‌ಮ್ಯಾನ್ ಸಂತೋಷ್ ಶೆಟ್ಟಿ, ಡಿಸ್ಟ್ರಿಕ್ಟ್ ಸೆಕ್ರೆಟರಿ ಆಸ್ಕರ್ ಆನಂದ್, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ನಾರಾಯಣ ಹೆಗ್ಡೆ, ಫಿಲೋಮಿಮಾ ಕಾಲೇಜಿನ ಉಪನ್ಯಾಸಕಿ ಭಾರತಿ ಎಸ್.ರೈ, ಕೋರ್ಪೊರೇಶನ್ ಬ್ಯಾಂಕ್‌ನ ಈಶ್ವರ್ ಬೆಡೇಕರ್, ಪತ್ರಕರ್ತ ಮೌನೇಶ್ ವಿಶ್ವಕರ್ಮ, ಆನೆಟ್ ಸೌಪರ್ಣಿಕ ಬೆಡೇಕರ್‌ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಕ್ಕಳು ಮೊಬೈಲ್ ಬಳಕೆಯಲ್ಲಿ ಎಚ್ಚರ ವಹಿಸಬೇಕು, ಅನಿಯಮಿತ ಮೊಬೈಲ್ ವೀಕ್ಷಣೆಯಂದ ಆರೋಗ್ಯಕ್ಕೆ ಸಮಸ್ಯೆ ಎದುರಾಗುತ್ತದೆ, ಮಕ್ಕಳ ಕಲಿಕೆಗೆ ಮೊಬೈಲ್ ಅನಿವಾರ್ಯವಾಗಿದ್ದರೂ ಹಿತಮಿತದ ಬಳಕೆಯಾಗಬೇಕು. ಪ್ರತಿ ಹಂತದಲ್ಲೂ ಮಕ್ಕಳು ಹಿರಿಯರ ಮಾತನ್ನು ಪಾಲಿಸಬೇಕು ಎನ್ನುವ ಜಾಗೃತ ಸಂದೇಶವನ್ನು ಈ ವಿಡಿಯೋ ಹೊಂದಿದೆ. ರೋಟರಿ ಎಲೈಟ್ ಸದಸ್ಯ, ಪತ್ರಕರ್ತ ಮೌನೇಶ್ ವಿಶ್ವಕರ್ಮರವರು ರಚಿಸಿರುವ ಹಾಡನ್ನು ಸೌಪರ್ಣಿಕ ಬೆಡೇಕರ್‌ರವರು ಹಾಡಿ, ಅಭಿನಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.