ಆಲಂಕಾರು: ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆಲಂಕಾರು ಮತ್ತು ಶರವೂರು ಒಕ್ಕೋಟದ ವತಿಯಿಂದ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಿದರು. ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಅಡಳಿತ ಮಂಡಳಿಯ ಅದ್ಯಕ್ಷರಾದ ದಯಾನಂದ ರೈ ಮನವಳಿಕೆ ಗುತ್ತು ರವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯವರು ಪ್ರತಿ ವರ್ಷ ದುರ್ಗಾ೦ಬಾ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿಕೊಂಡು ಬರುವುದಕ್ಕೆ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟದ ಪದಾಧಿಕಾರಿಗಳಿಗೆ ಮತ್ತು ಸರ್ವ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಪರಿಸರವನ್ನು ಸ್ವಚ್ಛತೆಗೊಳಿಸುವುದರಿಂದ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ. ಶಾಲಾ ಪರಿಸರ ಸ್ವಚ್ಛತೆಯಿಂದ ವಿದ್ಯಾರ್ಥಿಗಳಿಗೆ ಕಲಿಕೆಗೆ,ಶುಭ್ರ ವಾತವರಣ ನಿರ್ಮಿಸಿದಂತಾಗುತ್ತದೆ ಎಂದರು.
ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಮೇದಪ್ಪ, ವಲಯ ಮೇಲ್ವಿಚಾರಕ ನವೀನ್ ರವರ ಮಾರ್ಗದರ್ಶನದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಆಲಂಕಾರು ಒಕ್ಕೋಟದ ಅದ್ಯಕ್ಷೆ ಮೀನಾಕ್ಷಿ, ಶರವೂರು ಒಕ್ಕೋಟದ ಅದ್ಯಕ್ಷರಾದ ಹರೀಶ್ ಮತ್ತು ಪದಾದಿಕಾರಿಗಳು ಮತ್ತು ಸರ್ವ ಸದಸ್ಯರು ,ಸೇವಾ ಪ್ರತಿನಿಧಿ ಗಳಾದ ಶಾರದ,ಪ್ರೇಮಾ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸಂಸ್ಥೆಯ ಮುಖ್ಯಗುರುಗಳಾದ ಸತ್ಯನಾರಾಯಣ ಭಟ್ಟ್ ಸ್ವಾಗತಿಸಿ, ಪ್ರಾಂಶುಪಾಲರಾದ ನವೀನ್ ರೈ ಧನ್ಯವಾದ ಸಮರ್ಪಿಸಿದರು. ಅಡಳಿತ ಮಂಡಳಿಯ ಸದಸ್ಯರಾದ ರಾಮರಾಜ ನಗ್ರಿ,ಶಾಲಾ ಬೋಧಕ,ಬೋದಕೇತರ ವರ್ಗದವರು ಒಟ್ಟು ಕಾರ್ಯಕ್ರಮದಲ್ಲಿ ಸಹಕರಿಸಿದರು.