ಪುತ್ತೂರು:ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ವಾಸುದೇವ ಪೂಜಾರಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹರೀಶ್ ಜಿ.ಪಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 13 ಸ್ಥಾನಗಳನ್ನು ಹೊಂದಿರುವ ನಿರ್ದೇಶಕ ಮಂಡಳಿಗೆ 7 ಸಾಮಾನ್ಯ ಸ್ಥಾನ, 2 ಮಹಿಳಾ, ತಲಾ ಒಂದೊಂದು ಸ್ಥಾನಗಳನ್ನು ಹಿಂದುಳಿದ ವರ್ಗ ಎ, ಹಿಂದುಳಿದ ವರ್ಗ ಬಿ, ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿದೆ. ಸಾಮಾನ್ಯ ಸ್ಥಾನದಿಂದ ಆನಂದ ಗೌಡ, ಕೊಗ್ಗು ಮಣಿಯಾಣಿ ಗುಮ್ಮಟೆಗದ್ದೆ, ತಿಮ್ಮಪ್ಪ ಗೌಡ ಗುಮ್ಮಟೆಗದ್ದೆ, ನಾರಾಯಣ ಭಟ್ ಗುಮ್ಮಟೆಗದ್ದೆ, ಲೋಕನಾಥ ಸಿ. ಗುಮ್ಮಟೆಗದ್ದೆ, ಹರೀಶ್ ಜಿ.ಪಿ ಗುಮ್ಮಟೆಗದ್ದೆ, ಹೊನ್ನಪ್ಪ ಗೌಡ ಗುಮ್ಮಟೆಗದ್ದೆ, ಮಹಿಳಾ ಸ್ಥಾನದಿಂದ ಕಮಲ, ಕವಿತಾ, ಹಿಂದುಳಿದ ವರ್ಗ ಎ ಸ್ಥಾನದಿಂದ ವಾಸುದೇವ ಪೂಜಾರಿ, ಹಿಂದುಳಿದ ವರ್ಗ ಬಿ ಸ್ಥಾನದಿಂದ ದಿನೇಶ್ ಜಿ., ಕಲ್ಪಣೆ, ಪರಿಶಿಷ್ಟ ಜಾತಿ ಸ್ಥಾನದಿಂದ ಲೋಕಯ್ಯ ನಾಯ್ಕ ಗುಮ್ಮಟೆಗದ್ದೆ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ಸ್ಥಾನದಿಂದ ಅರ್ಹ ಅಭ್ಯರ್ಥಿಗಳು ಇಲ್ಲದೇ ಇರುವುದಿರಿಂದ ಯಾವುದೇ ನಾಮಪತ್ರ ಸ್ವೀಕೃತಗೊಂಡಿರುವುದಿಲ್ಲ.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ನ.೨೬೭ರಂದು ಸಂಘದಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವಾಸುದೇವ ಪೂಜಾರಿಯವರನ್ನು ಹರೀಶ್ ಜಿ.ಪಿ ಸೂಚಿಸಿ, ನಾರಾಯಣ ಭಟ್ ಅನುಮೋದಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹರೀಶ್ ಜಿ.ಪಿಯವರನ್ನು ಹೊನ್ನಪ್ಪ ಗೌಡ ಸೂಚಿಸಿ, ದಿನೇಶ್ ಕಲ್ಪಣೆ ಅನುಮೋದಿಸಿದರು. ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್ ಚುನಾವಣಾಧಿಕಾರಿಯಾಗಿದ್ದರು. ಕಾರ್ಯದರ್ಶಿ ಅರುಣಾ ಹಾಗೂ ಸಿಬಂದಿ ಸಹಕರಿಸಿದರು.