ಪುತ್ತೂರು: ದೇಸೀ ಉತ್ಪನ್ನಗಳಿಗೆ ದನಿಯಾಗಲು ಯುವ ಬ್ರಿಗೇಡ್ನ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ವಿನೂತನ ಪ್ರಯತ್ನವಾಗಿರುವ ೫ನೇ ಆಧಾರ ಸ್ಥಂಭ ಎಂಬ 4ನೇ ಕಾರ್ಯಕ್ರಮದಲ್ಲಿ ಪುತ್ತೂರಿನ ಉದ್ಯಮಿ ಎಸ್.ಆರ್.ಕೆ.ಲ್ಯಾಡರ್ಸ್ನ ಕೇಶವ ಎ ಅವರ ಯಶೋಗಾಥೆ ಅವರು ಮೂಡಿ ಬಂದಿದ್ದಾರೆ.
ಯುವ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದವತಿಯಿಂದ ನಡೆಯುತ್ತಿರುವ ಫಿಪ್ತ್ ಪಿಲ್ಲರ್ ಎಂಬ ಕಾರ್ಯಕ್ರಮ ನ.೨೮ರಂದು ಬೆಂಗಳೂರಿನಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ಕೊರೋನಾ ಸಂದರ್ಭದಲ್ಲಿ ಉದ್ಯಮ ರಂಗದಲ್ಲಿ ಕೊರೋನಾ ವಾರಿಯರ್ಸ್ ಆಗಿ ಯಶಸ್ವಿ ಉದ್ಯಮ ಮತ್ತು ನೂರಾರು ನೌಕರರಿಗೆ ಉತ್ತಮ ಜೀವನ ಕಲ್ಪಿಸಿಕೊಟ್ಟ ಮುಕ್ರಂಪಾಡಿಯ ಎಸ್.ಆರ್.ಕೆ. ಲ್ಯಾಡರ್ಸ್ನ ಕೇಶವ ಎ. ಅವರ ಯಶೋಗಾಥೆ ಮಾಡಿದರು. ಯುವ ಬ್ರಿಗೇಡ್ನ ಚಕ್ರವರ್ತಿ ಸೂಲಿಬೆಲೆಯವರು ಮಾತನಾಡಿ ಉದ್ಯಮವನ್ನು ಕಟ್ಟಬೇಕೆನ್ನುವವರು, ಉದ್ಯಮವನ್ನು ಕಟ್ಟಿ ಒಂದು ಮಟ್ಟದ ಯಶಸ್ಸನ್ನು ಕಂಡು ಮುಂದಿನ ಹಂತಕ್ಕೆ ಹೋಗಬೇಕೆನ್ನುವವರು, ಈಗಾಗಲೇ ಶಿಕ್ಷಣ ಪಡೆದು ಮುಂದೆ ಏನಾದರೂ ಮಾಡಬೇಕೆನ್ನುವರಿಗಾಗಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ಕಳೆದ ಆರು ವರ್ಷಗಳಿಂದ ನೂರಾರು ಭಿನ್ನ ಭಿನ್ನ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದರು.