ಉಪ್ಪಿನಂಗಡಿ: ವಿಜೃಂಭಣೆಯಿಂದ ಬ್ರಹ್ಮಕಲಶಗೊಂಡ ಬೆಳ್ತಂಗಡಿ ತಾಲೂಕಿನ ಶ್ರೀ ರುದ್ರಗಿರಿ ಕ್ಷೇತ್ರದ ಶ್ರೀ ಮೃತ್ಯುಂಜಯ ದೇವಾಲಯದಲ್ಲಿ ಶ್ರೀ ದೇವರಿಗೆ ಬ್ರಹ್ಮಶ್ರೀ ವೇ.ಮೂ. ಬಿ. ಕೇಶವ ಜೋಗಿತ್ತಾಯರು ಬಂಗಲಾಯಿ ಮತ್ತು ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ದೃಢಕಲಶ ನಡೆಯಿತು.
ಈ ಸಂದರ್ಭ ದೇವಾಲಯದ ವ್ಯವಸ್ಥಾಪನಾ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ, ಪದಾಧಿಕಾರಿಗಳಾದ ಅನಂತರಾಮ ಜೋಗಿತ್ತಾಯ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಗಿರಿಯಪ್ಪ ಗೌಡ, ಯೊಗೀಶ ಅಳಕೆ, ಚಂದ್ರಹಾಸ ಪಕಳ, ಮಾಧವ ಜೋಗಿತ್ತಾಯ, ರೋಹಿಣಿ, ರಂಗಪ್ಪ, ಶ್ರೀಧರ, ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ಶ್ರೀ ದೇವಾಲಯದ ಮುಖ್ಯ ಅರ್ಚಕ ಅಶೋಕ್ ಭಟ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.