HomePage_Banner
HomePage_Banner
HomePage_Banner
HomePage_Banner

ನೆಟ್ಟಣಿಗೆ ಮುಡ್ನೂರು ಜಿ.ಪಂ ಕ್ಷೇತ್ರದ 5 ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಗ್ರಾಮಗಳ ಅಭಿವೃದ್ದಿಗೆ ಸರಕಾರ ಹೆಚ್ಚಿನ ಅನುದಾನವನ್ನು ಮೀಸಲಿಡಬೇಕು: ಅನಿತಾ ಹೇಮನಾಥ ಶೆಟ್ಟಿ

ಶಂಕುಸ್ಥಾಪನೆಗೊಂಡ ಕಾಮಗಾರಿ
ಅರಿಯಡ್ಕ ಗ್ರಾಮದ ಪಶು ಆಸ್ಪತ್ರೆಯದುರಸ್ಥಿ
ಮಾಡ್ನೂರು ಗ್ರಾಮದ ಪ್ರಾಥಮಿ ಉಪ ಆರೋಗ್ಯ ಕೆಂದ್ರದ ಆವರಣಗೋಡೆ
ಬಡಗನ್ನೂರು ಗ್ರಾಮದ ಕೊಯಿಲ ಮಸೀದಿ ಬಳಿ ಆವರಣಗೋಡೆ
ಪಡುವನ್ನೂರು ಗ್ರಾಮದ ಕನ್ನಡ್ಕದಲ್ಲಿ ತಡೆಗೋಡೆ ರಚನೆ
ಬಡಗನ್ನೂರು ಗ್ರಾಮದ ಸುಳ್ಯಪದವು ನೀರಿನ ಟ್ಯಾಂಕ್ ನಿರ್ಮಾಣ
ನೆ.ಮುಡ್ನೂರು ಗ್ರಾಮದ ಮೇನಾಲ ಸುರುಲಿಮೂಲೆ ರಸ್ತೆ ಕಾಂಕ್ರೀಟ್
ನೆ.ಮುಡ್ನೂರು ಕುದ್ರೋಳಿ ಚರಂಡಿ ನಿರ್ಮಾಣ ಕಾಮಗಾರಿ
ನೆ.ಮುಡ್ನೂರು ಗ್ರಾಮದ ಮಾಡದಗುಡ್ಡೆ ಮೋರಿ ರಚನೆ

ಪುತ್ತೂರು: ಗ್ರಾಮಗಳು ಅಭಿವೃದ್ದಿಯಾದರೆ ಮಾತ್ರ ದೇಶ ಅಭಿವೃದ್ದಿಯಾಗಲು ಸಾಧ್ಯವಾಗುತ್ತದೆ, ಇದು ಅಫಲವಾಗಬೇಕಾದರೆ ಆಳುವ ಸರಕಾರಗಳು ಗ್ರಾಮಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನವನ್ನು ನೀಡುವ ಕಾರ್ಯವನ್ನು ಮಾಡಬೇಕಿದೆ ಎಂದು ನೆಟ್ಟಣಿಗೆ ಮುಡ್ನೂರು ಜಿಲ್ಲಾಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಹೇಳಿದರು.

ಅವರು ಜಿಲ್ಲಾಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಅರಿಯಡ್ಕ, ಮಾಡ್ನೂರು, ನೆಟ್ಟಣಿಗೆ ಮುಡ್ನೂರು, ಪಡುವನ್ನೂರು ಹಾಗೂ ಬಡಗನ್ನೂರು ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯ ನೆರವೇರಿಸಿ ಮಾತನಾಡಿದರು.

ದೇಶದ ಜನಸಂಖ್ಯೆಯ ಬಹುತೇಕ ಮಂದಿ ಗ್ರಾಮೀಣ ಭಾಗದಲ್ಲೇ ವಾಸ ಮಾಡುತ್ತಾರೆ. ಇಂದು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದೆ. ರಸ್ತೆ, ಕುಡಿಯುವ ನೀರು ಸೇರಿದಂತೆ ಅನೇಕ ಬೇಡಿಕೆಗಳು ದಿನದಿಂದ ದಿನಕ್ಕೆ ಹೆಚ್ಚಗುತ್ತಲೇ ಇದೆ. ಗ್ರಾಮಸ್ಥರ ಬೇಡಿಕೆ ಈಡೇರಿಸಬೇಕಾದುದು ಜನಪ್ರತಿನಿಧಿಯ ಕರ್ತವ್ಯವಾಗಿದೆ. ಬೇಡಿಕೆಯನ್ನು ಈಡೇರಿಸಬೇಕಾದರೆ ಅನುದಾನದ ಕೊರತೆಯಾಗಬಾರದು. ಈ ನಿಟ್ಟಿನಲ್ಲಿ ಸರಕಾರ ಗ್ರಾಮೀಣ ಭಾಗದ ಮೂಲಭೂತ ಸೌಕರ್ಯಕ್ಕೆಂದೇ ವಿಶೇಷ ಅನುದಾನವನ್ನು ನೀಡಬೇಕು. ಕನಿಷ್ಠ ಅನುದಾನದಿಂದ ಯಾವ ಕಾಮಗಾರಿಯನ್ನು ಪೂರ್ತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಉದ್ಘಾಟನೆಗೊಂಡ ಕಾಮಗಾರಿ
ನೆಟ್ಟಣಿಗೆ ಮುಡ್ನೂರು ಮಾಡದ ಗುಡ್ಡೆರಸ್ತೆ ಕಾಂಕ್ರೀಟ್ ನೆ.ಮುಡ್ನೂರು ಗ್ರಾಮದ ನಾಗನ ದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಇದರ ಉದ್ಘಾಟನೆ ನಡೆಯಿತು.

ನಾಗನಡ್ಕದ ಬಹುವರ್ಷದ ಬೇಡಿಕೆ
ನಾಗನಡ್ಕ ಪರಿಸರದಲ್ಲಿ ಕುಡಿಯುವ ನೀರು ವಿತರಣೆಗೆ ಸುಮಾರು ೧೦ ಲಕ್ಷ ರೂ ವೆಚ್ಚದಲ್ಲಿ ಕುಡಿಯುವ ನೀರಿನನ ಟ್ಯಾಂಕ್ ನಿರ್ಮಾಣಗೊಂಡಿದೆ. ಇದು ಇಲ್ಲಿನ ನಿವಾಸಿಗಳ ಬಹುವರ್ಷಗಳ ಬೇಡಿಕೆಯಾಗಿತ್ತು. ಬೇಸಿಗೆಯಲ್ಲಿ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು ಅದನ್ನು ಪರಿಹರಿಸಲಾಗಿದೆ ಎಂದು ಅನಿತಾ ಹೇಮನಾಥ ಶೆಟ್ಟಿ ಹೇಳಿದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಗ್ರಾಮಗಳ ಅಭಿವೃದ್ದಿಗೆ ವ್ಯಯಿಸಲಾಗುವುದು ಎಂದು ಭರವಸೆ ನೀಡಿದರು.

ಭರವಸೆಯನ್ನು ಈಡೇರಿಸಿದ್ದಾರೆ: ಇಕ್ಬಾಲ್ ಹುಸೇನ್
ಕಳೆದ ಜಿಪಂ ಚುನಾವಣೆಯ ಸಂದರ್ಭದಲ್ಲಿ ಗ್ರಾಮಸ್ಥರಿಗೆ ನೀಡಿದ ಭರವಸೆಯನ್ನು ಬಹುತೇಕವಾಗಿ ಈಡೇರಿಸಿದ್ದಾರೆ. ಗ್ರಾಮದಲ್ಲಿ ಇನ್ನೂ ಅನೇಕ ಕಾಮಗಾರಿಗಲ ಬೇಡಿಕೆ ಇದೆ. ಉಳಿದ ಜನಪ್ರತಿನಿಧಿಗಳೂ ಈ ಕ್ಷೇತ್ರಕ್ಕೆ ಅನುದಾನವನ್ನು ನೀಡಬೇಕಿದೆ. ನೆ. ಮುಡ್ನೂರು ಜಿಪಂ ಕ್ಷೇತ್ರದ ಎಲ್ಲಾ ಗ್ರಾಮಗಳ ಸಮರ್ಪಕ ಅಭಿವೃದ್ದಿಯೊಂದೇ ನಮ್ಮ ಗುರಿಯಾಗಬೇಕು, ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಕೊಟ್ಟ ಭರವಸೆಯನ್ನು ಈಡೇರಿಸುತ್ತಿರುವ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅರಿಯಡ್ಕ ಗ್ರಾಪಂ ಮಾಜಿ ಉಪಾಧ್ಯಕ್ಷ ಇಕ್ಬಾಲ್ ಹುಸೇನ್ ಹೇಳಿದರು.

ಕಾರ್ಯಕ್ರಮದಲ್ಲಿ ಅರಿಯಡ್ಕ ಗ್ರಾಪಂ ಮಾಜಿ ಸದಸ್ಯ ರವೀಂದ್ರಪೂಜಾರಿ ಮಂಜಕೊಟ್ಯ, ನವೀನಾ ಬಿ.ಡಿ, ಅರಿಯಡ್ಕ ಆರೋಗ್ಯ ಸಹಾಯಕಿ ಎಂ ನವ್ಯಾ.ಆಶಾಕಾರ್ಯರ್ತೆ, ಹಿರಿಯ ಪಶು ವೈದ್ಯಕೀಯ ಪರಿವಿಕ್ಷಕ ವೀರಪ್ಪ ಬಿ ಜಮಾದಾರ್, ಗ್ರಾಪಂ ಮಾಜಿ ಉಪಾಧ್ಯಕ್ಷ ಇಕ್ಬಾಲ್ ಹುಸೇನ್, ಬಡಗನ್ನೂರು ಮಾಜಿ ಗ್ರಾಪಂ ಸದಸ್ಯರಾದ ಗುರುಪ್ರಸಾದ್ ರೈ,ಅನಿಲೆ ಜಯರಾಜ್ ರೈ, ಬಡಗನ್ನೂರು ಮಾಜಿ ಗ್ರಾಪಂ ಸದಸ್ಯ ಗೋಪಾಲಕೃಷ್ಣ, ಅನ್ವರ್, ನಾರಾಯಣ ಭಟ್, ಉಮೇಶ್ ಭಟ್ ಕನ್ನಡ್ಕ, ನವೀನ ಭಟ್ ಕನ್ನಡ್ಕ, ನೆಟ್ಟಣಿಗೆ ಮುಡ್ನೂರು ಗ್ರಾಪಂ ಉಪಾಧ್ಯಕ್ಷ ಶ್ರೀರಾಂ ಪಕ್ಕಳ, ಮಾಜಿ ಅಧ್ಯಕ್ಷ ರಾಮಮೇನಾಲ, ಸುರೇಶ್ ನಾಯ್ಕ, ಅಬ್ದುಲ್ ರಹಿಮಾನ್ ಹಾಜಿ ಮೇನಾಲ ,ನೆಟ್ಟಣಿಗೆಮುಡ್ನೂರು ಗ್ರಾಪಂ ಮಾಜಿ ಸದಸ್ಯೆ ಲೀಲಾವತಿ ಕಲ್ಲಾಜೆ, ಕೆಪಿಸಿಸಿ ಸಾಮಾಜಿಕ ಜಾಲತಾಣ ಕಾರ್ಯದರ್ಶಿ ಕೆ ಸಿ ಅಶೋಕ್, ಐತಪ್ಪ ನಾಯ್ಕ ಪಾಪೆಮಜಲು, ರವಿ ಜಾರತ್ತಾರು, ಹರೀಶ್ ರೈ ಬಳ್ಲಿಕಾನ, ಹರೀಶ್ ಕೋರಿಕ್ಕಾರ್, ಇಸ್ಮಾಯಿಲ್ ಹೊಸಗದ್ದೆ, ವೆಂಕಟರಮಣ ಗೌಡ ದೇರ್ಲ, ಸ್ಥಳೀಯರಾದ ತಾರನಾಥ್, ರಾಜೇಶ್, , ಅಬ್ದುಲ್ಲ ಖಾದರ್ ಕಟ್ಟಪುಣಿ, ಸುಂದರ ಜಿ, ಸತೀಶ್, ಗಿರೀಶ್ ರೈ ಮರಕ್ಕಡ ಗೋಪಾಲ ಬೆಲ್ಲಿಚಡವು, ನಾಗೇಶ್ ಬೆಲ್ಲಿಚಡವು, ಬಾಬು ಪಾಟಾಳಿ, ನಾಸಿರ್ ಸಾಹೇಬ್, ಇ ಪಿ ಮಹಮ್ಮದ್, ಇ ಪಿ ಹಸನ್,ವಿಜಯಾ, ಮೋಹನ್ ನಾಯರ್, ಸುರೇಶ್ ನಾಯಕ್ ಶವಿಪ್ರಸಾದ್, ರಾಮಣ್ಣ ರೈ ನಾಗನಡ್ಕ, ಇರ್ಫಾನ್ ಕಲ್ಲಾಜೆ,ಶಶಿ, ಶಿವಪ್ಪಪೂಜಾರಿ, ವಿಶ್ವನಾಥ ಪೂಜಾರಿ, ವಸಂತ ಗೌಡ, ರಾಜೇಶ್ ನಡುಬೈಲು, ಮಾಲಿನಿ ಕಲ್ಲಾಜೆ, ಪುಷ್ಪಾವತಿ, ರಘು, ಲೀಲಾ ಆರ್ ರೈ ನಡುಬೈಲು, ಶಾರದಾ ಮಾದವ ಆಚಾರಿ, ರಾಮಯ್ಯ ರಐ ನಾಗನಡ್ಕ, ಶಾನ್ವಿ ಗೌರೀಶ ಆಚಾರ್ಯ,ಸೇರಿದಂತೆ ಗ್ರಾಮಗಳ ಫಲಾನುಭವಿಗಳು ಉಪಸ್ತಿತರಿದ್ದರು.ದಿನೇಶ್ ಪಾಣಾಜೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.