ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಕಾಂತಿಜಾಲು ಅಂಗನವಾಡಿ ಕೇಂದ್ರದಲ್ಲಿ ನ.27ರಂದು ಸಾರ್ವಜನಿಕರಿಗೆ ಕೋವಿಡ್ ಪರೀಕ್ಷೆ ನಡೆಸಲಾಯಿತು.
ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಡೈಸಿ, ಲ್ಯಾಬ್ ಟೆಕ್ನಿಷಿಯನ್ ರೂಪಾ, ಕಿರಿಯ ಆರೋಗ್ಯ ಸಹಾಯಕಿಯರಾದ ಸಾರಮ್ಮ, ಗಾಯತ್ರಿ, ಸಿಬಂದಿ ಮುರಳಿಧರ, ಆಶಾ ಕಾರ್ಯಕರ್ತೆಯರಾದ ಮೋಹಿನಿ, ಮಮತಾ, ಅಂಗನವಾಡಿ ಕಾರ್ಯಕರ್ತೆ ಗೌರಿ ಸಹಾಯಕಿ ಹರಿಣಾಕ್ಷಿ ಸಹಿತ ಸುಮಾರು 90 ಮಂದಿ ಭಾಗವಹಿಸಿದ್ದರು.