ಆಲಂಕಾರು: ಗ್ರಾಮ ವಿಕಾಸ ಮಂಗಳೂರು ವಿಭಾಗ, ವಿವೇಕಾನಂದ ವಿಧ್ಯಾವರ್ಧಕ ಸಂಘ (ರಿ) ಪುತ್ತೂರು, ಸಹಕಾರ ಭಾರತಿ ದ.ಕ ಜಿಲ್ಲೆ , ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು, ಶ್ರೀ ಭಾರತಿ ಹಿ.ಪ್ರಾ.ಶಾಲೆ ಆಲಂಕಾರು, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಆಲಂಕಾರು ಇವರ ಸಹಯೋಗ ದೊಂದಿಗೆ ಆಲಂಕಾರು ಭಾರತೀ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರಿನಲ್ಲಿ ನವೆಂಬರ್ 30 ರಿಂದ ಡಿ. 6 ರತನಕ ಬೆಳಿಗ್ಗೆ 9:30ರಿಂದ ಸಂಜೆ 4:00 ಗಂಟೆಯ ತನಕ ನಡೆಯುವ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಂಗಾರ ಎಸ್ ರವರು ಹಾಗು ವಿವಿಧ ಗಣ್ಯರ ಸಮ್ಮಖದಲ್ಲಿ ಉದ್ಘಾಟನೆ ನಡೆಯಲಿದೆ.
ತರಬೇತಿಯನ್ನು ನುರಿತ ತರಬೇತುದಾರರಿಂದ ನೀಡಲಿದ್ದು ,ಉದ್ಯಮಿಗಳಿಂದ ನೇರ ತರಬೇತಿ , ಕ್ಷೇತ್ರ ಸಂದರ್ಶನ ದ ಮೂಲಕ ತರಬೇತಿ ಕಾರ್ಯಗಾರ ನಡೆಯಲಿದ್ದು ಮದ್ಯಾಹ್ನ ಊಟದ ವ್ಯವಸ್ಥೆ ಕೂಡ ಇದೆ. ಕೃಷಿ ಯಂತ್ರೋಪಕರಣಗಳ ಬಳಕೆ ಹಾಗು ದುರಸ್ತಿ ತರಬೇತಿ , ಕೃಷಿ ಕಸಿ ಕಟ್ಟುವುದು,ಅಣಬೆ ಕೃಷಿ, ಜೇನುಕೃಷಿ ತರಬೇತಿ,ಹೈನುಗಾರಿಕೆ , ಮೀನುಗಾರಿಕೆ, ಜೇನು,ಕೋಳಿ, ಕುರಿ ಮತ್ತು ಆಡು ಸಾಕಣಿಕ ತರಬೇತಿ, ಪ್ಲಂಬಿಂಗ್ ಮತ್ತು ಇಲೆಕ್ಟೀಶಿಯನ್ ತರಬೇತಿ, ವಿದ್ಯುತ್ ಉಪಕರಣಗಳ (ಮಿಕ್ಸಿ, ಗ್ರೈಂಡರ್,ಪಂಪ್,ಸಬ್ ಮರ್ಸಿಬಲ್, ಗ್ಯಾಸ್ ಸ್ಟವ್ ರಿಪೇರಿ) ದುರಸ್ತಿ ಬಗ್ಗೆ ತರಬೇತಿ, ಪ್ಯಾಷನ್ ಡಿಸೈನಿಂಗ್ (ಟೈಲರಿಂಗ್,ಕಸೂತಿ,ಸೀರೆಗೊಂಡೆ, ಎಂಬ್ರಾಯಿಡರಿ) ಪುಡ್ ಟೆಕ್ನಾಲಜಿ ( ಅಹಾರ ಮೌಲ್ಯವರ್ಧನೆ,ಹಪ್ಪಳ,ಸಂಡಿಗೆ ಇತ್ಯಾದಿ ತಯಾರಿಸುವ ಬಗ್ಗೆ ತರಬೇತಿ) ಕರಕುಶಲ ಸಾಮಾಗ್ರಿಗಳ ತಯಾರಿಕಾ ತರಬೇತಿ ನಡೆಯಲಿದೆ.ತರಬೇತಿ ಪಡೆಯುವವರು 6360218072, 7760421005, 7624843844, 9141825236, 9482120261 ಮೋ. ಸಂಖ್ಯೆಗೆ
ಸಂಪಕೀರ್ಸಿ ನೊಂದವಣಿ ಮಾಡಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕಾರ್ಯಕ್ರಮದ ಸಂಯೋಜಕರು ಮನವಿ ಮಾಡಿದ್ದಾರೆ.