ಕುಟ್ರುಪ್ಪಾಡಿ ಗ್ರಾಮ ಪಂಚಾಯತ್
ವ್ಯಾಪ್ತಿಯ ಕಾಂಗ್ರೆಸ್ ಸಮಿತಿ ರಚನೆ
ಅಧ್ಯಕ್ಷ: ಸತೀಶ್ಚಂದ್ರ ಶೆಟ್ಟಿ ಬೀರುಕ್ಕು
ಕಾರ್ಯದರ್ಶಿ: ಕ್ಷೇವಿಯರ್ ಬೇಬಿ ಉಳಿಪ್ಪು

ಸತೀಶ್ಚಂದ್ರ ಶೆಟ್ಟಿ ಬೀರುಕ್ಕು

ಕ್ಷೇವಿಯರ್ ಬೇಬಿ ಉಳಿಪ್ಪು
ಕಡಬ: ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಕಾಂಗ್ರೆಸ್ ಸಮಿತಿಗೆ ಪದಾಧಿಕಾರಿಗಳ ನೇಮಕಗೊಳಿಸಲಾಗಿದ್ದು ಅಧ್ಯಕ್ಷರಾಗಿ ಸತೀಶ್ಚಂದ್ರ ಶೆಟ್ಟಿ ಬೀರುಕ್ಕು, ಪ್ರಧಾನ ಕಾರ್ಯದರ್ಶಿಯಾಗಿ ಕ್ಷೇವಿಯರ್ ಬೇಬಿ ಉಳಿಪ್ಪು ಉಪಾಧ್ಯಕ್ಷರಾಗಿ ಬಾಲಕೃಷ್ಣ ಸಾಲಿಯಾನ್ ಮತ್ರಾಡಿ, ಹರೀಶ್ ರೈ ಹಳ್ಳಿ, ಸದಸ್ಯರುಗಳಾಗಿ ಮಹಮ್ಮದ್ ಶೆರೀಫ್ ಕೇಪು, ಬೆಳಿಯಪ್ಪ ಗೌಡ ಕಾರ್ಕಳ, ಸುಖೇಶ್ ಹೆಬ್ಬಾರ್ ಹೊಸ್ಮಠ, ಕೀರ್ತನ್ ಕುಮಾರ್ ನಾಡೋಳಿ, ಸುಂದರ ಆಳ್ವ ಗೋಣಿಗುಡ್ಡೆ, ಕೇಶವ ಗೌಡ ಹೊಸ್ಮಠ (ಸಂಪಡ್ಕ) ಇವರುಗಳು ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಗಳಾದ ಹೆಚ್.ಕೆ.ಇಲ್ಯಾಸ್, ಕ್ಸೇವೀಯರ್ ಬೇಬಿ ಯಂ.ಪಿ. ಮುಖಂಡರುಗಳಾದ ಮಹಮ್ಮದ್ ಆಲಿ, ಎಲ್ಸಿ ತೋಮಸ್, ಸುದೀರ್ ದೇವಾಡಿಗ, ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.