ಪುತ್ತೂರು: ಬನ್ನೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆಂದು ಕಾದಿರಿಸಲಾಗಿದ್ದ ಜಮೀನಿನಲ್ಲಿ, ಉದ್ದೇಶಿತ ಸೀಫುಡ್ ಪಾರ್ಕ್ ನಿರ್ಮಾಣ ಯೋಜನೆಯನ್ನು ಶಾಸಕ ಸಂಜೀವ ಮಠಂದೂರು ಅವರ ಸಲಹೆ ಮೇರೆಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಪುತ್ತೂರಿನಲ್ಲಿ ನಡೆದ ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಸುದ್ದಿ ನ್ಯೂಸ್ನೊಂದಿಗೆ ಮಾತನಾಡಿದ ಅವರು ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆ ಮೂಲಕ ಸೀ ಫುಡ್ ಪಾರ್ಕ್ ಮಾಡಬೇಕು ಎಂದು ಯೋಚನೆ ಮಾಡಿದ್ದೆವು.ಪುತ್ತೂರು ಶಾಸಕರಾದ ಸಂಜೀವ ಮಠಂದೂರು ನನ್ನೊಂದಿಗೆ ಈ ಕುರಿತು ಚರ್ಚಿಸಿ ಇದರಿಂದ ಸಾವಿರಾರು ಜನರಿಗೆ ಉದ್ಯೋಗ ದೊರೆಯುತ್ತದೆ ನಿರುದ್ಯೋಗ ದೂರವಾಗುತ್ತದೆ ಆದ್ದರಿಂದ ನನ್ನ ಕ್ಷೇತ್ರದಲ್ಲಿ ಮಾಡಿ ಎಂದು ಪ್ರಸ್ತಾವನೆ ಇಟ್ಟಿದ್ದರು.ಆದರೆ ಪ್ರಸ್ತಾವನೆ ನೀಡಿದ್ದ ನೀವೇಶನದ ಜಾಗದಲ್ಲಿ ಈ ಯೋಜನೆ ಅನುಷ್ಠಾನ ಬೇಡ ಎಂದು ಅನೇಕ ಹಿರಿಯರು ಅಭಿಪ್ರಾಯಪಟ್ಟಿರುವುದರಿಂದ ಅಲ್ಲಿ ಸೀಫುಡ್ ಪಾರ್ಕ್ ನಿರ್ಮಾಣ ಬೇಡ ಎಂದರು. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಒಂದು ಸೀಫುಡ್ ಪಾರ್ಕ್ ಬೇಕು ಎಂದು ನನಗೆ ಆಸೆ ಇದೆ ಆದರೆ ಈಗ ವಿವಾದವಿರುವ ಚರ್ಚೆಯಿರುವ ಜಾಗದಲ್ಲಿ ಸೀಫುಡ್ ಪಾರ್ಕ್ ನಿರ್ಮಾಣ ಮಾಡುವುದಿಲ್ಲ ಮುಂದಕ್ಕೆ ಯಾರಿಗೂ ತೊಂದರೆಯಾಗದ ಜಾಗ ದೊರೆತಾಗ ಈ ಕೆಲಸ ಮಾಡುತ್ತೇವೆ ಎಂದು ಶಾಸಕ ಸಂಜೀವ ಮಠಂದೂರು ಮತ್ತೆ ಹೇಳಿದ್ದರಿಂದ ಅವರ ನಿರ್ಧಾರಕ್ಕೆ ನಮ್ಮ ಇಲಾಖೆ ಒಪ್ಪಿಗೆ ಸೂಚಿಸಿದೆ ಹಾಗಾಗಿ ಯಾವುದೇ ಗೊಂದಲಗಳು ಬೇಡ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಚರ್ಚೆಗೆ ಗ್ರಾಸವಾಗಿತ್ತು: ಜಿಲ್ಲಾ ಕೇಂದ್ರವಾಗಲಿರುವ ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆಂದು ಹಿಂದಿನ ಶಾಸಕರಾಗಿದ್ದ ಶ್ರೀಮತಿ ಶಕುಂತಳಾ ಟಿ.ಶೆಟ್ಟಿಯವರ ಅವಧಿಯಲ್ಲಿ ಬನ್ನೂರು ಗ್ರಾಮದ ಸೇಡಿಯಾಪು ಸಮೀಪ ೪೦ ಎಕ್ರೆ ಜಾಗವನ್ನು ಕಾದಿರಿಸಲಾಗಿತ್ತು.ಆದರೆ ಹಾಲಿ ಶಾಸಕ ಸಂಜೀವ ಮಠಂದೂರು ಅವರು, ಉದ್ದೇಶಿತ ಈ ಸ್ಥಳದಲ್ಲಿ ಸೀಫುಡ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂಬ ವಿಚಾರ ಕಳೆದ ಕೆಲವು ದಿನಗಳಿಂದ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿತ್ತು.ಮೆಡಿಕಲ್ ಕಾಲೇಜಿಗೆಂದು ಕಾದಿರಿಸಲಾದ ಸ್ಥಳವನ್ನು ಅನ್ಯ ಉzಶಕ್ಕೆ ನೀಡಬಾರದು ಎಂದು ಹಲವರಿಂದ ಆಗ್ರಹ ವ್ಯಕ್ತವಾಗಿತ್ತು.ಶಕುಂತಳಾ ಟಿ.ಶೆಟ್ಟಿಯವರ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿದ್ದರಲ್ಲದೆ ಬಳಿಕದ ಬೆಳವಣಿಗೆಯಲ್ಲಿ ಈ ಕುರಿತು ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಿದ್ದರು.ಮತ್ತೊಂದೆಡೆ ಸೀಫುಡ್ ಪಾರ್ಕ್ ನಿರ್ಮಾಣದ ಮೂಲಕ ಸಾವಿರಾರು ಮಂದಿಗೆ ಉದ್ಯೋಗ ದೊರೆತು ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ.ಮಾತ್ರವಲ್ಲದೆ ಮೆಡಿಕಲ್ ಕಾಲೇಜು ಸ್ಥಾಪನೆ ಯಾವಾಗ ಆಗುತ್ತದೆ ಎನ್ನುವುದು ಇನ್ನೂ ಅಂತಿಮಗೊಂಡಿಲ್ಲ.ಸೀಫುಡ್ ಪಾರ್ಕ್ಗೆ ಒಂದೇ ಕಡೆ ೪೦ ಎಕ್ರೆ ಜಾಗ ದಿಢೀರ್ ಲಭಿಸುವುದು ಕಷ್ಟಸಾಧ್ಯ ಎನ್ನುವ ಕಾರಣಕ್ಕಾಗಿ ಅಲ್ಲಿ ಸೀಫುಡ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವ ಕುರಿತು ಶಾಸಕ ಸಂಜೀವ ಮಠಂದೂರು ಹೇಳಿಕೆ ನೀಡಿದ್ದರು.ಸೀಫುಡ್ ಪಾರ್ಕ್ ನಿರ್ಮಾಣ ಯೋಜನೆಯನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎನ್ನುವ ಆಗ್ರಹವೂ ವ್ಯಕ್ತವಾಗಿತ್ತು.ಒಟ್ಟಾರೆ ಸರಕಾರಿ ಮೆಡಿಕಲ್ ಕಾಲೇಜು ವರ್ಸಸ್ ಸೀಫುಡ್ ಪಾರ್ಕ್ ನಿರ್ಮಾಣ ವಿಚಾರ ಪ್ರತಿಷ್ಠೆಯ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ಚರ್ಚೆಗೆ ಗ್ರಾಸವಾಗಿತ್ತು. ಸೀಫುಡ್ ವರ್ಸಸ್ ಮೆಡಿಕಲ್ ಕಾಲೇಜು ವಿಚಾರ, ಎರಡೂ ಸಾಧ್ಯವೇ? ವಿಚಾರದಲ್ಲಿ ಸುದ್ದಿಯಲ್ಲಿ ಓದುಗರಿಂದ ಅಭಿಪ್ರಾಯ ಆಹ್ವಾನಿಸಲಾಗಿದ್ದು ಉತ್ತಮ ಪ್ರತಿಕ್ರಿಯೆ