ಪುತ್ತೂರು: ಎಷ್ಟೋ ಮರಗಳಲ್ಲಿ ಪಕ್ಷಿಗಳ ವಾಸ ಇರುತ್ತೆ. ಆದರೆ ಕಾಣ ಸಿಗುವುದಿಲ್ಲ. ಕೇವಲ ಅವುಗಳ ಕೂಗು ಮಾತ್ರ ಕೇಳಿಸುತ್ತೆ. ಚಳಿಗಾಲದ ಸಮಯದಲ್ಲಿ ಮರಗಳ ಎಲೆಗಳು ಉದುರಿ ಹೋದರು ಪಕ್ಷಿಗಳ ಬಣ್ಣಗಳ ವ್ಯತ್ಯಾಸದಿಂದ ಅವು ಸರಿಯಾಗಿ ಗೋಚರಿಸದು. ಆದರೆ ಪುತ್ತೂರಿನ ಕೇಂದ್ರ ಭಾಗ ಮಹಾತ್ಮ ಗಾಂಧೀ ಪ್ರತಿಮೆ ಬಳಿಯ ಅಶ್ವತ್ಥ ಮರದ ಆಶ್ರಯದಲ್ಲಿರುವ ಬಿಳಿ ಬಣ್ಣದ ಪಕ್ಷಿಗಳು ಗೋಚರಿಸುವುದು ಮಾತ್ರವಲ್ಲ. ರಾತ್ರಿ ವೇಳೆ ಈ ಪಕ್ಷಿಗಳು ಮರದ ಸೌಂದರ್ಯವನ್ನು ಹೆಚ್ಚಿಸಿದೆ. ಕ್ಯಾಮೆರಾ ಕಣ್ಣಿಗೆ ಸಿಕ್ಕದೃಶ್ಯ
ಹೌದು.. ರಾತ್ರಿ ವೇಳೆ ದೂರದಿಂದ ನೋಡುವಾಗ ಈ ಆಶ್ವತ್ಥ ಮರದಲ್ಲಿ ಏನೋ ಬಿಳಿ ಬಣ್ಣದ ಹೂವುಗಳ ಮೊಗ್ಗುಗಳು ಕಾಣಿಸುವಂತೆ ಗೋಚರಿಸುತ್ತದೆ. ಈ ಸೌಂದರ್ಯವನ್ನು ನೋಡಲು ರಾತ್ರಿ ಮತ್ತು ನಸುಕಿನ ಜಾವ ನೂರಾರು ಮಂದಿ ಬಂದು ಮನಸ್ಸಿಗೆ ನೆಮ್ಮದಿ ತಂದು ಕೊಳ್ಳುತ್ತಾರೆ. ಆದರೆ ಪಕ್ಷಿಗಳು ಇರುವ ಮರದ ಬುಡದ ಬಳಿ ಹೋದರೆ ಮಾತ್ರ ಹಕ್ಕಿಗಳ ಹಿಕ್ಕೆ ಬೀಳುವ ಸಾಧ್ಯತೆ ಇರುವುದರಿಂದ ಆದಷ್ಟು ದೂರದಿಂದಲೇ ನೋಡಿ ಆನಂದಿಸಬೇಕಾಗಿದೆ.