HomePage_Banner
HomePage_Banner
HomePage_Banner
HomePage_Banner

ದಾರಂದಕುಕ್ಕುವಿನಲ್ಲಿ ಕುಡಿಯುವ ನೀರು ಸರಬರಾಜು ಪೈಪ್‌ಗೆ ಹಾನಿ | ಗ್ರಾಹಕರಿಗೆ ಟ್ಯಾಂಕರ್‌ನಲ್ಲಿ ಕುಡಿಯುವ ನೀರಿನ ವಿತರಣೆ – ಜೀವಂಧರ್ ಜೈನ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಉಪ್ಪಿನಂಗಡಿ ಕುಮಾರಧಾರ ಹೊಳೆಯಿಂದ ಪುತ್ತೂರಿಗೆ ಸರಬರಾಜು ಆಗುವ ಕುಡಿಯುವ ನೀರಿನ ಹಳೆ ಪೈಪ್‌ಗೆ ಹಾನಿಯಾಗಿರುವ ಹಿನ್ನಲೆಯಲ್ಲಿ ಪುತ್ತೂರು ನಗರಸಭೆ ವ್ಯಾಪ್ತಿಯ ಕೆಲವು ಪರಿಸರಕ್ಕೆ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಆಗಲಿರುವ ಹಿನ್ನೆಲೆಯಲ್ಲಿ ಬದಲಿ ವ್ಯವಸ್ಥೆಯಾಗಿ ಪರಿಸರಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ತಿಳಿಸಿದ್ದಾರೆ.

ಪುತ್ತೂರು ಉಪ್ಪಿನಂಗಡಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವ ವೇಳೆ ಕುಮಾರಧಾರ ಹೊಳೆಯಿಂದ ಪುತ್ತೂರು ಪಟ್ಟಣಕ್ಕೆ ಸರಬರಾಜು ಆಗುವ ಕುಡಿಯುವ ನೀರಿನ ಹಳೆ ಪೈಪ್‌ಗೆ ನ.25ರಂದು ಹಾನಿಯಾಗಿತ್ತು. ಈ ಕುರಿತು ದುರಸ್ಥಿ ಕಾರ್ಯ ನಡೆಯುತ್ತಿದೆ. ಆದರೆ ಹಳೆ ಪೈಪ್ ಆದ್ದರಿಂದ ಮತ್ತೆ ಮತ್ತೆ ಪೈಪ್ ದುರಸ್ಥಿ ಕಾರ್ಯಕ್ಕೆ ಅಡ್ಡಿಯಾಗುತ್ತಿದ್ದರಿಂದ ಆ ಭಾಗದಲ್ಲಿ ಹೊಸ ಪೈಪ್ ಲೈನ್ ಅಳವಡಿಸುವ ಕಾಮಗಾರಿ ನಡೆಯಲಿದೆ. ಹಾಗಾಗಿ ಪುತ್ತೂರು ನಗರಸಭೆ ವ್ಯಾಪ್ತಿಯ ಹಳೆ ಪೈಪ್ ಜೋಡಣೆಯ ಸಂಪರ್ಕ ಇರುವ ಪಡೀಲು, ಬನ್ನೂರು, ಹಾರಾಡಿ, ಸಾಲ್ಮರ, ಕೃಷ್ಣನಗರ, ಕೆಮ್ಮಾಯಿ ಭಾಗಕ್ಕೆ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಭಾಗಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಉಳಿದಂತೆ ಈಗಾಗಲೇ ಹೊಸ ಜೋಡಣೆಯ ನೀರು ಸರಬರಾಜು ನಿರಂತರವಾಗಿ ಇರಲಿದೆ ಎಂದು ಅವರು ತಿಳಿಸಿದ್ದಾರೆ.

ಕುಡಿಯುವ ನೀರಿಗೆ ಸಂಪರ್ಕಿಸಿ
ಕುಡಿಯುವ ನೀರು ಸರಬರಾಜು ಪೈಪ್ ಹಾನಿಯಾಗಿದ್ದರಿಂದ ಸಮಸ್ಯೆ ಆದ ಪರಿಸರಕ್ಕೆ ಕುಡಿಯುವ ನೀರನ್ನು ನಗರಸಭೆಯಿಂದ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುವುದು. ಉಪ್ಪಿನಂಗಡಿ ರಸ್ತೆ ಕಾಮಗಾರಿ ವೇಳೆ ಗುರುವಾರ ಮತ್ತು ಶುಕ್ರವಾರ ವಿದ್ಯುತ್ ಸಂಪರ್ಕವು ಕಡಿತ ಆಗುವ ಸಾಧ್ಯತೆ ಇದ್ದರೆ ಪುತ್ತೂರು ಪಟ್ಟಣ ಪೂರ್ತಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ. ಹಾಗಾಗಿ ಆದ್ಯತೆ ಮೇರೆಗೆ ಟ್ಯಾಂಕರ್ ಮೂಲಕ ನೀರು ಸರಬಾರಜು ಮಾಡಲಿದ್ದೇವೆ. ನೀರು ಸರಬರಾಜಿಗಾಗಿ ಮೊ: 9448427913ಯನ್ನು ಸಂಪರ್ಕಿಸುವಂತೆ ನಗರಸಭೆ ನೀರಿನ ವಿಭಾಗದ ಮುಖ್ಯಸ್ಥ ವಸಂತ್ ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.