ಪುತ್ತೂರು: ಇರ್ದೆ ಹಾಲು ಉತ್ಪಾದಕರ ಸಹಕಾರಿ ಸಂಗವು ೨೦೧೯-೨೦ನೇ ಸಾಲಿನಲ್ಲಿ ರೂ.೧,೫೨,೭೪೨ ಲಾಭಗಳಿಸಿದೆ. ಸಂಘವು ಗಳಸಿದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.೯ ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀ.ಹಾಲಿಗೆ ೪೭ ಪೈಸೆ ಬೋನಸ್ ನೀಡಲಾಗುವುದುಎ ಎಂದು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಬಿ.ಶುಭಕರ ರೈಯವರು ಘೋಷಣೆ ಮಾಡಿದರು.
ಸಭೆಯು ನ.28ರಂದು ಸಂಘದ ಸಭಾ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ವರ್ಷಾಂತ್ಯಕ್ಕೆ ಸಂಘದಲ್ಲಿ ೪೫,೮೮೦ ಪಾಳು ಬಂಡವಾಳವಿದೆ. ವರದಿ ವರ್ಷದಲ್ಲಿ ೧,೫೩,೫೯೩ ಲೀ ಹಾಲು ಮಾರಾಟ ಮಾಡಿದ್ದು ರೂ.೪೭,೬೦,೯೦೭.೬೦ ಆದಾಯ ಬಂದಿರುತ್ತದೆ. ೧೦೦೩ ಚೀಲ ಪಶು ಆಹಾರ ಮಾರಾಟದಿಂದ ರೂ.೧೦,೪೫,೫೨೫೮೬೭ ಕೆ.ಜಿ ಲವಣ ಮಿಶ್ರಣ ಮಾರಾಟದಿಂದ ರೂ.೩೪೭೧೦ ಹಾಗೂ ೪೦ ಕೆ.ಜಿ ಕರುಗಳ ಪಶು ಆಹಾರ ಮಾರಾಟದಿಂದ ರೂ. ೮೮೦ ಆದಾಯ ಬಂದಿರುತ್ತದೆ. ವಾರ್ಷಿಕ ಲಾಭಾಂಶವನ್ನು ನಿಯಮಾನುಸಾರ ವಿಂಗಡಣೆ ಮಾಡಲಾಗಿದ್ದು ಸದಸ್ಯರಿಗೆ ಶೇ.೯ ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ ೪೭ಪೈಸೆಯಂತೆ ಬೋನಸ್ ನೀಡಲಾಗುವುದು. ಡಿವಿಡೆಂಡ್ ಹಾಗೂ ಬೋನಸ್ನ ಮೊತ್ತವನ್ನು ಸದಸ್ಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ದ.ಕ ಹಾಲು ಒಕ್ಕೂಟದ ಉಪವ್ಯವಸ್ಥಾಪಕರಾದ ಡಾ. ಸತೀಶ್ ರಾವ್ ಹಾಗೂ ಎಂ.ಶ್ರೀನಿವಾಸ ಮಾತನಾಡಿ ಒಕ್ಕೂಟ ಹಾಗೂ ಸರಕಾರದಿಂದ ದೊರೆಯುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.
ಬಹುಮಾನ ವಿತರಣೆ:
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ರಾಮಣ್ಣ ಪೂಜಾರಿ ಇರ್ದೆ(ಪ್ರ), ಅಜಿತಾಶಂಕರಿ(ದ್ವಿ), ದಿನೇಶ್ ಕುಮಾರ್ ರೈ(ತೃ) ಬಹುಮಾನ ಹಾಗೂ ಹಾಲು ಉತ್ಪಾದಕರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷ ದಿನೇಶ್ ಕುಮಾರ್ ರೈ, ನಿರ್ದೇಶಕರಾದ ಬಿ.ಆರ್ ತುಕರಾಮ, ಅಜಿತಾಶಂಕರಿ ಎಸ್., ಮಾಜಿ ಅಧ್ಯಕ್ಷ ದೇರಣ್ಣ ರೈ ಪಾಪನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ಶುಭಕರ ರೈ ಸ್ವಾಗತಿಸಿದರು. ಕಾರ್ಯದರ್ಶಿ ಜೆ.ರಾಜರಾಮ ಭಟ್ ಸ್ವಾಗತಿಸಿ, ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ಬಿ.ಚಂದ್ರಶೇಖರ ರೈ ವಂದಿಸಿದರು. ಸಹಾಯಕ ಎನ್ ಹಮೀದ್ ಸಹಕರಿಸಿದರು.