HomePage_Banner
HomePage_Banner
HomePage_Banner
HomePage_Banner

ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ ಜಾತ್ರೋತ್ಸವದ ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕೋವಿಡ್ ನಿಯಮ ಪಾಲಿಸಿಕೊಂಡು ಪೂರ್ವ ಸಂಪ್ರದಾಯದಂತೆ ಜಾತ್ರೋತ್ಸವ
  • ಡಿ.2-ಜ.18 ರಂಗಪೂಜೆ
  • ಡಿ.20 ಸುಬ್ರಹ್ಮಣ್ಯ ಷಷ್ಠಿ ವಿಶೇಷ ಪೂಜೆ

ಪುತ್ತೂರು:ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಕಿರುಷಷ್ಠಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವವನ್ನು ಪೂರ್ವ ಸಂಪ್ರದಾಯದಂತೆ ಕೋವಿಡ್-೧೯ರ ಸರಕಾರದ ನಿಮಯಗಳನ್ನು ಅನುಸರಿಸಿಕೊಂಡು ನಡೆಸುವುದಾಗಿ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಜಾತ್ರೋತ್ಸವದ ಪೂರ್ವಭಾವಿ ಸಭೆಯು ನ.೨೯ರಂದು ಮಧ್ಯಾಹ್ನ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪುರವರ ಅಧ್ಯಕ್ಷತೆಯಲ್ಲಿ ನಡೆಯಿತು. ಜನವರಿ ೧೮ ರಿಂದ ೨೦ರ ತನಕ ದೇವಸ್ಥಾನದ ವಾರ್ಷಿಕ ಕಿರುಷಷ್ಠೀ ಜಾತ್ರೋತ್ಸವ ಹಾಗೂ ಜ.೨೩ ಹಾಗೂ ೨೪ರಂದು ಉಳ್ಳಾಲ್ತಿ, ಉಳ್ಳಾಕುಲು ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದ್ದು ಜಾತ್ರೋತ್ಸವ ನಡೆಸುವ ಕುರಿತು ಅಧ್ಯಕ್ಷ ಸುಧಾಕರ ರಾವ್ ಸಭೆಯಲ್ಲಿ ಅಭಿಪ್ರಾಯ ಕೇಳಿದರು. ಜಾತ್ರೋತ್ಸವ ಹಾಗೂ ನೇಮೋತ್ಸವವನ್ನು ಪೂರ್ವ ಸಂಪ್ರದಾಯದಂತೆ ನಡೆಸುವುದು ಹಾಗೂ ಕೋವಿಡ್-೧೯ರ ಹಿನ್ನೆಲೆಯಲ್ಲಿ ಸರಕಾರ ನಿಯಮಗಳನ್ನು ಪಾಲಿಸಿಕೊಂಡು ನಡೆಸುವುದಾಗಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು ಅದರಂತೆ ತೀರ್ಮಾಣಕೈಗೊಳ್ಳಲಾಗಿದೆ.

ಡಿ.2ರಿಂದ ರಂಗಪೂಜೆ
ಕಳೆದ ವರ್ಷದಂತೆ ಈ ಭಾರಿಯು ದೇವಸ್ಥಾನದಲ್ಲಿ ಡಿ.೨ರಿಂದ ಪ್ರಾರಂಭಗೊಂಡು ಜ.೨೮ರ ತನಕ ಒಂದು ಮಂಡಲ ಅವಧಿಯಲ್ಲಿ ದೇವರಿಗೆ ರಂಗಪೂಜೆ ನಡೆಸಲಾಗುವುದು. ಈ ಸಂದರ್ಭದಲ್ಲಿ ಅನ್ನದಾನವು ನಡೆಯಲಿದೆ. ಡಿ.೨೦ರಂದು ಸುಬ್ರಹ್ಮಣ್ಯ ಷಷ್ಠಿಯ ಅಂಗವಾಗಿ ವಿಶೇಷ ಪೂಜೆ, ಅನ್ನದಾನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಸಹಕರಿಸುವಂತೆ ಅಧ್ಯಕ್ಷ ಸುಧಾಕರ ರಾವ್ ಮನವಿ ಮಾಡಿದರು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇವಯ್ಯ ಗೌಡ ದೇವಸ್ಯ, ದಾಮೋಧರ ರೈ ತೊಟ್ಲ, ಕಿಶೋರ್ ಗೌಡ ಮರಿಕೆ, ವಿಠಲ ರೈ ಮೇರ್ಲ, ವಿನಯ ನಾಯ್ಕ ಕೊಟ್ಲಾರು, ಅರ್ಚಕ ಮನೋಜ್ ಭಟ್ ಪಜಿಮಣ್ಣು, ಮಾಜಿ ಸದಸ್ಯೆ ಮೀನಾಕ್ಷಿ ಸೇಸಪ್ಪ ಗೌಡ, ಹರಿಣಾ ವಿ.ರೈ, ಅನಂತಯ್ಯ ಕಾರಂತ, ಆರ್ಯಾಪು ಗ್ರಾ.ಪಂ ಮಾಜಿ ಸದಸ್ಯ ಜಯಂತ ಶೆಟ್ಟಿ ಕಂಬಳತ್ತಡ್ಡ, ಕಾರ್ಪಾಡಿ ಸುಬ್ರಹ್ಮಣ್ಯೇಶ್ವರ ಯುವಕ ಮಂಡಲದ ಅಧ್ಯಕ್ಷ ಬಾಲಚಂದ್ರ ಗೌಡ ದೇವಸ್ಯ, ಕಾರ್ಯದರ್ಶಿ ಸಂದೀಪ್ ನಾಯ್ಕ್ ಆರ್ಯಾಪು, ಯಾಧವ ಗೌಡ ಸಂಟ್ಯಾರು, ಧನಂಜಯ ಶೆಟ್ಟಿ ಮೇರ್ಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿ ಜಯಂತಿ ಅಶೋಕ ದೇವಸ್ಯ, ಶ್ರೀಧರ ರೈ ಮೇರ್ಲ, ಯಕ್ಷಿತ್ ರೈ ಮೇರ್ಲ, ಗಿರೀಶ್ ಕಿನ್ನಿಮಜಲು, ಹರೀಶ್ ಪೂಜಾರಿ ಕಾರ್ಪಾಡಿ, ಪೂವಪ್ಪ ಕಲ್ಲರ್ಪೆ, ಚೇತನ್ ದೇವಸ್ಯ, ಗಣೇಶ ಮಡಿವಾಳ, ಗಣೇಶ್ ಗೌಡ ದೇವಸ್ಯ ಹಾಗೂ ರೋಹಿತ್ ಗೌಡ ಬರೆಮೇಲು ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಶ್ರಮದಾನ:
ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ನ.೨೯ರಂದು ಊರ ಭಕ್ತಾದಿಗಳು ದೇವಸ್ಥಾನದ ಸುತ್ತ ಮುತ್ತಲ ಪರಿಸರವನ್ನು ಶ್ರಮದಾನದ ಮೂಲಕ ಶುಚಿಗೊಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.