HomePage_Banner
HomePage_Banner
HomePage_Banner
HomePage_Banner

ಧನ್ವಂತರಿ ಆಸ್ಪತ್ರೆಯ ಸ್ಥಾಪಕ ಡಾ.ಕಜೆ ತಿಮ್ಮಣ್ಣ ಭಟ್ ಅವರ ಪತ್ನಿ ಮಿನಾಕ್ಷಿ ಅವರ ಶ್ರದ್ಧಾಂಜಲಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಏನು ಸಾಧಿಸಬೇಕೆಂದಿದ್ದಾರೋ ಅದನ್ನು ಸಾಧಿಸಿದ್ದಾರೆ- ಡಾ. ರವೀಂದ್ರ
  • ಉತ್ತಮ ಮಾರ್ಗದರ್ಶಕರಾಗಿದ್ದರು – ಡಾ. ರವಿಪ್ರಕಾಶ್
  • ಅತ್ತೆಯವರ ಸಹಕಾರದಿಂದ ನನ್ನ ಕ್ಷೇತ್ರದ ಸಾಧನೆ – ಡಾ. ವಿಜಯಸರಸ್ವತಿ ಬಿ

ಪುತ್ತೂರು: ಧನ್ವಂತರಿ ಆಸ್ಪತ್ರೆಯ ಸ್ಥಾಪಕ ಡಾ. ಕಜೆ ತಿಮ್ಮಣ್ಣ ಭಟ್ ಅವರ ಪತ್ನಿ ವಿನಾಕ್ಷಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ನ.29ರಂದು ಆಸ್ಪತ್ರೆ ಮತ್ತು ಧನ್ವರಂತರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು. ಶ್ರೀಮತಿ ಮಿನಾಕ್ಷಿ ಅವರ ಹಿರಿಯ ಪುತ್ರ ಡಾ.ಚಂದ್ರಶೇಖರ್ ಸಹೋದರರು ದೀಪ ಪ್ರಜ್ವಲಿಸಿದರು. ಇದೇ ಸಂದರ್ಭದಲ್ಲಿ ಮಿನಾಕ್ಷಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಮೃತರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು.

ಏನು ಸಾಧಿಸಬೇಕೆಂದಿದ್ದಾರೋ ಅದನ್ನು ಸಾಧಿಸಿದ್ದಾರೆ:
ಡಾ. ರವೀಂದ್ರ ಅವರು ಮಾತನಾಡಿ ನಮ್ಮ ತಾಯಿ ಜನರ ಆರೋಗ್ಯದ ಕುರಿತು ಕಾಳಜಿ ವಹಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಅವರು ಏನು ಸಾಧಿಸಬೇಕೆಂದಿದ್ದಾರೋ ಅದನ್ನು ಅವರು ಪತಿಯ ಮೂಲಕ ಸಾಧಿಸಿದ್ದಾರೆ. ಇದರ ಜೊತೆಗೆ ಸಂಬಂಧಿಕರ ಸಮಸ್ಯೆಗಳಿಗೆ ಸ್ಪಂಧಿಸಿ ಪರಿಹಾರ ಕೊಡುತ್ತಿದ್ದರು ಎಂದರು.

ಉತ್ತಮ ಮಾರ್ಗದರ್ಶಕರಾಗಿದ್ದರು:
ಡಾ. ರವಿಪ್ರಕಾಶ್ ಅವರು ಮಾತನಾಡಿ ಪುತ್ತೂರಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಎನಾದರೂ ಒಂದು ಸಾಧನೆ ಮಾಡಬೇಕೆಂದು ತಂದೆ ಡಾ. ತಿಮ್ಮಣ್ಣ ಭಟ್ ಅವರ ಕಾರ್ಯಕ್ಕೆ ಜೊತೆಯಾಗಿ ನಿಂತವರು ನಮ್ಮ ತಾಯಿ ಮಿನಾಕ್ಷಿಯವರು. ಆಗಿನ ಕಾಲದಲ್ಲಿ ಪುತ್ತೂರು ಇಷ್ಟೊಂದು ಬೆಳೆಯದಿದ್ದರೂ ಮನೆ ಮನೆ ಭೇಟಿ ಮಾಡಿ ಆರೋಗ್ಯ ತಪಾಸಣೆ ನಡೆಸುತ್ತಿದ್ದ ನನ್ನ ತಂದೆಯವರ ಜೊತೆ ತಾಯಿಯೂ ಹೋಗುತ್ತಿದ್ದರು. ಇದರ ಜೊತೆ ತಾನೆ ಜೀಪು ಚಾಲನೆ ಮಾಡಿ ತಂದೆಯವರಿಗೆ ಸಹಾಯ ಮಾಡುತ್ತಿದ್ದ ಅವರು ಉತ್ತಮ ಆದರ್ಶ ಗೃಹಿಣಿ ಎಂದೆನಿಸಿದ್ದರು. ಓದುವುದು ಅವರ ಹವ್ಯಾಸ ಆಗಿತ್ತು. ತಾನು ಓದಿದನ್ನು ನಮಗೆಲ್ಲಾ ಮಾರ್ಗದರ್ಶನ ಮಾಡುತ್ತಿದ್ದರು. ತನ್ನ ಜೀವನದ ಕೊನೆ ಕ್ಷಣದಲ್ಲೂ ಹಾಸ್ಯದ ಮಾತನ್ನಾಡಿ ನಮ್ಮ ಮನಸ್ಸನ್ನು ಸಂತೋಷದ ಕಡೆ ಕೊಂಡೊಯ್ಯುತ್ತಿದ್ದರು. ಒಟ್ಟಿನಲ್ಲಿ ಅವರು ನಮಗೆ ಉತ್ತಮ ಮಾರ್ಗದರ್ಶಕಕರು ಎಂದು ಹೇಳಿದರು.

ಅತ್ತೆಯವರ ಸಹಕಾರದಿಂದ ನನ್ನ ಕ್ಷೇತ್ರದ ಸಾಧನೆ:
ವಿನಾಕ್ಷಿಯವರ ಕಿರಿಯ ಸೊಸೆ ಡಾ. ವಿಜಯಸರಸ್ವತಿ ಬಿ ಅವರು ಮಾತನಾಡಿ ತನ್ನ ಕೊನೆ ಕ್ಷಣದಲ್ಲೂ ಪುಸ್ತಕಗಳನ್ನು ಓದುತ್ತಿದ್ದ ಅವರು ೯೦ ವರ್ಷದ ತುಂಬು ಜೀವನದಲ್ಲೂ ಅವರು ಕಾಲಕ್ಕೆ ತಕ್ಕಂತೆ ಬದಲಾಗಿ ನಮಗೆಲ್ಲ ಮಾರ್ಗದರ್ಶನ ನೀಡುತ್ತಿದ್ದರು. ಮಕ್ಕಳ ಜೊತೆ ಮಕ್ಕಳಾಗಿ ಬಿಡುತ್ತಿದ್ದರು. ನನ್ನ ಕ್ಷೇತ್ರದಲ್ಲಿ ನಾನೇನು ಮಾಡಿದ್ದೆನೋ ಅದಕ್ಕೆ ಅತ್ತೆಯವರ ಸಹಕಾರವೇ ಮುಖ್ಯ ಎಂದರು. ಮೊಮ್ಮಗ ಭಾರವಿ ಕೆ ಭಟ್ ಪ್ರಾರ್ಥಿಸಿದರು. ಕಿರಿಯ ಸೊಸೆ ಡಾ.ವಿಜಯ ಸರಸ್ವತಿ ಬಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸೊಸೆಯಂದಿರಾದ ಜಾನಕಿ, ಶ್ಯಾಮಲ, ಮೊಮ್ಮಕ್ಕಳು, ಮರಿಮಕ್ಕಳು, ಸಂಸ್ಥೆಯ ಹಿತೈಷಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.