HomePage_Banner
HomePage_Banner
HomePage_Banner
HomePage_Banner

ಪಡೀಲ್: ಎನ್.ಎಸ್.ಆರ್ಕೇಡ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಹಣತೆ ಪ್ರಜ್ವಲಿಸುವಂತೆ,ಸಂಕೀರ್ಣದ ಜನತೆಯ ಬದುಕು ಪ್ರಜ್ವಲಿಸಲಿ‌-ಶಾಸಕ ಮಠಂದೂರು

ಪುತ್ತೂರು: ಬೆಳೆಯುತ್ತಿರುವ ಪುತ್ತೂರಿಗೆ ನಾರಾಯಣ ಆಚಾರ್ಯ ಕುಟುಂಬ ಒಂದೊಳ್ಳೆಯ ಕೊಡುಗೆ ನೀಡಿದ್ದು, ಪುತ್ತೂರು ಗ್ರಾಮಾಂತರ ಜಿಲ್ಲೆ ಯಾಗಬೇಕೇಂದು ಕನಸು ಕಾಣುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಎಸ್.ಪಿ. ಕಛೇರಿಯು ಬರಲಿದ್ದು,ಪುತ್ತೂರು ಉಪ್ಪಿನಂಗಡಿ ರಸ್ತೆಯ ಅಭಿವೃದ್ದಿಗೆ ಈ ವರ್ಷ 12 ಕೋಟಿ ರೂಪಾಯಿ ಇಟ್ಟಿದ್ದೇವೆ. ಬರುವ ವರ್ಷ ಈ ರಸ್ತೆ ಪೂರ್ತಿ ಚತುಷ್ಪಥವಾಗಲಿದೆ, ಒಂದಷ್ಟು ಬೆಳೆಯುತ್ತಿರುವ ನಗರಕ್ಕೆ ಅಂಗಡಿ-ಮುಂಗಟ್ಟು, ಮನೆಗಳ ನಿರ್ಮಾಣ ವಾದಗ ಜನಸಂಖ್ಯೆಯು ಹೆಚ್ಚಾಗಿ ,ನಗರ ಬೆಳವಣಿಗೆಯಾಗುತ್ತದೆ. ಇದಕ್ಕೆಲ್ಲಾ ಪೂರಕವಾಗಿ ಈ ಕಟ್ಟಡ ನಿರ್ಮಾಣವಾಗಿದೆ. ನಮ್ಮೆದುರು ಪ್ರಜ್ವಲಿಸುತ್ತಿರುವ ಹಣತೆಯಂತೆ ಈ ಸಂಕೀರ್ಣದ ಜನತೆಯ ಬದುಕು ಪ್ರಜ್ವಲಿಸಲಿ ಎಂದು ನ.30ರಂದು ಪಡೀಲಿನಲ್ಲಿ ನೂತನ ಕಟ್ಟಡ ಎನ್.ಎಸ್.ಆರ್ಕೇಡ್ ನ್ನು ದೀಪ ಬೆಳಗಿಸಿ ಲೋಕಾರ್ಪಣೆ ಮಾಡಿ ಮಾತನಾಡಿದರು.

ಕಡಬದ ಕೇಶವ ಪುರೋಹಿತರು ಪೂಜಾ ಕೈಂಕರ್ಯ ನೆರವೇರಿಸಿದರು.  ಎನ್.ಎಸ್.ಆರ್ಕೇಡ್ ನ ಮಾಲಕ  ಕುಂಟ್ಯಾನ ನಾರಾಯಣ ಆಚಾರ್ಯ ದಂಪತಿ ಶಾಸಕ ಸಂಜೀವ ಮಠಂದೂರುರವರನ್ನು ಸನ್ಮಾನಿದರು.

ಉರ್ವಾ ಮಾರಿಗುಡಿ ದಿವ್ಯಾಶ್ರೀ ಜ್ಯುವೆಲರ್ಸ್ ನ ರವೀಂದ್ರ ಆಚಾರ್ಯ,ಬೊಳ್ವಾರ್ ವಿ.ಕೆ ಟ್ರೇಡರ್ಸ್ ನ ವಸಂತ್ ಆಚಾರ್ಯ,ಮಾಣಿಪಲ್ಕೆ ಸದಾಶಿವ ಆಚಾರ್ಯ,ಜಯಕರ ಆಚಾರ್ಯ ಬನ್ನೂರು,ಪಡೀಲ್ ಸಮೃದ್ಧಿ ಫರ್ನಿಚರ್ & ಹೋಮ್‌ ಅಪ್ಲೈಯನ್ಸಸ್‌ ನ ಚಂಚಲಾಕ್ಷ, ಪಡೀಲ್‌ ಗಣೇಶ್‌ ಸ್ಟೋರ್‌ ನ ಮನಮೋಹನ್‌, ಶ್ರೀದೇವಿ ಸೈಕಲ್‌ ಶಾಪ್‌ ನ ಮಹಾಲಿಂಗ, ಚಂದ್ರಹಾಸ ಸಾಲಿಯಾನ್‌ ಸಾಮೆತಡ್ಕ, ಮಾಲಕರ ಪುತ್ರರಾದ ಸಂತೋಷ್‌ , ಪ್ರಶಾಂತ್‌, ರಾಜೇಶ್‌, ಪ್ರಸಾದ್‌, ಪುತ್ರಿಯರಾದ ವಿದ್ಯಾ ರವೀಂದ್ರ, ಸೊಸೆಯಂದಿರಾದ ಸುಹಾಸಿನಿ, ನಮೃತಾ, ದಿವ್ಯಾಶ್ರೀ, ಮೊಮ್ಮಕ್ಕಳಾದ ಸ್ನೇಹಾ, ಶ್ರಿಯಾ, ಅದ್ವಿಕ್‌, ಶ್ರೀನಿಧಿ, ಶ್ರಾವ್ಯ, ಸಹೋದರರಾದ ಕೃಷ್ಣ ಆಚಾರ್ಯ, ಧನಂಜಯ ಆಚಾರ್ಯ, ಬೇಬಿ ಕೃಷ್ಣ ಆಚಾರ್ಯ, ಜಯಲಕ್ಷ್ಮೀ ಧನಂಜಯ ಆಚಾರ್ಯ ಸೇರಿದಂತೆ ಮೊದಲಾದವರು ಇದ್ದರು.

ಮಾಜಿ ಪುರಸಭಾ ಸದಸ್ಯ ಉದಯ ಕುಮಾರ್‌ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.