ಪುತ್ತೂರು : ಲೋಹಗಳ ಸವೆತವನ್ನು ಪ್ರತಿಬಂಧಿಸುವಲ್ಲಿ ನಡೆಸಿದ ಉತ್ತಮ ಸಂಶೊಧನೆಗಾಗಿ ಮಂಗಳೂರು ವಿಶ್ವವಿದ್ಯಾನಿಲಯದ ವಸ್ತು ವಿಜ್ಞಾನ ವಿಭಾಗದ ಹಳೆ ವಿದ್ಯಾರ್ಥಿನಿ ಮತ್ತು ಕಲ್ಪಾಕಂನ ಇಂದಿರಾಗಾಂಧಿ ಪರಮಾಣು ಸಂಶೋಧನಾ ಕೇಂದ್ರದ ಸಂಶೋಧನಾ ವಿದ್ಯಾರ್ಥಿನಿ ಮಧುರಾ ಬಿ. ರವರಿಗೆ ನೇಸ್ ಅಂತರಾಷ್ಟ್ರೀಯ ಸಂಸ್ಥೆಯು ಪ್ರಶಸ್ತಿ ಪತ್ರ ಹಾಗೂ 1.5 ಲಕ್ಷ ರೂ.ಗಳ ಸ್ಲಾಲರ್ಶಿಪ್ ನೀಡಿ ಗೌರವಿಸಿದೆ.
ಶ್ರೀವಾಣಿವಿಜಯ ಕೊಡ್ಲಮೊಗರು ಮಂಜೇಶ್ವರ, ಮಾಯಿದೆ ದೇವುಸ್ ವಿದ್ಯಾಸಂಸ್ಥೆ ಪುತ್ತೂರು, ವಿವೇಕಾನಂದ ವಿದ್ಯಾಲಯ ಪುತ್ತೂರು ಇಲ್ಲಿ ವಿದ್ಯಾಭ್ಯಾಸ ಪೂರೈಸಿದ ನಂತರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಮಧುರಾರವರು ಪುತ್ತೂರು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅದ್ಯಕ್ಷರಾಗಿರುವ ಬೆಳ್ಳಿಪ್ಪಾಡಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಮಲ್ಲಿಕಾ ಎಸ್. ಆಳ್ವ ಮತ್ತು ಶ್ರೀಧರ್ ಆಳ್ವರವರ ಪುತ್ರಿ.