HomePage_Banner
HomePage_Banner
HomePage_Banner
HomePage_Banner

ಸಾಮೆತ್ತಡ್ಕದಲ್ಲಿ ದಿನಸಿ ಸಾಮಾಗ್ರಿಗಳ ಮಳಿಗೆ ಚೇತನ್ ಟ್ರೇಡರ್‍ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಾಮೆತ್ತಡ್ಕದಲ್ಲಿ ದಿನಸಿ ಸಾಮಾಗ್ರಿಗಳ ಮಳಿಗೆ ಚೇತನ್ ಟ್ರೇಡರ್‍ಸ್ ಸಂಸ್ಥೆಯು ನ.೩೦ ರಂದು ಶುಭಾರಂಭಗೊಂಡಿದೆ. ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ದೇವರು ಮನುಷ್ಯನಲ್ಲಿ ಹಲವಾರು ಪ್ರತಿಭೆಗಳನ್ನು ತುಂಬಿಸಿದ್ದಾನೆ. ಈ ಪ್ರತಿಭೆಗಳ ಸದುಪಯೋಗಪಡಿಸಿಕೊಳ್ಳುವುದು ಮಾನವನ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಕ್ಲೋಡಿಯಸ್ ಹಾಗೂ ಅವರ ಪುತ್ರ ಚೇತನ್‌ರವರು ನೂತನ ಉದ್ಯಮವನ್ನು ಆರಂಭಿಸಿದ್ದಾರೆ. ಈ ಉದ್ಯಮದ ಮೂಲಕ ಗ್ರಾಹಕರ ಮನಸ್ಸನ್ನು ಗೆಲ್ಲುತ್ತಾ ಉತ್ತಮ ಜೀವನವನ್ನು ಕಂಡುಕೊಳ್ಳುವಂತಾಗಲಿ ಎಂದು ಆಶೀರ್ವಚನ ನೀಡಿದರು.

ನಗರಸಭಾ ಸದಸ್ಯ ಬಾಲಚಂದ್ರ ಕೆ.ರವರು ಮಾತನಾಡಿ, ವ್ಯವಹಾರ ಮಾಡುವುದು ಲಾಭಕೋಸ್ಕರ ಆದ್ರೂ, ವ್ಯವಹಾರದಲ್ಲಿ ಲಾಭದೊಂದಿಗೆ ಇತರ ಸಮಾಜಮುಖಿ ಚಟುವಟಿಕೆಗಳಲ್ಲಿಯೂ ಭಾಗಿಯಾಗುವಂತಾಗಬೇಕು. ಮುಂದಿನ ದಿನಗಳಲ್ಲಿ ಚೇತನ್ ಟ್ರೇಡರ್‍ಸ್ ದಿನಸಿ ಸಾಮಾಗ್ರಿಗಳ ಮಳಿಗೆಯು ಅಭಿವೃದ್ಧಿ ಪಥದಲ್ಲಿ ಮುನ್ನೆಡೆಯಲಿ ಎಂದು ಹೇಳಿ ಶುಭ ಹಾರೈಸಿದರು.

ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಜೀವನದಲ್ಲಿ ಭದ್ರ ತಳಪಾಯ ಹೊಂದಲು ಯಾವುದಾದರೊಂದು ಉದ್ಯೋಗದ ಅವಶ್ಯಕತೆ ಇದ್ದೇ ಇದೆ. ಈ ನಿಟ್ಟಿನಲ್ಲಿ ಮಾಲಕರಾದ ಚೇತನ್‌ರವರು ಹೊಸ ಉದ್ಯಮವನ್ನು ಆರಂಭಿಸಿದ್ದಾರೆ. ಗ್ರಾಹಕರಲ್ಲಿ ನಗುಮುಖದ ಸೇವೆ ಹಾಗೂ ಗೌರವದ ಭಾವನೆಯೊಂದಿಗೆ ಗುಣಮಟ್ಟದ ವಸ್ತುಗಳನ್ನು ನೀಡಿದಾಗ ಯಾವುದೇ ಉದ್ದಿಮೆಯು ಯಶಸ್ವಿಯಾಗುತ್ತದೆ ಎಂದು ಹೇಳೀ ಶುಭಹಾರೈಸಿದರು.

ಸ್ಥಳೀಯ ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ ಮಾತನಾಡಿ, ಈ ಸ್ಥಳದಲ್ಲಿ ಈ ಮಳಿಗೆ ಮೊದಲಿನಿಂದಲೂ ಇತ್ತು. ಪ್ರಸ್ತುತ ಹೊಸ ಹುರುಪಿನೊಂದಿಗೆ ಈ ಭಾಗದಲ್ಲಿ ಮತ್ತೊಮ್ಮೆ ಸುಸಜ್ಜಿತವಾಗಿ ಆರಂಭಗೊಂಡಿದೆ. ಗ್ರಾಹಕರು ಈ ಮಳಿಗೆಗೆ ಆಗಮಿಸಿ ವ್ಯವಹಾರ ಮಾಡುವ ಮೂಲಕ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭ ಹಾರೈಸಿದರು.

ಸಾಮೆತ್ತಡ್ಕ ವಾಳೆಯ ಗುರಿಕಾರ ಲ್ಯಾನ್ಸಿ ಮಸ್ಕರೇನ್ಹಸ್‌ರವರ ಪತ್ನಿ ಪ್ರಿಯಲತಾ, ದರ್ಬೆ ವಾಳೆಯ ಗುರಿಕಾರ ವಿನ್ಸೆಂಟ್ ತಾವ್ರೋ(ಮಾಂಡ್ ಸೊಭಾಣ್), ಕಲ್ಲಾರೆ ವಾಳೆಯು ಗುರಿಕಾರ ಜೋನ್ ಪೀಟರ್ ಡಿ’ಸಿಲ್ವ(ವಲ್ಲು), ಫಿಲೋಮಿನಾ ಕಾಲೇಜು ಕ್ಯಾಂಟೀನ್‌ನ ಆನಂದ ಶೆಟ್ಟಿ, ಶೆರಿ ಮಸ್ಕರೇನ್ಹಸ್ ಪರ್ಲಡ್ಕ, ಚಾರ್ಲ್ಸ್ ಫುಡ್ತಾದೋ ಸಾಮೆತ್ತಡ್ಕ, ವಿಜಯಲಕ್ಷ್ಮೀ ಇಲೆಕ್ಟ್ರಿಕಲ್ಸ್‌ನ ಬಾಲಚಂದ್ರ, ರೊನಾಲ್ಡ್ ಪಿಂಟೋ ದರ್ಬೆ, ಪ್ರವೀಣ್ ಪಿಂಟೋ ಕಾವೇರಿಕಟ್ಟೆ, ಜೇಸನ್ ಇಂಜಿನಿಯರಿಂಗ್ ವರ್ಕ್ಸ್‌ನ ಜೇಕಬ್ ಡಿ’ಸೋಜ, ರಿಚರ್ಡ್ ಪಿಂಟೋ ಸಾಮೆತ್ತಡ್ಕ, ಫಿಲೋಮಿನಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನರೇಶ್ ಲೋಬೋ, ಜೋನ್ ಮಸ್ಕರೇನ್ಹಸ್ ಕಲ್ಲಿಮಾರು, ಮಾಯಿದೆ ದೇವುಸ್ ಚರ್ಚ್ ಆರ್ಥಿಕ ಸಮಿತಿಯ ಸದಸ್ಯ ಓಸ್ವಾಲ್ಡ್ ಲೋಬೋ ಸಾಮೆತ್ತಡ್ಕ, ವಿನೋದ್ ಸಿಕ್ವೇರಾ ಸಾಮೆತ್ತಡ್ಕ, ಹಾದಿಲ್, ಪಾವ್ಲ್ ಮಸ್ಕರೇನ್ಹಸ್ ಸಾಮೆತ್ತಡ್ಕ ಸಹಿತ ಹಲವರು ಆಗಮಿಸಿ ಶುಭಹಾರೈಸಿದ್ದಾರೆ. ಚೇತನ್ ಟ್ರೇಡರ್‍ಸ್ ಮಾಲಕ ಚೇತನ್‌ರವರ ತಂದೆ ಕ್ಲೋಡಿಯಸ್ ಡಿ’ಸೋಜರವರು ಸ್ವಾಗತಿಸಿ, ವಂದಿಸಿದರು. ಕ್ಲೋಡಿಯಸ್ ಡಿ’ಸೋಜರವರ ಕುಟುಂಬಿಕರು ಸಹಕರಿಸಿದರು.

ಯಾವುದೇ ಉದ್ಯಮ ಯಶಸ್ವಿಯಾಗಬೇಕಾದರೆ ಗ್ರಾಹಕರ ಪ್ರೋತ್ಸಾಹ ಬೇಕೇ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮಲ್ಲಿ ಉತ್ತಮ ಗುಣಮಟ್ಟದ ಚಿಲ್ಲರೆ ದಿನಸಿ, ತರಕಾರಿ, ಹಾಲು, ಅಗತ್ಯ ಮನೆ ದಿನಸಿ ಸಾಮಾಗ್ರಿಗಳು ದೊರೆಯುತ್ತಿದ್ದು, ಗ್ರಾಹಕರ ಪ್ರೋತ್ಸಾಹ ನಿರಂತರ ಬೇಕಾಗಿದೆ. ನಗುಮುಖದ ಸೇವೆಯೊಂದಿಗೆ, ಗುಣಮಟ್ಟದ ವಸ್ತುಗಳೊಂದಿಗೆ ಗ್ರಾಹಕರ ಸೇವೆಗಾಗಿ ನಾವು ಬದ್ಧರಾಗಿದ್ದೇವೆ ಚೇತನ್ ಡಿ’ಸೋಜ, ಮಾಲಕರು, ಚೇತನ್ ಟ್ರೇಡರ್‍ಸ್, ಸಾಮೆತ್ತಡ್ಕ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.