HomePage_Banner
HomePage_Banner
HomePage_Banner
HomePage_Banner

ರೋಟರಿ ಪುತ್ತೂರು, ಇಡಿಆರ್‌ಟಿ ಸಹಯೋಗದಲ್ಲಿ ಪ್ರಾಜೆಕ್ಟ್ ಸ್ವೀಟ್ ಚೈಲ್ಡ್ ಫಲಾನುಭವಿಗಳಿಗೆ ಇನ್ಸುಲಿನ್, ಗ್ಲುಕೋಮೀಟರ್, ಸಿರಿಂಜ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರೋಟರಿ ಕ್ಲಬ್ ಪುತ್ತೂರು, ಡಾ.ನಝೀರ್ ಅಹಮ್ಮದ್ ಡಯಾಬಿಟಿಸ್ ಸೆಂಟರ್ ಹಾಗೂ ಇಡಿಆರ್‌ಟಿ ಬೆಂಗಳೂರು ಇದರ ಆಶ್ರಯದಲ್ಲಿ ನಡೆದ ವಿಶ್ವ ಮಧುಮೇಹ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆ ಪ್ರಯುಕ್ತ ಡಯಾಬಿಟಿಕ್ ಚಿಲ್ಡ್ರನ್ಸ್ ಕೇರ್ ಸೆಂಟರ್‌ನ `ಪ್ರಾಜೆಕ್ಟ್ ಸ್ವೀಟ್ ಚೈಲ್ಡ್’ ಅಂಗವಾಗಿ ಅರ್ಹ ಫಲಾನುಭವಿಗಳಿಗೆ ಇನ್ಸುಲಿನ್, ಗ್ಲುಕೋಮೀಟರ್, ಸಿರಿಂಜ್ ವಿತರಣೆ ಕಾರ್ಯಕ್ರಮವು ನ.೨೮ ರಂದು ಪುತ್ತೂರು ರೋಟರಿ ಬ್ಲಡ್‌ಬ್ಯಾಂಕ್‌ನ ರೂಫ್‌ಟಾಪ್ ಹಾಲ್‌ನಲ್ಲಿ ಜರಗಿತು.

ವೈದ್ಯಕೀಯ ಹಾಗೂ ಮಧುಮೇಹ ತಜ್ಞರಾದ ಡಾ.ನಝೀರ್ ಅಹಮ್ಮದ್ ಡಯಾಬಿಟಿಸ್ ಸೆಂಟರ್ ಡಾ.ನಝೀರ್ ಅಹಮ್ಮದ್‌ರವರು ಮಾತನಾಡಿ, ಸಕ್ಕರೆ ಕಾಯಿಲೆ ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ವಯೋಮಾನದವರನ್ನು ಕಾಡುತ್ತಿದೆ. ಅದರಲ್ಲೂ ಸುಮಾರು ೫%-೧೦% ಟೈಪ್ ೧ ಡಯಾಬಿಟಿಸ್ ಆಗಿರುತ್ತದೆ. ಸಾಧಾರಣವಾಗಿ ಗುಣಪಡಿಸಲು ಅಸಾಧ್ಯವಾದ ಇದು ನವಜಾತ ಶಿಶುವಿನಿಂದ ಹಿಡಿದು ಸುಮಾರು ೨೦ ವರ್ಷ ಪ್ರಾಯದವರಲ್ಲಿ ಕಂಡುಬರುತ್ತದೆ. ಈ ಮಧುಮೇಹಕ್ಕೆ ತುತ್ತಾದ ಮಕ್ಕಳು ತಮ್ಮ ಜೀವನಪರ್ಯಂತ ಇನ್ಸುಲಿನ್ ಇಂಜೆಕ್ಷನ್ ದಿನಕ್ಕೆ ೪ ರಿಂದ ೫ ಬಾರಿ ತೆಗೆದುಕೊಳ್ಳುವುದು ಮಾತ್ರವಲ್ಲದೆ ಪ್ರತಿದಿನ ೨ ರಿಂದ ೩ ಸಲ ತಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಗ್ಲುಕೋಮೀಟರ್‌ನಿಂದ ಸ್ವತ: ನೋಡಿಕೊಳ್ಳಬೇಕಾಗುತ್ತದೆ. ಇದಕ್ಕೆ ತಿಂಗಳಿಗೆ ಸುಮಾರು ೫ರಿಂದ ೧೦ ಸಾವಿರದವರೆಗೆ ವೆಚ್ಚವಾಗುವುದಲ್ಲದೆ, ಆಗಿಂದಾಗೆ ಸಕ್ಕರೆಯ ಏರಿಳಿತದಿಂದಾಗಿ ಉಂಟಾಗುವ ಇತರ ಸಮಸ್ಯೆಗಳು ಕುಟುಂಬದ ಮೇಲಿನ ಆರ್ಥಿಕ ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದ ಅವರು ಇದನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸದಿದ್ದರೆ ಇದು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ, ಶೈಕ್ಷಣಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಮೂಡಿಸುತ್ತದೆ. ಅಲ್ಲದೆ ದೇಹದಲ್ಲಿನ ಅನಿಯಂತ್ರಿತ ಸಕ್ಕರೆಯ ಅಂಶ ಭವಿಷ್ಯದಲ್ಲಿ ವಿವಿಧ ಅಂಗಾಂಗ ವೈಫಲ್ಯಗಳಿಗೆ ಕಾರಣವಾಗಬಹುದು ಎಂದು ಅವರು ಹೇಳಿದರು.

ಇಡಿಆರ್‌ಟಿ ಬೆಂಗಳೂರು ಇದರ ಕೋಆರ್ಡಿನೇಟರ್ ರತ್ನದೇವಿರವರು ಮಾತನಾಡಿ, ಭಾರತದಾದ್ಯಂತ ಸೇವೆ ನೀಡುತ್ತಿರುವ ಇಡಿಆರ್‌ಟಿ ಸಂಸ್ಥೆಯವರು ಮಧುಮೇಹಿ ಮಕ್ಕಳ ಆರೋಗ್ಯಕ್ಕೆ ಮಾತ್ರವಲ್ಲ, ಶಿಕ್ಷಣಕ್ಕೂ ಬೇಕಾದ ಅಗತ್ಯ ನೆರವನ್ನು ನೀಡುತ್ತಾ ಬಂದಿದೆ. ಮಧುಮೇಹದಿಂದ ಬಳಲುತ್ತಿರುವ ಮಕ್ಕಳು ಎಲ್ಲರಂತೆ ಆನಂದಮಯ ಜೀವನ ನಡೆಸಬೇಕೆನ್ನುವ ಕನಸು ಕಾಣುವುದು ನಿಜ. ಇದಕ್ಕೆ ಪೂರಕವಾಗಿ ಇಡಿಆರ್‌ಟಿ ಸಂಸ್ಥೆಯು ಸಂಸ್ಥೆಯ ಮುಖ್ಯಸ್ಥರಾದ ಡಾ.ಪ್ರಸನ್ನ ಕುಮಾರ್‌ರವರ ನೇತೃತ್ವದಲ್ಲಿ ಅಂತಹ ಅರ್ಹ ಫಲಾನುಭವಿಗಳನ್ನು ಗುರುತಿಸಿ ನೆರವನ್ನು ನೀಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜರವರು ಮಾತನಾಡಿ, ಬೆಂಗಳೂರಿನ ಇಡಿಆರ್‌ಟಿ ಸಂಸ್ಥೆ ಹಾಗೂ ಡಾ.ನಝೀರ್ ಅಹಮ್ಮದ್‌ರವರು ಮಧುಮೇಹದಿಂದ ಬಳಲುತ್ತಿರುವ ಟೈಪ್ ೧ ಡಯಾಬಿಟಿಸ್ ಮಕ್ಕಳ ಆರೋಗ್ಯದತ್ತ ಗಮನ ಹರಿಸುವ ಮೂಲಕ ಅಂತಹ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ. ಸ್ವಲ್ಪ ಬೆಳೆದವರಲ್ಲಿ ಪದೇ ಪದೇ ಇನ್ಸುಲಿನ್ ತೆಗೆದುಕೊಳ್ಳುವಾಗ ಸ್ವಲ್ಪ ಅಳುಕು ಮನೆಮಾಡಿರುವುದು ಸಹಜ ಎಂದ ಅವರು ದೈಹಿಕ ಅಶಕ್ತತೆ, ಆರೋಗ್ಯ ಅಶಕ್ತತೆಯ ಕೊರತೆಯುಳ್ಳವರು ಕೀಳಿರಿಮೆ ಬಿಟ್ಟು ಬದುಕುವುದು ಹೇಗೆ ಎಂಬುದನ್ನು ಕರಗತ ಮಾಡಿಕೊಳ್ಳಬೇಕು. ನಮ್ಮನ್ನು ಗುರುತಿಸುವವರು, ಧೈರ್ಯ ಕೊಡುವವರು ಇದ್ದಾರೆ ಎಂಬ ಭರವಸೆಯ ಆತ್ಮಬಲವನ್ನು ಮಧುಮೇಹಿ ಫಲಾನುಭವಿಗಳು ಬೆಳೆಸಿಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.

ಪುತ್ತೂರು ಬ್ಲಡ್‌ಬ್ಯಾಂಕಿನ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್, ರೋಟರಿ ವಲಯ ಸೇನಾನಿ ಎ.ಜೆ ರೈಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ಪ್ರೊ|ದತ್ತಾತ್ರೇಯ ರಾವ್ ವಂದಿಸಿದರು.

ಟೈಪ್ ೧ ಮಧುಮೇಹದಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಮಾಹಿತಿಯಿದ್ದಲ್ಲಿ ಸಂಪರ್ಕಿಸಿ…
ವೈದ್ಯರು, ಔಷಧ ಮಾರಾಟಗಾರರು, ಶಾಲಾ ಮುಖ್ಯಸ್ಥರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಅಥವಾ ಇನ್ನಾವುದೇ ಸಹೃದಯಿ ನಾಗರಿಕರು ಟೈಪ್ ೧ ಮಧುಮೇಹದಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಮಾಹಿತಿಯಿದ್ದಲ್ಲಿ ಮಕ್ಕಳ ಹೆಸರು ಮತ್ತು ವಿಳಾಸವನ್ನು ನೀಡಬೇಕಾಗಿ ಡಾ.ನಝೀರ್ ಅಹಮ್ಮದ್ ಹಾಗೂ ರೋಟರಿ ಕ್ಲಬ್ ಪುತ್ತೂರು ವತಿಯಿಂದ ವಿನಂತಿಸಲಾಗಿದೆ. ಇಂತಹ ಮಕ್ಕಳಿಗೆ ನೆರವಾಗಲು ಪ್ರಾಜೆಕ್ಟ್ ಸ್ವೀಟ್ ಚೈಲ್ಡ್(ರೋಟರಿ ಪುತ್ತೂರು ಡಯಾಬಿಟಿಕ್ ಚಿಲ್ಡ್ರನ್ ಕೇರ್ ಸೆಂಟರ್) ಎಂಬ ಯೋಜನೆಯನ್ನು ರೋಟರಿ ಕ್ಲಬ್ ಪುತ್ತೂರು ವತಿಯಿಂದ ಡಾ|ನಝೀರ್ ಡಯಾಬಿಟಿಕ್ ಸೆಂಟರ್ ಮತ್ತು ಇಡಿಆರ್‌ಟಿ ಬೆಂಗಳೂರು ಇವರ ಸಹಯೋಗದೊಂದಿಗೆ ರೂಪುಗೊಳಿಸಲಾಗಿದೆ. ಈ ಯೋಜನೆಯು ಮಕ್ಕಳಿಗೆ ವೈದ್ಯಕೀಯ ನೆರವು, ಅವಶ್ಯಕ ವೈದ್ಯಕೀಯ ಉಪಕರಣಗಳು, ಔಷಧ ವಿತರಿಸುವ ಮತ್ತು ಅವಶ್ಯಕತೆ ಇರುವವರಿಗೆ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ಒದಗಿಸುವ ಉದ್ದೇಶಗಳನ್ನು ಹೊಂದಿದೆ. ಯೋಜನೆಗೆ ಆರ್ಥಿಕ ನೆರವು ಮತ್ತು ಬೆಂಬಲ ನೀಡಬಯಸುವ ದಾನಿಗಳು ರೋಟರಿ ಕ್ಲಬ್ ಅನ್ನು ಸಂಪರ್ಕಿಸಬಹುದು.

ಈ ಸಂದರ್ಭದಲ್ಲಿ ಟೈಪ್ ೧ ಮಧುಮೇಹದಿಂದ ಬಳಲುತ್ತಿರುವ ಅರ್ಹ ೭ ಮಂದಿ ಫಲಾನುಭವಿಗಳಿಗೆ ಇನ್ಸುಲಿನ್, ಗ್ಲುಕೋಮೀಟರ್, ಸಿರಿಂಜ್ ಜೊತೆಗೆ ಸ್ಕೂಲ್ ಬ್ಯಾಗ್, ಪೌಚ್‌ನ್ನು ವಿತರಿಸಲಾಯಿತು. ಮಾತ್ರವಲ್ಲದೆ ಪೌಚ್ ಒಳಗೆ ಇನ್ಸುಲಿನ್, ಸಿರಿಂಜ್‌ನ್ನು ಹೇಗೆ ಜೋಡಿಸಿಡುವುದು ಎಂಬುದರ ಕುರಿತು ಮಾಹಿತಿಯನ್ನು ಜೊತೆಗೆ ಫಲಾನುಭವಿ ಮಕ್ಕಳ ವಾಟ್ಸಫ್ ಗ್ರೂಪ್‌ನ್ನು ರಚಿಸಿ, ಟೈಪ್ ೧ ಮಧುಮೇಹದ ಕುರಿತು ಮಾಡಲಾದ ಯೂಟ್ಯೂಬ್ ವಿಡಿಯೋಗಳನ್ನು ಗಮನಿಸಬೇಕಾಗಿ ಡಾ.ನಝೀರ್ ಅಹಮ್ಮದ್‌ರವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.