HomePage_Banner
HomePage_Banner
HomePage_Banner
HomePage_Banner

ನೆಲ್ಯಾಡಿ: ಸಾಗರ್ ಹೋಟೆಲ್ ಮಾಲಿಕ ಹಂಝ ಸಾಗರ್ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಇಲ್ಲಿನ ಸಾಗರ್ ಹೋಟೆಲ್ ಮಾಲಕ, ಸಾಮಾಜಿಕ ಕಾರ್ಯಕರ್ತ ಉಮರ ನಾಯಕ, ಸುನ್ನಿ ಸಂಘ ಕುಟುಂಬದ ರೂವಾರಿ ಯು.ಕೆ.ಹಂಝ ಸಾಗರ್(೬೯ವ.)ರವರು ಅಸೌಖ್ಯದಿಂದ ನ.೩೦ರಂದು ಬೆಳಿಗ್ಗೆ ನೆಲ್ಯಾಡಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಬಾವುಞಿ ಮತ್ತು ಆಸಿಯಮ್ಮ ದಂಪತಿಯ ಪುತ್ರರಾದ ಇವರು ಮೂಲತಃ ಉಪ್ಪಿನಂಗಡಿ ಕೆಂಪಿಮಜಲು ನಿವಾಸಿಯಾಗಿದ್ದಾರೆ. ಕಳೆದ ಸುಮಾರು ಮೂವತ್ತೈದು ವರ್ಷಗಳಿಂದ ನೆಲ್ಯಾಡಿಯಲ್ಲಿ ನೆಲೆಸಿ ಹೋಟೆಲ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರೂ ಆಗಿದ್ದರು. ಶೈಖುನಾ ತಾಜುಲ್ ಉಲಮಾ ಇವರ ಆಪ್ತರಾಗಿದ್ದ ಇವರು ಸುನ್ನಿ ಮ್ಯಾನೇಜ್ ಮೆಂಟ್ ಅಸೋಶಿಯೇಶನ್ ಸದಸ್ಯರೂ, ನೆಲ್ಯಾಡಿ ಸುನ್ನಿ ಯುವಜನ ಸಂಘ ಇದರ ಸ್ಥಾಪಕರು ಆಗಿದ್ದಾರೆ. ರಾಜಕೀಯ, ಶೈಕ್ಷಣಿಕ ರಂಗದಲ್ಲಿಯೂ ತೊಡಗಿಸಿಕೊಂಡಿದ್ದರು. ಇವರು ಕಳೆದ ೧ ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮೃತರು ಆರು ಮಂದಿ ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಕರ್ನಾಟಕ ರಾಜ್ಯ ಸುನ್ನೀ ಸಂಘಟನೆಗಳ ನಾಯಕರು, ಜಿಲ್ಲಾ ನೇತಾರರು ಸಂತಾಪ ವ್ಯಕ್ತಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.