HomePage_Banner
HomePage_Banner
HomePage_Banner
HomePage_Banner

ನೆಲ್ಯಾಡಿ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಶಾಖೆ ಡೆಂಜ ಕಾಂಪ್ಲೆಕ್ಸ್‌ಗೆ ಸ್ಥಳಾಂತರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜತ್ವದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ನೆಲ್ಯಾಡಿ ಶಾಖೆ ಬೆಥಲ್ ಕಾಂಪ್ಲೆಕ್ಸ್‌ನಿಂದ ನೆಲ್ಯಾಡಿ ಪೇಟೆಯಲ್ಲಿರುವ ಡೆಂಜ ಕಾಂಪ್ಲೆಕ್ಸ್‌ಗೆ ನ.೩೦ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿದ ಅವರು, ಶುದ್ಧ ಭಾವನೆಯಿಂದ ವ್ಯವಹಾರ ಮಾಡಿದಲ್ಲಿ ಯಾವುದೇ ಸಂಸ್ಥೆ ಪ್ರಗತಿ ಪಥದಲ್ಲಿ ಮುಂದುವರಿಯಲು ಸಾಧ್ಯವಿದೆ. ಇದರ ಜೊತೆಗೆ ಮನುಷ್ಯನ ಪ್ರಗತಿಯನ್ನೂ ಕಾಣಲು ಸಾಧ್ಯವಿದೆ. ಕೊರೋನಾದಂತಹ ಸಂದರ್ಭದಲ್ಲಿಯೂ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ತನ್ನ ವ್ಯವಹಾರದಲ್ಲಿ ಪ್ರಗತಿ ಸಾಧಿಸಿದೆ. ಸಂಸ್ಥೆ ಇನ್ನೂ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದರು. ಮುಖ್ಯ ಅತಿಥಿಯಾಗಿದ್ದ ಒಕ್ಕಲಿಗ ಗೌಡ ಸೇವಾ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಹೆಚ್.ಡಿ.ಶಿವರಾಮ್‌ರವರು ಮಾತನಾಡಿ, ಸಂಘವೂ ಇಲಾಖೆಯ ಅನುಮತಿ ಪಡೆದುಕೊಂಡು ಹೊರ ತಾಲೂಕು, ಜಿಲ್ಲೆಗಳಿಗೂ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಳ್ಳಬೇಕು. ಈ ಮೂಲಕ ಸಮಾಜದ ಎಲ್ಲಾ ವರ್ಗದ ಜನರಿಗೆ ಸಂಘದಿಂದ ಪ್ರಯೋಜನ ಸಿಗಬೇಕೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿಯವರು, ೨೦೦೨ರಲ್ಲಿ ಪುತ್ತೂರಿನಲ್ಲಿ ಆರಂಭಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘಕ್ಕೆ ಮೊದಲ ೫ ವರ್ಷ ಸವಾಲಿನ ವರ್ಷವಾಗಿತ್ತು. ಸದಸ್ಯರಿಗೆ ಡಿವಿಡೆಂಟ್ ನೀಡುವ ಸಾಹಸಕ್ಕೆ ಹೋಗಿರಲಿಲ್ಲ. ೨೦೦೯ರಲ್ಲಿ ಕಡಬ, ೨೦೧೧ರಲ್ಲಿ ಉಪ್ಪಿನಂಗಡಿ, ೨೦೧೪ರಲ್ಲಿ ನೆಲ್ಯಾಡಿ, ೨೦೧೫ರಲ್ಲಿ ಕುಂಬ್ರ, ೨೦೨೦ರಲ್ಲಿ ಆಲಂಕಾರಿನಲ್ಲಿ ಶಾಖೆ ಆರಂಭಿಸಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಶೇ.೯೭ರಷ್ಟು ಸಾಲ ವಸೂಲಾತಿಯಾಗಿದೆ. ೧೪೧ ಕೋಟಿ ರೂ.ವ್ಯವಹಾರ ನಡೆಸಿ ೬೩ ಲಕ್ಷ ರೂ.ನಿವ್ವಳ ಲಾಭಗಳಿಸಿದೆ. ಲಾಭಾಂಶದಲ್ಲಿ ವಿಂಗಡಣೆ ಮಾಡಿಟ್ಟ ಹಣದಿಂದಲೇ ಕೇಂದ್ರ ಕಚೇರಿಗೆ ಪುತ್ತೂರಿನಲ್ಲಿ ಸ್ವಂತ ಕಟ್ಟಡ ಖರೀದಿಸಲಾಗಿದೆ. ಕುಂಬ್ರ,ಉಪ್ಪಿನಂಗಡಿಯ ಶಾಖಾ ಕಚೇರಿಗಳನ್ನು ವಿಸ್ತರಿಸಲಾಗಿದೆ ಎಂದರು. ೨೦೧೪ರಲ್ಲಿ ನೆಲ್ಯಾಡಿಯಲ್ಲಿ ಆರಂಭಗೊಂಡ ಶಾಖೆಯಲ್ಲಿ ಕಳೆದ ವರ್ಷ ೨೦ ಕೋಟಿ ರೂ.ವ್ಯವಹಾರವಾಗಿದ್ದು ೧೩ ಲಕ್ಷ ರೂ.,ಲಾಭವೂ ಪಡೆದಿದೆ. ಇಲ್ಲಿನ ಸಲಹಾ ಸಮಿತಿ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯಿಂದ ಸಂಘವೂ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಗ್ರಾಹಕರಿಗೆ ಇನ್ನಷ್ಟೂ ಉತ್ತಮ ಸೇವೆ ನೀಡುವ ಸಲುವಾಗಿ ನೆಲ್ಯಾಡಿ ಶಾಖೆಯನ್ನು ಡೆಂಜ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಳಿಸಲಾಗಿದೆ. ಗ್ರಾಹಕರು ಮುಂದೆಯೂ ಸಹಕರಿಸುವಂತೆ ಹೇಳಿದರು.

ಗೌರವಾರ್ಪಣೆ:
ಡೆಂಜ ಕಾಂಪ್ಲೆಕ್ಸ್ ಮಾಲಕ ಪುರಂದರ ಗೌಡ ಹಾಗೂ ಜಾಹ್ನವಿ ದಂಪತಿಗೆ ಸ್ವಾಮೀಜಿಯವರು ಗುಲಾಬಿ ಹೂ ನೀಡಿ ಗೌರವಿಸಿದರು. ನೆಲ್ಯಾಡಿ ಶಾಖಾ ಸಲಹಾ ಸಮಿತಿ ಅಧ್ಯಕ್ಷ , ಸಂಘದ ನಿರ್ದೇಶಕರೂ ಆದ ನಾಗೇಶ್ ನಳಿಯಾರು, ಸಲಹಾ ಸಮಿತಿ ಉಪಾಧ್ಯಕ್ಷ, ಸಂಘದ ನಿರ್ದೇಶಕರೂ ಆದ ವೆಂಕಟ್ರಮಣ ಗೌಡ ಕರೆಂಕಿ, ಸಲಹಾ ಸಮಿತಿ ಸದಸ್ಯರುಗಳಾದ ಚಂದ್ರಶೇಖರ ಬ್ರಂತೋಡು, ಸುಂದರ ಗೌಡ ಅತ್ರಿಜಾಲು, ರಾಧಾಕೃಷ್ಣ ಕೆರ್ನಡ್ಕ, ತುಕ್ರಪ್ಪ ಗೌಡ ಗೋಳಿತ್ತೊಟ್ಟು, ನೋಣಯ್ಯ ಗೌಡ ಡೆಬ್ಬೇಲಿ, ಡೊಂಬಯ್ಯ ಗೌಡ ಶಿರಾಡಿ, ಪುರಂದರ ಗೌಡ ಕಡೀರ, ಸುಪ್ರಿತಾ ರವಿಚಂದ್ರ ಹೊಸವೊಕ್ಲು, ಲೀಲಾವತಿ ಪ್ರಭಾನಂದ, ಶಾಖಾ ವ್ಯವಸ್ಥಾಪಕ ಶಿವಪ್ರಸಾದ್, ಎಕೌಂಟೆಂಟ್ ಹರೀಶ್ ವೈ, ಗುಮಾಸ್ತ ರಾಧಾಕೃಷ್ಣ, ಎಟೆಂಡರ್ ಅಜಿತ್‌ಕುಮಾರ್, ಪಿಗ್ಮಿ ಸಂಗ್ರಾಹಕ ಪ್ರವೀಣ್‌ಕುಮಾರ್‌ರವರಿಗೆ ಸ್ವಾಮೀಜಿಯವರು ಗುಲಾಬಿ ಹೂ, ಮಂತ್ರಾಕ್ಷತೆ ನೀಡಿ ಗೌರವಿಸಿದರು.

ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ಶಾಖಾ ಸಲಹಾ ಸಮಿತಿ ಅಧ್ಯಕ್ಷ ನಾಗೇಶ್ ನಳಿಯಾರು, ಶಾಖಾ ವ್ಯವಸ್ಥಾಪಕ ಶಿವಪ್ರಸಾದ್ ಅಗರ್ತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾಗೇಶ್ ನಳಿಯಾರು ಸ್ವಾಗತಿಸಿ, ಸುಧಾಕರ ಕೆ.,ವಂದಿಸಿದರು. ಸಲಹಾ ಸಮಿತಿ ಸದಸ್ಯ ರಾಧಾಕೃಷ್ಣ ಕೆರ್ನಡ್ಕ ಕಾರ್‍ಯಕ್ರಮ ನಿರೂಪಿಸಿದರು. ಅಶೋಕ್ ಪ್ರಾರ್ಥಿಸಿದರು.

ಸಂಘದ ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ, ಶಿವರಾಮ ಗೌಡ ಇದ್ಯಪೆ, ವೆಂಕಟ್ರಮಣ ಗೌಡ ಕರೆಂಕಿ, ಸಾಂತಪ್ಪ ಗೌಡ ಪಿಜಕ್ಕಳ, ಜಿನ್ನಪ್ಪ ಗೌಡ ಮುಳುವೇಳು, ಮಾಜಿ ನಿರ್ದೇಶಕರಾದ ಲಿಂಗಪ್ಪ ಗೌಡ ಕಡೆಂಬ್ಯಾಲು, ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಸದಸ್ಯೆಯರಾದ ಕೆ.ಟಿ.ವಲ್ಸಮ್ಮ, ಉಷಾ ಅಂಚನ್, ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ನೆಲ್ಯಾಡಿ ಗ್ರಾ.ಪಂ.ನಿಕಟಪೂರ್ವಾಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ಕೌಕ್ರಾಡಿ ಗ್ರಾ.ಪಂ.ನಿಕಟಪೂರ್ವಾಧ್ಯಕ್ಷ ಎಂ.ಕೆ.ಇಬ್ರಾಹಿಂ, ನಿಕಟಪೂರ್ವ ಸದಸ್ಯ ಲೋಕೇಶ್ ಬಾಣಜಾಲು, ಎಪಿಎಂಸಿ ಸದಸ್ಯ ಕುಶಾಲಪ್ಪ ಗೌಡ ಅನಿಲ, ನಿವೃತ್ತ ಜೆಟಿಒ ರಾಕೇಶ್, ಹೆಡ್‌ಕಾನ್ಸ್‌ಟೇಬಲ್ ಶೇಖರ ಗೌಡ, ಗಣೇಶ್ ಕಾಂಪ್ಲೆಕ್ಸ್ ಮಾಲಕ ರಾಮಣ್ಣ ಗೌಡ, ಆಲಂಕಾರು ಶಾಖೆಯ ಸಲಹಾ ಸಮಿತಿ ಸದಸ್ಯರಾದ ರಾಮಣ್ಣ ಗೌಡ ದೋಳ, ಸದಾನಂದ ಕುಂಟ್ಯಾನ, ರಾಮಣ್ಣ ಗೌಡ ಸುರುಳಿ, ಉಪ್ಪಿನಂಗಡಿ ಶಾಖೆ ಸಲಹಾ ಸಮಿತಿ ಸದಸ್ಯ ರಮೇಶ್ ಬೇರಿಕೆ, ಉಪ್ಪಿನಂಗಡಿ ಉದ್ಯಮಿ ವೆಂಕಪ್ಪ ಗೌಡ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಮುಂಡಾಳಗುತ್ತು, ಸಿಬ್ಬಂದಿ ಮಹೇಶ್ ಎಂ.ಟಿ., ಒಕ್ಕಲಿಗ ಗೌಡ ಸೇವಾ ಸಂಘದ ನೆಲ್ಯಾಡಿ ವಲಯ ಉಸ್ತುವಾರಿ ಪದ್ಮನಾಭ ಬೇರಿಕೆ ಸಿರಿಬಾಗಿಲು, ಆಲಂಕಾರು ಶಾಖಾ ವ್ಯವಸ್ಥಾಪಕ ವಿನೋದ್‌ರಾಜ್, ಪುತ್ತೂರು ಶಾಖಾ ವ್ಯವಸ್ಥಾಪಕಿ ತೇಜಸ್ವಿನಿ, ಕಡಬ ಶಾಖಾ ಸಿಬ್ಬಂದಿ ಕಾರ್ತಿಕ್, ಉಪ್ಪಿನಂಗಡಿ ಶಾಖಾ ಸಿಬ್ಬಂದಿ ಚೇತನ್‌ಕುಮಾರ್, ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ನೆಲ್ಯಾಡಿ ಶಾಖಾ ವ್ಯವಸ್ಥಾಪಕ ಶ್ರೇಯಸ್ ಶೆಟ್ಟಿ, ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನೆಲ್ಯಾಡಿ ಶಾಖಾ ವ್ಯವಸ್ಥಾಪಕ ಇತೇಶ್, ಪ್ರಮುಖರಾದ ರವಿ ಮುಂಗ್ಲಿಮನೆ, ರವಿಚಂದ್ರ ಹೊಸವೊಕ್ಲು, ಸುರೇಶ್ ಪಡಿಪಂಡ, ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಸತೀಶ್ ಕೆ.ಎಸ್.ದುರ್ಗಾಶ್ರೀ, ಸತೀಶ್ಚಂದ್ರ ಗೌಡ ಅತ್ರಿಜಾಲು ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಶುಭಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.