HomePage_Banner
HomePage_Banner
HomePage_Banner
HomePage_Banner

ಕೀರ್ತನಾ ಡೆವೆಲಪರ್‌ರವರ 4ನೇ ಪ್ರಾಜೆಕ್ಟ್ ‘ಕೀರ್ತನಾ ಪರ್ಲ್ಸ್’ ಮಂಜಲ್ಪಡ್ಪುವಿನಲ್ಲಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • 45 ಮನೆಗಳಿರುವ ವಸತಿ ಸಮುಚ್ಛಾಯ
  • ವಿಶೇಷ ಕೊಡುಗೆಯಾಗಿ ರಿಜಿಸ್ಟ್ರೇಷನ್ ಚಾರ್ಜ್ ಸಂಸ್ಥೆಯಿಂದಲೇ ಪಾವತಿ

ಪುತ್ತೂರು: ವಸತಿ ಸಮುಚ್ಚಾಯ ಸೇರಿದಂತೆ ವಾಣಿಜ್ಯ ಸಂಕೀರ್ಣ ನಿರ್ಮಾಣದಲ್ಲಿ ಪ್ರತಿಷ್ಠಿತ ಸಂಸ್ಥೆ ಎನಿಸಿಕೊಂಡಿರುವ ಕೀರ್ತನಾ ಡೆವೆಲಪರ್ ಅವರ ನಾಲ್ಕನೇ ಪ್ರಾಜೆಕ್ಟ್ ಆಗಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಂಜಲ್ಪಡ್ಪು ಕಾರ್ಜಾಲುವಿನಲ್ಲಿ ನಿರ್ಮಾಣ ಆಗಿರುವ ಕೀರ್ತನಾ ಪರ್ಲ್ಸ್ ವಸತಿ ಸಮುಚ್ಛಾಯ ನ.30ರಂದು ಉದ್ಘಾಟನೆಗೊಂಡಿತು.

ಪ್ರತಿ ಅಪಾರ್ಟ್‌ಮೆಂಟ್ ಕೂಡಾ ಅತ್ಯಾಧುನಿಕ ಶೈಲಿಯಲ್ಲಿ ಪೂರ್ಣ ಸ್ಥಳಾವಕಾಶ ಬಳಸಿ ಪರಿಪೂರ್ಣ ನಿರ್ಮಾಣ, ಬ್ರ್ಯಾಂಡೆಡ್ ಸಲಕರಣಗಳಿಂದ ಗಮನ ಸೆಳೆಯುತ್ತಿರುವ ವಸತಿ ಸಮುಚ್ಛಾಯವನ್ನು ತಂತ್ರಿಗಳಾದ ಬ್ರಹ್ಮಶ್ರೀ ವೇ ಮೂ ಚಕ್ರಪಾಣಿ ದೇವಪೂಜಿತ್ತಾಯ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಗತಿ ಸ್ಪೆಷಾಲಿಟಿ ಅಸ್ಪತ್ರೆಯ ಡಾ. ಶ್ರೀಪತಿ ರಾವ್, ಉದ್ಯಮಿ ಸಂತೋಷ್ ಕುಮಾರ್ ರೈ ನಳಿಲು, ಸುಳ್ಯ ಕಾಲೇಜಿನ ಪ್ರಾಂಶುಪಾಲೆ ಹರಿಣಿಪುತ್ತೂರಾಯ, ಸ್ವಣೋದ್ಯಮಿ ಬಲರಾಮ ಆಚಾರ್ಯ, ಮುರಳೀಧರ ಬಲ್ಲಾಳ್, ಪುಷ್ಪಾ ಮುರಳೀಧರ್, ಶ್ರೀವತ್ಸಲಾ ಶಿವಕುಮಾರ್, ಅನ್ನಪೂರ್ಣೇಶ್ವರಿ, ಯಶೋದ ಬಲ್ಲಾಳ್, ಅನ್ನಪೂರ್ಣೇಶ್ವರೀ ರಾಜೇಶ್ ವರ್ಮ, ಗುರು ರಂಗಯ್ಯ ಬಲ್ಲಾಲ್, ಶಿವಪ್ರಸಾದ್, ಹರೀಶ್ ಕುಮಾರ್, ಸುದರ್ಶನ ವಾಣಿ, ವೀಣಾ ಕುಮಾರಿ ಸೇರಿದಂತೆ ಅನೇಕ ಮಂದಿ ಉಪಸ್ಥಿತರಿದ್ದರು. ವಸತಿ ಸಮುಚ್ಛಾಯದ ವೀಕ್ಷಣೆಗಾಗಿ ಅನೇಕ ಮಂದಿ ಗಣ್ಯರು ಸಂಜೆಯ ತನಕವೂ ಆಗಮಿಸುತ್ತಿದ್ದರು.

ಗ್ರಾಹಕರಿಗೆ ಸಂಪೂರ್ಣವಾಗಿ ವಿಶ್ವಾಸಭರಿತ ಯೋಜನೆ:
ಈ ಸಮುಚ್ಚಯದಲ್ಲಿ ವಿಸಿಟರ್ ವೈಟಿಂಗ್ ಲಾಂಜ್‌ನೊಂದಿಗೆ ಗ್ರ್ಯಾಂಡ್ ಎಂಟ್ರೆನ್ಸ್ ಲಾಬಿ, ಅಟೋ ಡೋರ್‌ವುಳ್ಳ ತಲಾ 8 ಮಂದಿ ಸಾಮರ್ಥ್ಯದ 2 ಹೈಸ್ಪೀಡ್ ಲಿಫ್ಟ್‌ಗಳು, ಮಲ್ಟಿ ಪರ್ಪಸ್ ಸಭಾಂಗಣ, 24 ಗಂಟೆನೀರು, ವಿದ್ಯುತ್, ವಿಶೇಷ ಭದ್ರತೆ, ಸಿಸಿಟಿವಿ ಮೊದಲಾದ ಸೌಲಭ್ಯಗಳಿವೆ. ತಳ ಮತ್ತು ನೆಲ ಅಂತಸ್ತು ಸೇರಿ ಒಟ್ಟು 5 ಅಂತಸ್ತುಗಳಿವೆ. ಎಲ್ಲಾ ಅಂತಸ್ತುಗಳಲ್ಲಿ 3 ಬಿಎಚ್‌ಕೆಯ 35 ಪ್ಲ್ಯಾಟ್‌ಗಳು, 2 ಬಿಎಚ್‌ಕೆಯ 5 ಫ್ಲ್ಯಾಟ್‌ಗಳಿವೆ. ವಿಶಾಲವಾದ ಪಾರ್ಕಿಂಗ್‌ನಲ್ಲಿ ವಿವಿಧ ವಾಹನಗಳಿಗೂ ಮತ್ತು ಸಂದರ್ಶಕರ ವಾಹನ ನಿಲ್ಲಿಸಲು ಸಾವಕಾಶವಾಗಿ ವ್ಯವಸ್ಥೆ ಕಲ್ಪಿಸಲಾಗಿದೆ.

ರಿಜೆಸ್ಟ್ರೇಷನ್ ಚಾರ್ಜ್ ಸಂಸ್ಥೆಯಿಂದಲೆ ಪಾವತಿ:
ಉದ್ಘಾಟನೆಯ ಕೊಡುಗೆಯಾಗಿ ಪ್ಲ್ಯಾಟ್ ಖರೀದಿಗೆ ರಿಜೆಸ್ಟ್ರೇಷನ್ ಚಾರ್ಜ್ ಅನ್ನು ಸಂಸ್ಥೆಯ ವತಿಯಿಂದ ಭರಿಸಲಾಗುತ್ತದೆ. ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯದ ವ್ಯವಸ್ಥೆಯನ್ನು ಮಾಡಿ ಕೊಡಲಾಗುವುದು. ಪ್ಲ್ಯಾಟ್ ಕಾಯ್ದಿರಿಸುವಿಕೆಗಾಗಿ ಮೊ: 8197000422 ಮತ್ತು 9482183160 ಅನ್ನು ಸಂಪರ್ಕಿಸುವಂತೆ ಸಂಸ್ಥೆಯ ಮಾಲಕರಾದ ಪ್ರತಾಪ್‌ಸಿಂಹ ವರ್ಮ ಮತ್ತು ಪ್ರಸನ್ನ ಕುಮಾರ್ ಅವರು ತಿಳಿಸಿದ್ದಾರೆ.

ಈಗಾಗಲೇ 37 ವಸತಿ ಸಮುಚ್ಛಾಯದ ಬೊಳುವಾರಿನ ಕೀರ್ತನಾ ರೆಸಿಡೆನ್ಸಿ, ಕಲ್ಲಿಮಾರಿನ 12 ವಸತಿ ಸಮುಚ್ಛಾಯ ಮತ್ತು ಕಮರ್ಷಿಯಲ್ ಕಾಂಪ್ಲೆಕ್ಸ್ ಒಳಗೊಂಡ ಕೀರ್ತನಾ ಪಾರೆಡೈಸ್, ಕೆಮ್ಮಾಯಿಯಲ್ಲಿ 24 ವಸತಿ ಸಮುಚ್ಛಾಯವನ್ನೊಳಗೊಂಡ ಕೀರ್ತನಾಸ್ ರಾಧಾ ರೆಸಿಡೆನ್ಸಿ, ಗೋಳಿಕಟ್ಟೆಯಲ್ಲಿ 5 ವಸತಿ ಸಮುಚ್ಛಾಯ ಮತ್ತು ಕಮರ್ಷಿಯಲ್ ಕಾಂಪ್ಲೆಕ್ಸ್ ಒಳಗೊಂಡ ಕೀರ್ತನಾ ಪಾರಮೌಂಟ್, ನೆಹರುನಗರದಲ್ಲಿರುವ ಮೂರು ಮಹಡಿಯ ಸುಲೈಮಾನ್ ಟವರ್ ನಿರ್ಮಾಣದ ಮೂಲಕ ಯಶಸ್ವಿ ಡೆವೆಲಪರ್ ಆಗಿ ಕೀರ್ತಾನಾ ಡೆವೆಲಪರ್ ಮೂಡಿ ಬಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.