HomePage_Banner
HomePage_Banner
HomePage_Banner
HomePage_Banner

ಗೋ ವಧೆ ನಿಷೇಧ ಕಾನೂನು ಜಾರಿಗೊಳಿಸುವಂತೆ ವಿಹಿಂಪ, ಬಜರಂಗದಳದಿಂದ ಗ್ರಾ.ಪಂ ಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕದಲ್ಲಿ ಈಗ ಜಾರಿಯಲ್ಲಿರುವ ಗೋಹತ್ಯಾ ನಿಷೇಧ ಕಾಯ್ದೆ (1964)ತುಂಬಾ ದುರ್ಬಲವಾಗಿದ್ದು ರಾಜ್ಯಾದ್ಯಂತ ನಿರಂತರ,ದಿನಂಪ್ರತಿ ಸಾವಿರಾರು ಗೋವುಗಳ ವಧೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಬಲ ಗೊ ವದೇ ನಿಷೇದ ಆದೇಶ ತಕ್ಷಣ ಜಾರಿ ಮಾಡುವಂತೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಗ್ರಾಮ ಗ್ರಾಮಗಳಲ್ಲಿ ಪಂಚಾಯತ್ ಆಡಳಿತಾಧಿಕಾರಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡುವ ಅಭಿಯಾನ ನಡೆಯುತ್ತಿದ್ದು ವಿಹೀಂಪ ಮತ್ತು ಬಜರಂಗದಳ ಇರ್ದೆ ಶಿವಾಜಿ ಘಟಕದಿಂದ ನ.30ರಂದು ಮನವಿ ನೀಡಲಾಯಿತು.

ಹಿಂದೂಗಳಿಗೆ ಪೂಜನೀಯವಾಗಿರುವ ಗೋಮಾತೆಗೆ ಹಿಂಸೆ,ಪದೆ ಮಾಡುವುದರಿಂದ ಹಿಂದುಗಳಾದ ನಮ್ಮ ಭಾವನೆಗೆ ಘಾಸಿಯಾಗುತ್ತಿರುವುದು ಮಾತ್ರವಲ್ಲದೇ ಅದರ ಪರಿಣಾಮದಿಂದ ರಾಜ್ಯದಲ್ಲಿ ಪದೇ ಪದೇ ಪ್ರಕೃತಿ ವಿಕೋಪಬರಗಾಲ ಮುಂತಾದವುಗಳು ಸಂಭವಿಸಿ ದುರ್ಭಿಕ್ಷೆಗೆ ಕಾಲವಾಗಿದೆ. ಮಾರಕ ರೋಗ ರುಜಿನಗಳು ಬರುವುತ್ತಿರುವುದು ಗೋ ಮಾತೆಯ ಶಾಪದಿಂದ ಎಂಬುವುದು ನಮ್ಮ ನಂಬಿಕೆ ಗೋ ವದೇ, ಗೋ ಹಿಂಸೆ ನಿಲ್ಲಿಸಲು ತಪಿತಸ್ತರಿಗೆ 14ವರ್ಷ ಜೈಲು ವಾಸ 10 ಲಕ್ಷ ದಂಡ ವಿಧಿಸುವ ಹಾಗೂ ಹಿಂನಾತ್ಮಕ ಗೋ ಸಾಗಾಟ ಮಾಡುವ ವಾಹನಗಳನ್ನು ಶಾಶ್ವತವಾಗೆ ಸರಕಾರಕ್ಕೆ ಮುಟ್ಟುಗೋಲು ಹಾಕಲು ಅವಕಾಶ ಕೊಡುವ ಪ್ರಭು ಗೊ ವದೇ ನಿಷೇದ ಆದೇಶ ತಕ್ಷಣ ಜಾರಿತರಲು ಡೀ ಹಿಂದೂ ಸಮಾಜದ ಪರವಾಗಿ ಆಗ್ರಹಿಸುತ್ತಿದ್ದೇವೆ.

ರಾಜ್ಯದಲ್ಲಿ ಗೋವುಗಳಿಗೆ ಮೇವು ಒದಗಿಸಲು ಪರಂಪರಾಗತ ವ್ಯವಸ್ಥೆಯಾದ ಗೋಮಾಳಗಳನ್ನು ಸಾಕಷ್ಟು ಕದ ಅತಿಕ್ರಮಣಮಾಡಲಾಗಿದೆ ಮೇಯಲು ಬಿಟ್ಟ ಗೋವುಗಳ ಕಳ್ಳತನವಾಗುತ್ತಿರುವುದರಿಂದ ಗೋಮಾಳ ಉಪಯೋಗಿರಲು ಗೋಪಾಲಕರಿಗೆ ಕಷ್ಟವಾಗುತ್ತಿದೆ. ಆದ್ದರಿಂದ ರಾಜ್ಯದಲ್ಲಿ ಇರುವ ಎಲ್ಲಾ ಗೋಮಾಳಗಳನ್ನು ಕಂದಾಯ ಇಲಾಖೆಯಿಂದ ಹಿಂಪಡೆದು ಪಶುಸಂಗೋಪನಾ ಇಲಾಖೆಗೆ ಕೊಟ್ಟು ಅಭಿವೃದ್ಧಿ ಮಾಡಿಸ ಬೇಕು,ಗೋಮಾಳ ಗಡಿ ಗುರುತು ಹಾಕಿ ಅದಕ್ಕೆ ರಕ್ಷಣೆಗೆ ಆವರಣ ಗೋಡೆ ಅಥವಾ ಬೇಲಿ ಹಾಕಿ ನೀರಿನ ವ್ಯವಸ್ಥೆ ಇತ್ಯಾದಿ ಸೌಕರ್ಯಗಳನ್ನು ಒದಗಿಸಿ ಪಂಚಾಯತ್ ಮೂಲಕ ಗ್ರಾಮಗಳ ಎಲ್ಲಾ ಗೋವುಗಳನ್ನು ಸಾಮಾಜಿಕವಾಗಿ ಮೇಯಿಸಲು ಯೋಜನೆ ರೂಪಿಸಿ ಅದಕ್ಕೆ ಪಂಚಾಯತ್ ಮೂಲಕ ಅನುಧಾನ ಒದಗಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ. ವಿಶ್ವ ಹಿಂದೂ ಪರಿಷತ್ ಬಜರಂಗದಳ ಇರ್ದೆ ಶಿವಾಜಿ ಘಟಕದ ಬಜರಂಗದಳ ಸಹಸುರಕ್ಷಾ ಪ್ರಮುಖ್ ಅನಿಲ್ ಇರ್ದೆ, ಬಜರಂಗದಳ ಸಂಚಾಲಕ ಧನಂಜಯ ಪಟ್ಟೆ, ಸಹಸಂಚಾಲಕ ಲಕ್ಷ್ಮಣ ಇರ್ದೆ, ಇರ್ದೆ ಸಾಪ್ತಾಹಿಕ ಮಿಲನ್ ನ ಅಕ್ಷಯ್ ಇರ್ದೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.