HomePage_Banner
HomePage_Banner
HomePage_Banner
HomePage_Banner

ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸಾಮಾನ್ಯ ಸಭೆ | ಡಿ.14ರಂದು ಸಂಘದ ವಾರ್ಷಿಕ ಮಹಾಸಭೆಗೆ ನಿರ್ಧಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಮಾಸಿಕ ಸಭೆಯು ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರ ಅಧ್ಯಕ್ಷತೆಯಲ್ಲಿ ನ.30ರಂದು ನಡೆಯಿತು.

ರೈತರ ಸೇವಾ ಸಹಕಾರಿ ಸಂಘವು ತನ್ನ ಉತ್ತಮ ಸಾಧನೆಗಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸತತ ೩ನೇ ಬಾರಿಗೆ ಪ್ರಶಸ್ತಿ ಗಳಿಸಿದ್ದು ಈ ಪ್ರಶಸ್ತಿ ಲಭಿಸಲು ಕಾರಣಿಭೂತರಾದ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಎಲ್ಲಾ ನಿರ್ದೇಶಕರುಗಳಿಗೆ, ಸಿಬ್ಬಂದಿಗಳಿಗೆ, ಸಂಘದ ಎಲ್ಲಾ ಸದಸ್ಯರಿಗೆ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರು ಅಭಿನಂದನೆ ಸಲ್ಲಿಸಿ ಮುಂದೆಯೂ ಈ ಸಹಕಾರಿ ಸಂಘವು ಇನ್ನಷ್ಟು ಪ್ರಗತಿಪಥದತ್ತ ಸಾಗಲು ಪ್ರತಿಯೊಬ್ಬರ ಸಹಕಾರ, ಸಹಾಯ ಅಗತ್ಯವಾಗಿದೆ ಎಂದು ಅವರು ಹೇಳಿದರು.

ದ.14ರಂದು ವಾರ್ಷಿಕ ಮಹಾಸಭೆ
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯನ್ನು ಕೋವಿಡ್-೧೯ ನಿಯಮಾವಳಿಗಳನ್ನು ಪಾಲಿಸಿಕೊಂಡು ದ.೧೪ರಂದು ನಡೆಸಲು ನಿರ್ದರಿಸಲಾಯಿತು. ಈ ಬಗ್ಗೆ ನಿರ್ದೇಶಕರುಗಳು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.

ಜಯಲಕ್ಷ್ಮಿ ಸುರೇಶ್‌ಗೆ ಅಭಿನಂದನೆ
ನೇತ್ರಾವತಿ ಸ್ತ್ರೀಶಕ್ತಿ, ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ನಿರ್ದೇಶಕರುಗಳಾಗಿ ಅವಿರೋಧವಾಗಿ ಆಯ್ಕೆಗೊಂಡ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಜಯಲಕ್ಷ್ಮೀ ಸುರೇಶ್‌ರಿಗೆ ಸಭೆಯಲ್ಲಿ ಅಭಿನಂದಿಸಲಾಯಿತು.

ಸಭೆಯಲ್ಲಿ ಇನ್ನಿತರ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ರಾಜಶೇಖರ್ ಜೈನ್, ಅಶ್ರಫ್ ಕಲ್ಲೇಗ, ಜಯಲಕ್ಷ್ಮೀ ಸುರೇಶ್, ಕೆ. ದೇವಾನಂದ, ಸಿತ್ಮಾ ಜೆ. ಭಂಡಾರಿ, ಮೋಹನ್ ಪಕ್ಕಳ, ರಾಜು, ಸುಂದರ ಪೂಜಾರಿ ಬಡಾವು, ಸುಬ್ರಹ್ಮಣ್ಯ ಗೌಡ ಹನಿಯೂರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಆಡಳಿತ ನಿರ್ದೇಶಕರಾದ ಗೋಪಾಲಕೃಷ್ಣ ಭಟ್ ಸ್ವಾಗತಿಸಿ ಶಾಖಾ ವ್ಯವಸ್ಥಾಪಕರಾದ ರಾಧಾ ಬಿ. ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.