ಪುತ್ತೂರು: ಒಡಿಯೂರು ಸ್ವಾಮೀಜಿ ಅವರ 60ನೇ ಹುಟ್ಟುಹಬ್ಬದ ಹಾಗೂ ಮಕ್ಕಳ ಮಾಸೋತ್ಸವದ ಪ್ರಯುಕ್ತ ಒಡಿಯೂರು ಗುರುದೇವ ಸೇವಾ ಬಳಗ ಪುತ್ತೂರು, ವಜ್ರಮೂತ ಮಹಿಳಾ ಭಜನಾ ಮಂಡಳಿ ವತಿಯಿಂದ ಶಿಕ್ಷಣ ಸಂಪನ್ಮೂಲ ಕೇಂದ್ರ ಸಹಕಾರದೊಂದಿಗೆ ಪುತ್ತೂರಿನ ಮೊಟ್ಟೆತ್ತಡ್ಕದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಶಿಕ್ಷಕಿ ಪೂರ್ಣಿಮಾರವರು ಮಾಹಿತಿ ನೀಡಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಯಮುನಾ ಪ್ರಥಮ, ಸವಿತಾ ದ್ವಿತೀಯ, ರೇಣುಕಾ ತೃತೀಯ ಹಾಗೂ ಲಲಿತಾ, ತಿಮ್ಮ ಸಮಾಧಾನಕರ ಬಹುಮಾನ ಪಡೆದುಕೊಂಡರು.
ಒಡಿಯೂರು ಗುರುದೇವ ಸೇವಾ ಬಳಗ ಪುತ್ತೂರು ಇದರ ಅಧ್ಯಕ್ಷರಾದ ನಿತ್ಯಾನಂದ ಶೆಟ್ಟಿ ಸ್ವಾಗತಿಸಿ ವಜ್ರಮಾತ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ನಯನ ರೈ ವಂದಿಸಿದರು. ಭಜನಾ ಮಂಡಳಿಯ ಕಾರ್ಯದರ್ಶಿ ಶಾರದಾ ಕೇಶವ್, ಸುಮಂಗಲಾ ಶೆಣೈ , ಶಶಿಕಲಾ, ಯಮುನಾ, ಪುಷ್ಪ , ಸುಚಿತ್ರ ಸಹಕರಿಸಿದರು.