ನಿಡ್ಪಳ್ಳಿ; ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘ 2019-2020 ನೇ ಸಾಲಿನಲ್ಲಿ ಒಟ್ಟು 6.43,247.10 ನಿವ್ವಳ ದಾಖಲೆ ಲಾಭ ಗಳಿಸಿದ್ದು ಆಡಿಟ್ ವರ್ಗೀಕರಣದಲ್ಲಿ ‘ಎ’. ಶ್ರೇಣಿ ಪಡೆದಿರುತ್ತದೆ ಎಂದು ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು ತಿಳಿಸಿದರು.
ಅವರು ನ.30 ರಂದು ಸಂಘದ ಸಭಾಭವನದಲ್ಲಿ ನಡೆದ 2019-2020 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಲಾಭಾಂಶದಲ್ಲಿ ರೈತರಿಗೆ ಶೇ.20 ಡೆವಿಡೆಂಡ್ ಮತ್ತು ಪ್ರತೀ ಲೀಟರ್ ಹಾಲಿಗೆ 1.72 ರೂ ಬೋನಸ್ ನೀಡಲಾಗುವುದು ಎಂದು ಘೋಷಿಸಿದರು.

ವರದಿ ಸಾಲಿನಲ್ಲಿ ಸಂಘವು ಸರಾಸರಿ ದಿನಂಪ್ರತಿ 488.2 ಲೀಟರ್ ಹಾಲು ಶೇಖರಣೆ ಮಾಡಿದ್ದು ಗರಿಷ್ಠ 563.9 ಲೀಟರ್ ಶೇಖರಣೆ ಮಾಡಿರುತ್ತದೆ.ಸಂಘವು ವರದಿ ಸಾಲಿನಲ್ಲಿ 53,72,416.79 ರೂಪಾಯಿಯ 1,78,227.80 ಲೀಟರ್ ಹಾಲನ್ನು ಶೇಖರಣೆ ಮಾಡಿದ್ದು 13,06,116.00 ರೂಪಾಯಿಯ 31,098 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ.ಸುಮಾರು 1,128 ಚೀಲ ನಂದಿನಿ ಪಶು ಆಹಾರ ಮತ್ತು 1,234 ಕೆ.ಜಿ ಲವಣ ಮಿಶ್ರಣವನ್ನು ಮಾರಾಟ ಮಾಡಲಾಗಿದೆ.ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಿಂದ 2,07,989.91 ರೂ. ವ್ಯಾಪಾರ ಲಾಭ ಬಂದಿರುತ್ತದೆ.1,091 ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಮತ್ತು 365 ಜಾನುವಾರುಗಳಿಗೆ ಪ್ರಥಮ ಚಿಕಿತ್ಸೆ ನೀಡಿದೆ.ಸದಸ್ಯ ರೈತರ ಆಕಸ್ಮಿಕ ಮರಣ ಹೊಂದಿದ 3 ರಾಸುಗಳಿಗೆ 9 ಸಾವಿರ ಪರಿಹಾರ ಧನ ವಿತರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಂಘದ ವತಿಯಿಂದ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ, ಶಿಕ್ಷಣ ಕ್ಷೇತ್ರ ಮತ್ತು ದೇವಸ್ಥಾನಕ್ಕೆ ದೇಣಿಗೆ ನೀಡಲಾಗಿದೆ. ಸಂಘದ ಕ್ಯಾಲೆಂಡರ್ ಮುದ್ರಿಸಿ ವಿತರಿಸಲಾಗಿದೆ, ಜಾನುವಾರುಗಳಿಗೆ ಉಚಿತ ಜಂತುಹುಳ ನಿವಾರಣಾ ಔಷಧ , ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮ ಮತ್ತು ಹಸಿರು ಮೇವು ಬೆಳೆಸಲು ಪ್ರೊತ್ಸಾಹ ನೀಡಲಾಗಿದೆ ಎಂದು ಹೇಳಿದರು. ಮುಂದೆಯೂ ರೈತರು ಗುಣಮಟ್ಟದ ಶುದ್ಧವಾದ ಹಾಲನ್ನು ಹೆಚ್ಚು ಸರಬರಾಜು ಮಾಡಿ ಸಂಘದ ಅಭಿವೃದ್ಧಿ ಯೋಜನೆಗಳಿಗೆ ಸಹಕರಿಸುವಂತೆ ವಿನಂತಿಸಿ, ಇದುವರೆಗೆ ಸಹಕರಿಸಿದ ಸರ್ವರಿಗೂ ಅಭಿನಂದನೆ ಸಲ್ಲಿಸಿದರು.ಕೊವಿಡ್-19 ಸಂದರ್ಭದಲ್ಲಿ ಬಡ ಅರ್ಹ ಫಲಾನುಭವಿಗಳಿಗೆ ಕಿಟ್ ವಿತರಿಸಿದ ತಾಲೂಕಿನ ಪ್ರಥಮ ಹಾಲು ಉತ್ಪಾದಕರ ಸಹಕಾರಿ ಸಂಘ ನಮ್ಮದು.ವಿತರಣಾ ಸಂದರ್ಭದಲ್ಲಿ ಸಹಕಾರ ನೀಡಿದ ಸಂಘದ ಸದಸ್ಯರನ್ನು ಅಭಿನಂದಿಸಿದರು.ಸಂಘದ ಕಟ್ಟಡ ನಿರ್ಮಾಣದ ಸಮಯದಲ್ಲಿ ಮರದ ರೂಪದಲ್ಲಿ ದಾನ ನೀಡಿದ ನಿರ್ದೇಶಕ ಶಂಕರನಾರಾಯಣ ಭಟ್ ಕೊಂದಲ್ಕಾನ ಹಾಗೂ ಸಭಾಭವನಕ್ಕೆ ಸೀಲೀಂಗ್ ಫ್ಯಾನ್ ಕೊಡುಗೆ ನೀಡುವುದಾಗಿ ವಾಗ್ದಾನ ಮಾಡಿದ ಸಂಘದ ಉಪಾಧ್ಯಕ್ಷ ಕೃಪಾಶಂಕರ ಇವರಿಗೆ ಅಭಿನಂದನೆ ಸಲ್ಲಿಸಿದರು.

ಮುಖ್ಯ ಅತಿಥಿ ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ಮಾತನಾಡಿ ಕೇಂದ್ರ ಸರಕಾರ ಯೋಜನೆಯಾದ ದನದ ಗುರುತು ಹಿಡಿಯಲು ಉಪಯುಕ್ತವಾದ ಗುರುತು ನಂಬ್ರ ಕಿವಿಗೆ ಟಿಕ್ಕಿ ಪ್ರತಿ ರೈತರು ತಪ್ಪದೆ ಹಾಕಿಸುವುದು.
ಆಕಸ್ಮಿಕವಾಗಿ ಜಾನುವಾರುಗಳು ಮರಣ ಹೊಂದಿದರೆ ರೈತನಿಗೆ ನಷ್ಟ ತಪ್ಪಿಸಲು ಜಾನುವಾರು ವಿಮೆ ಮಾಡಿಸುವುದು ಬಹಳ ಉಪಯುಕ್ತ. ಕಾಲುಬಾಯಿ ಜ್ವರ ರೋಗ ಬರುವುದನ್ನು ತಪ್ಪಿಸಲು ಕಾಲುಬಾಯಿ ಜ್ವರ ಲಸಿಕೆಯನ್ನು ಎಲ್ಲಾ ಜಾನುವಾರುಗಳಿಗೆ ಹಾಕಿಸುವುದು. ಅಲ್ಲದೆ ಆರು ತಿಂಗಳಿಗೊಮ್ಮೆ ಜಾನುವಾರುಗಳಿಗೆ ಜಂತುಹುಳ ನಿವಾರಣಾ ಗುಳಿಗೆ ನೀಡುವ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ವ್ಯವಸ್ಥಾಪಕ ಶ್ರೀನಿವಾಸ್ ಮಾತನಾಡಿ ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘ ಬಹಳ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದ ಕಾರಣ ತಾಲೂಕು ಮಟ್ಟದಲ್ಲಿ ಗುರುತಿಸುವಂತಾಗಿದೆ.ಸಭೆ ನಡೆಸಲು ಕೊರತೆಯಾಗಿದ್ದ ಸಭಾಭವನದ ನಿರ್ಮಾಣ ನಡೆಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಅಡಿಗರವರು ಅತ್ಯುತ್ತಮವಾಗಿ ಕಾರ್ಯನಿರ್ವಹಿತ್ತಿರುವುದು ಇತರ ಸಂಘಗಳಿಗೆ ಮಾದರಿಯಾಗಿದ್ದಾರೆ.ಎಲ್ಲಾ ರೆಕಾರ್ಡ್ಸ್ ಗಳನ್ನು ಬಹಳ ನೀಟಾಗಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬರುತ್ತಿರುವುದು ಕೂಡ ಸಂಘದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹೇಳಿ ಮೆಚ್ಚುಗೆ ವ್ಯಕ್ತ ಪಡಿಸಿ ಶುಭ ಹಾರೈಸಿದರು.
ಉಪಾಧ್ಯಕ್ಷ ಕೃಪಾಶಂಕರ.ಪಿ,ಅರ್ದಮೂಲೆ, ಗುಲಾಬಿ ರೈ ಬೊಳ್ಳಿಂಬಳ, ಕೃಷ್ಣ ನಾಯ್ಕ ಬೊಳ್ಳುಕಲ್ಲು, ನಾರಾಯಣ ಪಾಟಾಳಿ ಕಡಮಾಜೆ, ಸಂತೋಷ ಕುಮಾರ್ ಪರಪ್ಪೆ, ಎಸ್.ವಿ.ಸದಾಶಿವ ಭಟ್ ಪಾಲ್ತಮೂಲೆ, ಸೀತಾ ಬೊಳ್ಳಿಂಬಳ, ಶಂಕರನಾರಾಯಣ ಭಟ್ ಕೊಂದಲಕಾನ, ಉಮೇಶ್ ಬಲ್ಯಾಯ ಕೊಂದಲಡ್ಕ, ವಿಶ್ವನಾಥ ರೈ ಕಡಮಾಜೆ, ವಿಶ್ವನಾಥ ರೈ ಸೂರಂಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಸದಸ್ಯ ಗಣಪತಿ ಬಲ್ಯಾಯ ಪ್ರಾರ್ಥಿಸಿ, ಉಪಾಧ್ಯಕ್ಷ ಕೃಪಾಶಂಕರ.ಪಿ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಅಡಿಗ ಎ ವಾರ್ಷಿಕ ವರದಿ ವಾಚಿಸಿ ವಂದಿಸಿದರು. ಸಿಬ್ಬಂದಿಗಳಾದ ಹರೀಶ್ ಬಲ್ಯಾಯ ಕೆ, ವಿದ್ಯಾ, ಲತಾ ಡಿ ಸಹಕರಿಸಿದರು.ಸಂಘದ ಸದಸ್ಯರು ಪಾಲ್ಗೊಂಡರು.