HomePage_Banner
HomePage_Banner
HomePage_Banner
HomePage_Banner

ಕೊಂಬೆಟ್ಟು ಸರಕಾರಿ ಬೋರ್ಡ್ ಹೈಸ್ಕೂಲ್‌ನಲ್ಲಿ ಹಿರಿಯ ವಿದ್ಯಾರ್ಥಿಗಳ ವಿಶೇಷ ಸಭೆ | ಹೆರಿಟೇಜ್ ಕಟ್ಟಡ ಉಳಿಸುವ ನಿಟ್ಟಿನಲ್ಲಿ ಇತಿಹಾಸ ನೆನಪು ಮಾಡುವ ಕೆಲಸ ಆಗಬೇಕು- ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶತಮಾನ ಕಂಡ ಕೊಂಬೆಟ್ಟು ಸರಕಾರಿ ಬೋರ್ಡ್ ಹೈಸ್ಕೂಲ್‌ನಲ್ಲಿ ಹಿರಿಯ ವಿದ್ಯಾರ್ಥಿಗಳ ವಿಶೇಷ ಸಭೆಯು ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ಡಿ.1ರಂದು ಶಾಲಾ ಆವರಣದಲ್ಲಿರುವ ಶಿವಸದನ ಸಭಾಂಗಣದಲ್ಲಿ ನಡೆಯಿತು.

ಲಕ್ಷೋಪಲಕ್ಷ ಮಂದಿ ವಿದ್ಯಾರ್ಜನೆಗೈದ ಶತಮಾನಕಂಡ ಹೆರಿಟೇಜ್ ಕಟ್ಟಡದಲ್ಲಿ ಪ್ರಸ್ತುತ ಸುಮಾರು ೨೭೦೦ ವಿದ್ಯಾರ್ಥಿಗಳಿರು ಈ ಶಾಲೆಯಲ್ಲಿ ಕೊಠಡಿಗಳ ಮೇಲ್ಛಾವಣಿ ಹಾನಿಗೊಂಡಿದ್ದು ಅದನ್ನು ಶಾಲೆ ಆರಂಭ ಆಗುವ ಮುಂದೆ ದುರಸ್ಥಿಗೊಳಿಸಬೇಕು.ಬಿರಕು ಬಿಟ್ಡಿರುವ ಪ್ಲಾಟಿನಮ್ ಜ್ಯುಬುಲಿ‌ಕಟ್ಟಡದ ಕೆಲಸ, ಮೈದಾನಕ್ಕೆ ಹೋಗಲು ದಾರಿಯ ವ್ಯವಸ್ಥೆ ಸೇರಿದಂತೆ ಶಾಲೆಯ ಸಮಗ್ರ ಅಭಿವೃದ್ದಿಯ ಕುರಿತು‌ ಸಮಗ್ರವಾದ ಚರ್ಚೆ ನಡೆಯಿತು.

ಹೇರಿಟೇಜ್ ಕಟ್ಟಡ ಉಳಿಸಿ ಇತಿಹಾಸ ನೆನಪು:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯ ಮತ್ತು ಡಾ.ಶಿವರಾಮ ಕಾರಂತರ ಕರ್ಮ ಭೂಮಿಯಗಿರುವ ಈ ಶಾಲೆಯಲ್ಲಿ ಅಣ್ಣಪ್ಪ ಮತ್ತು ಕುಂಜಪ್ಪರಂತ ಪ್ರಾಂಶುಪಾಲರು ಶಾಲೆಯ ಅಭಿವ್ರದ್ದಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಮೂಲ ಸ್ವರೂಪ ಇಟ್ಟು ಕೊಂಡು ಶಾಲೆಯ ಹೆರಿಟೇಜ್ ಕಟ್ಟಡ ಮುಂದಿನ ನೂರು ವರ್ಷ ಹೇಗಿರಬೇಕೆಂದು ಮಾಸ್ಟರ್ ಪ್ಲಾನ್ ಮಾಡಬೇಕು. ಅದು ಹಿರಿಯ ವಿದ್ಯಾರ್ಥಿಗಳ ಮುಂದಿಟ್ಟು ಅನುಮತಿ ಪಡೆಯಬೇಕು. ಇದಕ್ಕೆ ಸಿವಿಲ್ ಇಂಜಿನಿಯರ್, ವಾಸ್ತು ಇಂಜಿನಿಯರ್ ಗಳನ್ನು ಸೇರಿಸಿ ಮುಂದಿನ ನಾಲ್ಕು ವರ್ಷದ ಯೋಜನೆ ರೂಪಿಸಿ ಎಂದ ಅವರು ಎಲ್ಲಾ ಯೋಜನೆಗಳು ಹಿರಿಯ ವಿದ್ಯಾರ್ಥಿಗಳ ನೇತ್ರತ್ವದಲ್ಲಿ ನಡೆಯಬೇಕು. ಒಟ್ಟು ಆಧುನಿಕ ಜಗತ್ತಿನ ಮೂಲಭೂತ ಸೌಕರ್ಯಕೊಡಿಸುವ ನಿಟ್ಟಿನಲ್ಲಿ  ಇತಿಹಾಸ ಉಳಿಸುವ ಕೆಲಸ ಆಗಬೇಕೆಂದರು.

ಸಮಿತಿ ಪುನರ್ ನಿರ್ಮಾಣ:
ಹಿರಿಯ ವಿದ್ಯಾರ್ಥಿಗಳ ಸಮಿತಿಯನ್ನು ಮಹಾಸಭೆ ಕರೆಸಿ ಒಂದು ತೀರ್ಮಾನಕ್ಕೆ ಬಂದು ಹೊಸ ಸಮಿತಿಯನ್ನು ಮಾಡುವಂತೆ ಶಾಸಕ ಸಂಜೀವ ಮಠಂದೂರು ಹೇಳಿದರು. ಶಾಲೆಯ ಉಪ ಪ್ರಾಂಶುಪಾಲ ವಸಂತಮೂಲ್ಯ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುರೇಶ್ ಶಾಲೆಯ ವಿವಿಧ ಅಗತ್ಯೆಗಳ ಕುರಿತು‌ ಮಾಹಿತಿ ನೀಡಿದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರಾದ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ವಂದಿಸಿದರು.ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಗೀತಾಮಣಿ ವಿವಿಧ ಕಾರ್ಯಕ್ರಮ ನಿರೂಪಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಪಡ್ಡಂಬೈಲು ಸುರೇಶ್ ರೈ, ಮಾಜಿ ಪುರಸಭಾ ಅಧ್ಯಕ್ಷ ಗಣೇಶ್ ರಾವ್, ಡಾ.ಕೃಷ್ಣ ಪ್ರಸನ್ನ, ಈಶ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಗೋಪಾಲಕೃಷ್ಣ, ವಿಶ್ವನಾಥ ನಾಯಕ್, ನಗರಸಭೆ ಮಾಜಿ ಸದಸ್ಯ ಅನ್ವರ್ ಖಾಸಿಮ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ತಾಲೂಕು ಕ್ರೀಡಾಂಗಣ ಶಾಲೆಗೆ ಬಿಟ್ಡು ಕೊಡಿ
ಶಾಲೆಗೊಂದು ಆಟದ ಮೈದಾನ ಅಗತ್ಯ ಎಂಬಂತೆ ಕೊಂಬೆಟ್ಟು ತಾಲೂಕು ಕ್ರೀಡಾಂಗಣವನ್ನು ಶಾಲೆಗೆ ಬಿಟ್ಡು ಕೊಡಬೇಕೆಂದು ಹಿರಿಯ ವಿದ್ಯಾರ್ಥಿಗಳು ಶಾಸಕರಲ್ಲಿ ಆಗ್ರಹಿಸಿದರು. ಉತ್ತರಿಸಿದ ಶಾಸಕರು ಎಲ್ಲರಿಗೂ ಮೈದಾನ ಶಾಲೆಗೆ ಬಿಟ್ಟು ಕೊಡಬೇಕೆಂಬ ಮನವಿಗೆ ಸಂಬಂಧಿಸಿ ತಾಲೂಕು ಕ್ರೀಡಾಂಗಣವನ್ನು ತೆಂಕಿಲದಲ್ಲಿರುವ ೨೫ ಎಕ್ರೆ ಸ್ಥಳಕ್ಕೆ ಸ್ಥಳಾಂತರಿಸುವ ಚಿಂತನೆ ನಡೆದಿದೆ. ಮುಂದೆ ಕೊಂಬೆಟ್ಟು ಆಟದ ಮೈದಾನವನ್ನು ಶಾಲೆಗೆ ಬಿಟ್ಟು ಕೊಡಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಅವರು ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.