HomePage_Banner
HomePage_Banner
HomePage_Banner
HomePage_Banner

ಗೋಹತ್ಯೆ ನಿಷೇಧಿಸುವಂತೆ ಒತ್ತಾಯಿಸಿ ಕಡಬ ವಿ.ಹಿಂ.ಪ.ವತಿಯಿಂದ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ರಾಜ್ಯದಲ್ಲಿ ಗೋ ಹತ್ಯೆ ನಿಷೇಧಿಸಿ ಪ್ರಬಲ ಕಾಯ್ದೆ ಜಾರಿ ಮಾಡುವಂತೆ ಹಾಗೂ ಗೋಮಾಳಗಳ ಅಭಿವೃದ್ಧಿ ಮಾಡಿ ಜಾನುವಾರುಗಳಿಗೆ ಉಪಯೋಗವಾಗುವಂತೆ ಸೌಕರ್ಯ ಹಾಗೂ ರಕ್ಷಣೆಗೆ ಆಗ್ರಹಿಸಿ ಕಡಬ ವಿ.ಹಿಂ.ಪ.ಬಜರಂಗದಳ ವತಿಯಿಂದ ಕಡಬ ಪಟ್ಟಣ ಪಂಚಾಯತ್ ಮೂಲಕ ರಾಜ್ಯದ ಮುಖ್ಯಮಂತ್ರಿಯವರಿಗೆ . ಡಿ. 1ರಂದು ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಈಗ ಜಾರಿಯಲ್ಲಿರುವ ಗೋಹತ್ಯಾ ನಿಷೇಧ ಕಾಯ್ದೆ (೧೯೬೪) ತುಂಬಾ ದುರ್ಬಲವಾಗಿದ್ದು, ರಾಜ್ಯಾದ್ಯಂತ ನಿರಂತರ, ದಿನಂಪ್ರತಿ ಸಾವಿರಾರು ಗೋವುಗಳ ವಧೆಯಾಗುತ್ತಿದೆ. ಹಿಂದೂಗಳಿಗೆ ಪೂಜನೀಯವಾಗಿರುವ ಗೋಮಾತೆಗೆ ಹಿಂಸೆ, ವಧೆ ಮಾಡುವುದರಿಂದ ಹಿಂದುಗಳ ಭಾವನೆಗೆ ಘಾಸಿಯಾಗುತ್ತಿರುವುದು ಮಾತ್ರವಲ್ಲದೇ ಅದರ ಪರಿಣಾಮದಿಂದ ರಾಜ್ಯದಲ್ಲಿ ಪದೇ ಪದೇ ಪ್ರಕೃತಿ ವಿಕೋಪ,ಬರಗಾಲ ಮುಂತಾದವುಗಳು ಸಂಭವಿಸಿ ದುರ್ಭಿಕ್ಷೆಗೆ ಕಾರಣವಾಗಿದೆ.

ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಗೋ ಹತ್ಯೆ ನಿಷೇಧಿಸಿ ಪ್ರಬಲ ಕಾಯ್ದೆ ಜಾರಿ ಮಾಡುವಂತೆಯೂ ಮತ್ತು ರಾಜ್ಯದಲ್ಲಿ ಗೋವುಗಳಿಗೆ ಮೇವು ಒದಗಿಸಲು ಪರಂಪರಾಗತ ವ್ಯವಸ್ಥೆಯಾದ ಗೋಮಾಳಗಳನ್ನು ಸಾಕಷ್ಟು ಕಡೆ ಅತಿಕ್ರಮಣಮಾಡಲಾಗಿದೆ. ಮೇಯಲು ಬಿಟ್ಟ ಗೋವುಗಳ ಕಳ್ಳತನವಾಗುತ್ತಿರುವುದರಿಂದ ಗೋಮಾಳ ಉಪಯೋಗಿಸಲು ಗೋಪಾಲಕರಿಗೆ ಕಷ್ಟವಾಗುತ್ತಿದೆ. ಆದರಿಂದ ರಾಜ್ಯದಲ್ಲಿ ಇರುವ ಎಲ್ಲಾ ಗೋಮಾಳಗಳನ್ನು ಕಂದಾಯ ಇಲಾಖೆಯಿಂದ ಹಿಂಪಡೆದು ಪಶುಸಂಗೋಪನಾ ಇಲಾಖೆಗೆ ಕೊಟ್ಟು ಅಭಿವೃದ್ಧಿಮಾಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ, ಈ ಸಂದರ್ಭದಲ್ಲಿ ಕಡಬ ಪ್ರಖಂಡ ವಿ.ಹಿಂ.ಪ ಅಧ್ಯಕ್ಷ ರಾಧಾಕೃಷ್ಣ ಕೊಲ್ಪೆ, ಮಾಜಿ ಅಧ್ಯಕ್ಷ ವಾಸುದೇವ ಗೌಡ ಕೊಲ್ಲೆಸಾಗು,ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಉಪಾಧ್ಯಕ್ಷ ಸಂತೋಷ್ ಸುವರ್ಣ,ಮಾತೃ ಶಕ್ತಿ ಪ್ರಮುಖ್ ಗೀತಾ ಅಮೈ ಕೇವಳ, ಪ್ರಮುಖರಾದ ಗಾಯತ್ರಿರುಕ್ಮ,ಸುಂದರಿ, ಪ್ರೀತಗಣೇಶ್ ಕುಂಡಿಲು,ಹರೀಶ್ ನೆಲ್ಲಿಪಡ್ಪು,ರಮೇಶ್ ಹರಿಮನೆ,ವಿಜೇಶ್ ಬೊಳ್ಳೂರು, ಯತೀಶ್ ಹೊಸಮನೆ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.