HomePage_Banner
HomePage_Banner
HomePage_Banner
HomePage_Banner

ಈಶ್ವರಮಂಗಲ ನೆಲ್ಲಿತ್ತಡ್ಕದಲ್ಲಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ಕಾರಿನಲ್ಲಿದ್ದವರು ಅಪಾಯದಿಂದ ಪಾರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಾವು ಈಶ್ವರಮಂಗಲ ರಸ್ತೆಯ ನೆಲ್ಲಿತ್ತಡ್ಕ ಎಂಬಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ದ.2ರಂದು ನಸುಕಿನ ಜಾವ ನಡೆದ ಬಗ್ಗೆ ವರದಿಯಾಗಿದೆ. ಅಪಘಾತದಲ್ಲಿ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಚಾಲಕ ಮುಸ್ತಾಕ್ ಅವರು ಚಲಾಯಿಸುತ್ತಿದ್ದ ಕಾರು ಚಾಲಕನ ಹತೋಟಿ ತಪ್ಪಿ ಈಶ್ವರಮಂಗಲ ನೆಲ್ಲಿತ್ತಡ್ಕದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಘಟನೆಯಿಂದ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದು, ಕೆಳ ಹೊತ್ತು ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕಾರಿನಲ್ಲಿದ್ದವರು ಮೂಡಬಿದ್ರೆ ಕಡೆಯಿಂದ ಆದೂರು ಕಡೆಗೆ ಹೋಗುತ್ತಿದ್ದವರೆನ್ನಲಾಗಿದೆ. ಘಟನಾ ಸ್ಥಳಕ್ಕೆ ಈಶ್ವರಮಂಗಲ ಹೊರಠಾಣೆಯ ಪೊಲೀಸರು, ಮೆಸ್ಕಾಂ ಜೆ.ಇ ಸಿಬ್ಬಂದಿಗಳು ಆಗಮಿಸಿ ಮಾಹಿತಿ ಪಡೆದು ಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.