HomePage_Banner
HomePage_Banner
HomePage_Banner
HomePage_Banner

ಬಾಲನಟಿ ಕುಮಾರಿ ಸಂಹಿತ ಭರಣ್ಯರವರಿಗೆ ಕಲಾರತ್ನ ರಾಜ್ಯೋತ್ಸವ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕನ್ನಡ ಮತ್ತು ಸಂಸ್ಕೃತಿ ಸಾಹಿತ್ಯ ಕೂಟ ಕರ್ನಾಟಕ, ಸ್ನೇಹ ಸೌರಭ ಸಾಂಸ್ಕೃತಿಕ ವೇದಿಕೆ ಬೆಂಗಳೂರು ರವರು ಉದಯೋನ್ಮುಖ ಕಲಾವಿದರಿಗೆ ನೀಡುವ 2020 ನೇ ಸಾಲಿನ ಕಲಾ ರತ್ನ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಯನ್ನು ಪಾಣಾಜೆ ಗ್ರಾಮದ ಭರಣ್ಯ ನಿವಾಸಿ ಕು. ಸಂಹಿತರವರಿಗೆ ನೀಡಲಾಗಿದೆ. ಕಲಾ ಸೇವೆಯಲ್ಲಿ ಗಣನೀಯ ಸಾಧನೆ ಮಾಡಿರುವ ಇವರರು ಡಿ. 24 ಕನ್ನಡ ಚಲನಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ.ಇವರು ಭರಣ್ಯ ನಿವಾಸಿ ಪ್ರವೀಣ್ ಮತ್ತು ವೀಣಾ ದಂಪತಿಯ ಪುತ್ರಿ ಬೆಂಗಳೂರಿನ ಮಮತಾ ಕೆ ಹಾಲ್‌ನಲ್ಲಿ ನ.29 ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗಿದೆ. ಸಂಘಟನೆಯ ವ್ಯವಸ್ಥಾಪಕ ಕಾರ್ಯದರ್ಶಿ ಕೃಷ್ಣ ಪ್ರಶಸ್ತಿ ಪ್ರಧಾನ ಮಾಡಿದರು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ನೆಹರೂ ಡಿಗ್ರಿ ಕಾಲೇಜಿನ ಪಿಶಿಕಲ್ ಎಜುಕೇಶನ್ ನಿರ್ದೇಶಕ ಡಾ. ಇರ್ಷಾದ್ ಮುಕ್ಕುಬಾಯ್,  ಹಾಸ್ಯ ಭಾಷಣಕಾರ ಡಾ. ಪಿ ಎಚ್ ಅಂಜನಪ್ಪ, ಕರ್ನಾಟಕ ಹೋರಾಟಗಾರರ ಒಕ್ಕೂಟದ ಸಂಸ್ಥಾಪನಾ ರಾಜ್ಯಾಧ್ಯಕ್ಷ ಕನ್ನಡ ಸಿರಿ ಆನಂದ್‌ಕುಮಾರ್, ಅಗರವಾಲ್ ಸಮಾಜದ ಅಧ್ಯಕ್ಷ ಅಂಜಯ್‌ಗರ್ಗೆ, ಗೋಶಾಲಾ ಸಮಾಜ ಸೇವದ ಮುಖ್ಯಸ್ಥರಾದ ಸತೀಶ್ ಗೋಯಲ್, ಐಜಿಪಿಯು ಸ್ಥಾಪಕ ಡಾ. ಕೆ ಅಶೋಕ್‌ಕುಮಾರ್, ಚಲನಚಿತ್ರ ನಿರ್ಮಾಪಕ ಎಚ್ ಜಯರಾಮ್, ಸೇರಿದಂತೆ ಅನೇಕ ಮುಖಡರುಗಳು ಉಪಸ್ಥಿತರಿದ್ದರು.
ಚಿತ್ರ ಇದೆ

.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.