ಪುತ್ತೂರು: ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘವು 2019-20ನೇ ಸಾಲಿನಲ್ಲಿ ರೂ.14,89,662.42 ಲಾಭಗಳಿಸಿದೆ. ಲಾಭಾಂಶದಲ್ಲಿ ಶೇ.20 ಡಿವಿಡೆಂಡ್ ಹಾಗೂ ಸಂಘಕ್ಕೆ ಜೇನು ನೀಡಿದ ಸದಸ್ಯರಿಗೆ ಶೇ.20 ಬೋನಸ್ ನೀಡಲಾಗುವುದು ಎಂದು ಮಹಾಸಭೆಯಲ್ಲಿ ಅಧ್ಯಕ್ಷ ಚಂದ್ರ ಕೋಲ್ಚಾರ್ ಘೋಷಣೆ ಮಾಡಿದರು.
ವಾರ್ಷಿಕ ಮಹಾಸಭೆಯು ಡಿ.2ರಂದು ಸಂಘದ ಮಾಧುರಿ ಸೌಧದ ಸಭಾಂಗಣದಲ್ಲಿ ನಡೆಯಿತು. ನಿರ್ದೇಶಕರಾದ ಜಿ.ಪಿ ಶ್ಯಾಮ ಭಟ್, ಜನಾರ್ದನ ಚೂಂತಾರು, ತನಿಯಪ್ಪ ಡಿ., ಶ್ರೀಷ ಕೊಡವೂರು, ಸುಂದರ ಗೌಡ, ಇಂದಿರಾ, ಹರೀಶ್ ಕೋಡ್ಲ, ಪಾಂಡುರಂಗ ಹೆಗ್ಡೆ, ರಾಜರಾಮ ಶೆಟ್ಟಿ, ಪುರುಷೋತ್ತಮ ಭಟ್, ಚಂದ್ರಶೇಖರ ತಾಳ್ತಜೆ, ರಾಜೀವ, ಶಿವಾನಂದ, ಮನಮೋಹನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿ.ಟಿನಾರಾಯಣ ಭಟ್, ವೀರಪ್ಪ ಗೌಡ, ಸತ್ಯನಾರಾಯಣ ಭಟ್, ಗೋವಿಂದ ಭಟ್, ಪುಟ್ಟಣ್ಣ ಗೌಡ, ರಾಧಾಕೃಷ್ಣ ದಾಸ್ ಮೊದಲಾದವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.