HomePage_Banner
HomePage_Banner
HomePage_Banner
HomePage_Banner

ಐತ್ತೂರು: ಮೂಜೂರು ಬಳಿ ಹುಲ್ಲು ಕೊಯ್ದವರ ವಾಹನ ಕೊಂಡೊಯ್ದ ಅರಣ್ಯಾಧಿಕಾರಿಗಳು -ಸುಬ್ರಹ್ಮಣ್ಯ ಅರಣ್ಯ ಕಛೇರಿ ಎದುರು ಸ್ಥಳೀಯರಿಂದ ದಿಢೀರ್ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಐತ್ತೂರು ಗ್ರಾಮದ ಮೂಜೂರುಕಟ್ಟೆ ಎಂಬಲ್ಲಿ ಅರಣ್ಯ ಪ್ರದೇಶದ ಬದಿಯಲ್ಲಿ ದೀಕ್ಷಿತಾ ಎಂಬವರು ಎಂಬವರು ಹುಲ್ಲು ಹೆರೆಯುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಅರಣ್ಯಾಧಿಕಾರಿಗಳು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದೀಕ್ಷಿತಾ ಎಂಬವರ 800 ಕಾರನ್ನು ಅರಣ್ಯಾಧಿಕಾರಿಗಳು ವಶಕ್ಕೆ ತೆಗೆದುಕೊಂಡು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳ ಕಛೇರಿಗೆ ತಂದಿರಿಸಿದ್ದಾರೆ. ಈ ಬಗ್ಗೆ ನ್ಯಾಯಕ್ಕಾಗಿ ಆಗ್ರಹಿಸಿ ಸ್ಥಳೀಯರು ಅರಣ್ಯ ಅಧಿಕಾರಿಗಳ ಕಛೇರಿ ಯ ಎದುರು ದಿಢೀರ್ ಪ್ರತಿಭಟನೆ ಆರಂಬಿಸಿದ್ದಾರೆ.

ಪ್ರತಿಭಟನೆಯಲ್ಲಿ ದೇವರಾಜ್ ಮೂಜೂರು, ಉಮೇಶ್ ಬ್ರಹ್ಮಶ್ರೀ, ಹರೀಶ್ ಕೊಡಂದೂರು, ಗಂಗಾಧರ ಮರ್ದಾಳ, ವಿನಯ ಮರ್ದಾಳ, ದೇವಿ ಪ್ರಸಾದ್, ಸುರೇಶ್ ರೈ, ಶಿವಶಂಕರ್ ರೈ, ,ಲೇಖನ್, ಸೀತಮ್ಮ, ಲಕ್ಷ್ಮೀನಾರಾಯಣ ಮೂಜೂರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.