HomePage_Banner
HomePage_Banner
HomePage_Banner
HomePage_Banner

ರಾಜ್ಯ ಸರಕಾರಿ ನೌಕರರ ಸಂಘದ ತಾ|ಶಾಖೆಯಿಂದ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಮೋಹನ್ ಜಿ.ರವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ಕಾರ್ಯಕಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರೂ ಆಗಿದ್ದು, ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮೋಹನ್ ಜಿ.ರವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ತಾಲೂಕು ಶಾಖೆಯ ವತಿಯಿಂದ ಸನ್ಮಾನ ಕಾರ್ಯಕ್ರಮ ಡಿ.೧ ರಂದು ಮಿನಿ ವಿಧಾನಸೌಧದ ಬಳಿ ಇರುವ ಸರಕಾರಿ ನೌಕರರ ಸಂಘದ ಕಛೇರಿಯಲ್ಲಿ ಜರಗಿತು.

ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಹಾಗೂ ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್‌ರವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮೋಹನ್ ಜಿ.ರವರು ಪುತ್ತೂರು ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬಂದಿ ವರ್ಗದವರ ಸಂಪೂರ್ಣ ಸಹಕಾರದಿಂದ ಇಂದು ನಾನು ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನನಾಗಿದ್ದೇನೆ. ಅರಣ್ಯ ಇಲಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ನಿವೃತ್ತರಾಗಿದ್ದ ಕೆ.ಕೃಷ್ಣಪ್ಪರವರು ಕೂಡ ನನಗೆ ಸಹಕರಿಸಿದ್ದಾರೆ. ಹಾಗೆಯೇ ಸರಕಾರಿ ನೌಕರರ ಸಂಘಕ್ಕೂ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿ ಸನ್ಮಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿದ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಕಳೆದ ಏಳು ವರ್ಷಗಳಿಂದ ಈ ಸಂಘದ ಅಧ್ಯಕ್ಷನಾಗಿ ಸರ್ವರ ಸಹಕಾರ ಹಾಗೂ ಪ್ರೋತ್ಸಾಹದಿಂದ ಕಾರ್ಯನಿರ್ವಹಿಸಿದ್ದೇನೆ. ಸಂಘದ ಏಳಿಗೆಯೇ ನನ್ನ ಪ್ರಮುಖ ಆದ್ಯತೆಯಾಗಿದ್ದು ಈ ನಿಟ್ಟಿನಲ್ಲಿ ಯಾವುದೇ ಲೋಪ ಬಾರದಂತೆ ಕರ್ತವ್ಯ ಸಲ್ಲಿಸಿರುವೆನು ಎಂಬ ಆತ್ಮತೃಪ್ತಿ ನನಗಿದೆ ಎಂದ ಅವರು ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾನು ಈಗಾಗಲೇ ನಿವೃತ್ತಿ ಹೊಂದಿದ್ದೆ. ಆದರೆ ಇಲಾಖೆಯ ಕೋರಿಕೆ ಮೇರೆಗೆ ಇದೇ ಡಿಸೆಂಬರ್ ಅಂತ್ಯದವರೆಗೆ ನಾನು ಸೇವೆಯನ್ನು ಮುಂದುವರೆಸಿ ನಿವೃತ್ತನಾಗಲಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಣ ವಿಭಾಗದಿಂದ ಪ್ರೌಢಶಿಕ್ಷಣ ವಿಭಾಗಕ್ಕೆ ಭಡ್ತಿ ಹೊಂದಿ ಕಡಬ ತಾಲೂಕಿನ ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ನೇಮಕಗೊಂಡಿರುವ ಪಡ್ನೂರು ಸರಕಾರಿ ಶಾಲೆಯ ಮಾಮಚ್ಚನ್ ಎಂ.ರವರು ಮಾತನಾಡಿ, ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದೇನೆ. ಇದೀಗ ನಾನು ಕಡಬ ತಾಲೂಕಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಕಡಬ ತಾಲೂಕಿನಲ್ಲಿ ಸರಕಾರಿ ನೌಕರರ ಸಂಘದ ಬಲವರ್ಧನೆಗೆ ಸಹಕರಿಸಲಿದ್ದೇನೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.

ರಾಜ್ಯ ಪರಿಷತ್ ಸದಸ್ಯರಾದ ಪುರುಷೋತ್ತಮ್‌ರವರು ರಾಜ್ಯ ಪರಿಷತ್‌ನ ವರದಿ ಮಂಡಿಸಿದರು. ಸಂಘದ ಜೊತೆ ಕಾರ್ಯದರ್ಶಿ ಅರಣ್ಯ ಇಲಾಖೆಯ ಶಿವಾನಂದ ಆಚಾರ್ಯರವರು ವರದಿ ಮಂಡಿಸಿ, ಸನ್ಮಾನಿತರ ಪರಿಚಯ ಮಾಡಿಸಿ, ವಂದಿಸಿದರು. ಸಭೆಯಲ್ಲಿ ವಿವಿಧ ಇಲಾಖೆಯ ಸದಸ್ಯರಾದ ಉಪಾಧ್ಯಕ್ಷ ವಾಣಿಜ್ಯ ತೆರಿಗೆ ಇಲಾಖೆಯ ರಾಮಚಂದ್ರ ಭಟ್, ಕೋಶಾಧಿಕಾರಿ ಕಂದಾಯ ಇಲಾಖೆಯ ನಾಗೇಶ್, ಶಿಕ್ಷಣ ಇಲಾಖೆಯ ಸ್ಮಿತಾಶ್ರೀ ಬಿ, ಮಹಮ್ಮದ್ ಅಶ್ರಫ್ ಕೆ, ಗಿರಿಧರ್ ಗೌಡ ಎಸ್, ಜ್ಯುಲಿಯಾನಾ ಮೊರಾಸ್, ತನುಜಾ ಎಂ, ಆರೋಗ್ಯ ಇಲಾಖೆಯ ಪದ್ಮಾವತಿ, ಇಂದಿರಾ ಕೆ.ಎಸ್, ಲೋಕೋಪಯೋಗಿ ಇಲಾಖೆಯ ಎಲ್.ಸಿ ಸಿಕ್ವೇರಾ, ಭೂಮಾಪನ ಇಲಾಖೆಯ ಮಲ್ಲಿಕ್ ಕುಮಾರ್ ಎಂ, ನ್ಯಾಯಾಂಗ ಇಲಾಖೆಯ ವೆಂಕಟೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ, ಅಬಕಾರಿ ಇಲಾಖೆಯ ವಿಜಯಕುಮಾರ್ ಕೆ, ನಿವೃತ್ತ ಉಪ ವಲಯ ಅರಣ್ಯಾಧಿಕಾರಿ ಕೆ.ಕೃಷ್ಣಪ್ಪ, ಸರಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಸೀತಾರಾಮ್‌ರವರು ಉಪಸ್ಥಿತರಿದ್ದರು.

ನಿವೃತ್ತ/ಮರಣ/ವರ್ಗಾವಣೆ ಸ್ಥಾನಕ್ಕೆ ಚುನಾವಣೆ….
ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದು ಸೇವೆಯಿಂದ ನಿವೃತ್ತರಾದ, ಮರಣ ಹೊಂದಿದ ಮತ್ತು ವರ್ಗಾವಣೆ ಹೊಂದಿದ ಸದಸ್ಯರ ಸ್ಥಾನಕ್ಕೆ ನೂತನ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಸಂಘದ ಅಧ್ಯಕ್ಷರಾಗಿದ್ದು ಡಿಸೆಂಬರ್ ತಿಂಗಳಲ್ಲಿ ನಿವೃತ್ತರಾಗುವ ಆರೋಗ್ಯ ಇಲಾಖೆಯ ಮೌರಿಸ್ ಮಸ್ಕರೇನ್ಹಸ್, ನಿವೃತ್ತಿ ಹೊಂದಿದ ಸಹಕಾರಿ ಸಂಘಗಳ ನೋಂದಣಿ ಇಲಾಖೆಯ ಚಂದ್ರಶೇಖರ್, ಪದೋನ್ನತಿ ಹೊಂದಿದ ಖಜಾನೆ ಇಲಾಖೆಯ ಆಶಾ, ಶಿಕ್ಷಣ ಇಲಾಖೆಯ ಮಾಮಚ್ಚನ್ ಎಂ, ಬಿಜಾಪುರಕ್ಕೆ ವರ್ಗಾವಣೆ ಹೊಂದಿದ ತೋಟಗಾರಿಕಾ ಇಲಾಖೆಯ ಬಸಪ್ಪ, ಇತ್ತೀಚೆಗೆ ನಿಧನ ಹೊಂದಿದ ಕಂದಾಯ ಇಲಾಖೆಯ ಶ್ರೀಧರ್ ಕೆ.ರವರ ಸ್ಥಾನಗಳಿಗೆ ಡಿಸೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಸಲಾಗುವುದು ಮತ್ತು ಅರ್ಜಿಗಳನ್ನು ಹಾಕಬಯಸುವವರು ಸಂಘದಲ್ಲಿನ ಚುನಾವಣಾಧಿಕಾರಿಯವರನ್ನು ಸಂಪರ್ಕಿಸಬಹುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಡಿ.2:ರಾಜ್ಯಾಧ್ಯಕ್ಷ ಷಡಕ್ಷರಿ ಮಂಗಳೂರಿಗೆ..
ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಎಸ್.ರವರು ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದ ನಿಮಿತ್ತ ಡಿ.೩ ರಂದು ಮಂಗಳೂರಿನ ಸರಕಾರಿ ನೌಕರರ ಸಂಘದ ನಂದಿನಿ ಸಭಾಭವನಕ್ಕೆ ಆಗಮಿಸಲಿದ್ದು, ಪುತ್ತೂರಿನಿಂದ ಮಂಗಳೂರಿಗೆ ತೆರಳುವ ಶಿಕ್ಷಕರು ಅದೇ ದಿನ ಬೆಳಿಗ್ಗೆ ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಭೇಟಿಯಾಗಬೇಕು. ಜೊತೆಗೆ ತಾಲೂಕು ಸರಕಾರಿ ನೌಕರರ ಸಂಘದ ವತಿಯಿಂದ ರಾಜ್ಯಾಧ್ಯಕ್ಷರಿಗೆ ಹಾರಾರ್ಪಣೆ ಮಾಡಲಾಗುವುದು ಎಂದು ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್‌ರವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.