ಪುತ್ತೂರು: ನ 19ರಂದು ನಿಧನರಾದ ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್, ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ, ಪ್ರಸ್ತುತ ಶ್ರೀ ಮಹಾಮಯಿ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಬನ್ನೂರು ಸೇಸು ನಾಯ್ಕರ ಶ್ರದ್ದಾಂಜಲಿ ಕಾರ್ಯಕ್ರಮ ಡಿ.2ರಂದು ಕೊಂಬೆಟ್ಟು ಮರಾಟಿ ಸಮಾಜ ಸಭಾಭವನದಲ್ಲಿ ನಡೆಯಿತು. ಮೃತರ ಪುತ್ರ ರಜನೀಕಾಂತ್ ಭಾವಚಿತ್ರಕ್ಕೆ ದೀಪ ಬೆಳಗಿಸಿ ವಂದಿಸಿದರು.
ಸಮಾಜಕ್ಕೆ ಉತ್ತಮ ಮಾರ್ಗದರ್ಶಕರು: ನ್ಯಾಯವಾದಿ, ಮಂಜುನಾಥ್ ಎನ್ಎಸ್ ಮಾತನಾಡಿ ಎಲ್ಲರೂಡನೆ ಅತ್ಯುತ್ತಮ ಪ್ರೀತಿ, ಸ್ನೇಹ, ಬಾಂಧವ್ಯದ ಒಡನಾಟ ಹೊಂದಿದಂತಹ ವ್ಯಕ್ತಿಯಾಗಿದ್ದ ಸೇಸು ನಾಯ್ಕ್ ರವರ ಮಾರ್ಗದರ್ಶನ ಧೈರ್ಯ ಸಾಹಸ ಮೆಚ್ಚುವಂತದ್ದು. ಸಮಾಜ ಬಾಂಧವರೂಡನೆ ಹಾಗೂ ಎಲ್ಲರೂಂದಿಗೆ ಉತ್ತಮ ನಡತೆ ಹೊಂದಿದ್ದರು. ಸಮಾಜಕ್ಕೂ ಉತ್ತಮ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು.
ಸೌಹಾರ್ದ ಸಹಕಾರಿ ಹುಟ್ಟು ಹಾಕುವಲ್ಲಿ ಯಶಸ್ವಿಯಾದವರು: ಮರಾಟಿ ಸಂಘದ ಅಧ್ಯಕ್ಷ ಶಿವಪ್ಪ ನಾಯ್ಕ ಮಾತನಾಡಿ ಮಾಡುವ ಕಾರ್ಯದಲ್ಲಿ ವೃತ್ತಿ ಬದ್ಧತೆ ಉಳ್ಳವಾರಗಿದ್ದ ಸೇಸು ನಾಯ್ಕರವರು ೨೦೧೧ ರ ನಂತರ ನಮ್ಮ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಘದ ಏಳಿಗೆಗೆ ಕಾರಾಣಿಭೂತರಾದವರಲ್ಲದೇ, ತಮ್ಮದೇ ಭಾಂದವರ ಸಹಕಾರಿ ಸಂಘದ ಕನಸು ಕಂಡು ಅದನ್ನು ಸಫಲಗೊಳಿಸುವಲ್ಲಿ ಯಶಸ್ವಿಯಾದವರು, ಸಂಘಟನಾ ಚತುರರು ಕೂಡ ಆಗಿದ್ದರು ಎಂದು ಹೇಳಿದರು.
ಮನುಷ್ಯರನ್ನು ಮನುಷ್ಯರು ಪ್ರೀತಿಸಬೇಕು: ಶ್ರೀ ಮಹಾಮ್ಮಾಯಿ ಸೌಹಾರ್ದ ಸಹಕಾರಿ ಇದರ ಉಪಾಧ್ಯಕ್ಷ ಶೀನ ನಾಯ್ಕ ಮಾತನಾಡಿ ಎಲ್ಲರನ್ನೂ ಪ್ರೀತಿಸುವಂತ ಬಹು ದೊಡ್ಡ ಗುಣ ಅವರಲ್ಲಿತ್ತು. ಜೊತೆಗೆ ನಾಯಕ್ವತದ ಜವಾಬ್ದಾರಿ. ಯಾವುದೇ ವೇಳೆಯೂ ಕಠೋರ, ನಿಷ್ಠುರ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಣಿಯಾಗಿರುತ್ತಿದ್ದರು. ಮೃದು ವ್ಯಕ್ತಿತ್ವ ಹೊಂದಿದ್ದ ಅವರು ಸರಳ ಸಾದು ನಿಸ್ವಾರ್ಥ ವ್ಯಕ್ತಿಯಾಗಿದ್ದರು ಎಂದು ಹೇಳಿದರು.
ಧರ್ಮರಾಯನಂತೆ ಅಜಾತಶತ್ರು : ನಿವೃತ್ತ ಪ್ರಾಂಶುಪಾಲ ದುಗ್ಗಪ್ಪ ನಾಯ್ಕ ಮಾತನಾಡಿ ಸಾವಿನ ನಂತರವೂ ಅಮರರಾಗಿರುವ ವ್ಯಕ್ತಿಗಳ ಸಾಲಿನಲ್ಲಿ ಸೇಸು ನಾಯ್ಕರು ಒಬ್ಬರಾಗಿದ್ದಾರೆ. ಧರ್ಮರಾಯನಂತೆ ಅಜಾತಶತ್ರು ಅಗಿದ್ದ ಇವರು ವ್ಯಕ್ತಿ ನಿಷ್ಠರಾಗಿರದೇ ವಸ್ತು ನಿಷ್ಠರಾಗಿದ್ದರು. ಒಳ್ಳೆಯ ಸಮಯ ಪ್ರಜ್ಞೆ ಉಳ್ಳ ಸಜ್ಜನ ವ್ಯಕ್ತಿ ಆಗಿದ್ದು, ಯಾರೊಂದಿಗೂ ಶತ್ರುತ್ವ ಬೆಳೆಸಿಕೊಂಡವರಲ್ಲ. ಅವರ ಆದರ್ಶಗಳನ್ನು ನಾವು ತುಂಬಿಕೊಳ್ಳಬೇಕು ಹಾಗೂ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು ಕೂಡ ಎಂದರು.
ಮಾರಾಟಿ ಸಮಾಜ ಸೇವಾ ಸಂಘದ ಮಾಜಿ ಸದಸ್ಯ ರಾಮ ನಾಯ್ಕ ಮಂಗಳೂರು ಮೃತರ ಗುಣಗಾನ ಮಾಡಿದರು. ಮೃತರ ಗೌರವಾರ್ಥವಾಗಿ ಸಭೆಯಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸಭೆಯಲ್ಲಿ ಸರಕಾರದ ಮಾಜಿ ಉಪ ಕಾರ್ಯದರ್ಶಿ ಯು.ಕೆ. ನಾಯ್ಕ, ಡಾ. ಗೋವಿಂದ ನಾಯ್ಕ, ಡಾ. ರಂಗಯ್ಯ ಸುಳ್ಯ, ನಗರಸಭಾ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಜಿಲ್ಲಾ ಪಂಚಾಯತ್ ನಿವೃತ್ತ ಸಿ.ಇ.ಒ. ಸುಂದರ ನಾಯ್ಕ, ನಾರಾಯಣ ನಾಯ್ಕ ಕೊಂಬೆಟ್ಟು, ಕೃಷ್ಣ ನಾಯ್ಕ ಕೃಷ್ಣನಗರ, ನಗರಸಭಾ ಸದಸ್ಯ ಶೀನಪ್ಪ ನಾಯ್ಕ, ತಿಮ್ಮಪ್ಪ ನಾಯ್ಕ ಸಾಮೆತ್ತಡ್ಕ, ಕುಸುಮ ಎಸ್. ನಾಯ್ಕ, ಪುಷ್ಪಾ ಕೃಷ್ಣನಗರ, ಮೋಹನ ನಾಯ್ಕ ಕಾಳಿಂಗಹಿತ್ಲು, ಪಿ.ಬಿ. ನಾಯ್ಕ ಉಜಿರೆ, ನಿವೃತ್ತ ರೇಂಜ್ ಪಾರೆಸ್ಟರ್ ಕಾಂತಪ್ಪ ನಾಯ್ಕ, ಲೀಲಾ ಕೃಷ್ಣನಗರ, ಲಲಿತಾ ಯು.ಕೆ. ನಾಯ್ಕ ಕೆಮ್ಮಿಂಜೆ, ರೇವತಿ ಸುಳ್ಯ, ಪಾರ್ವತಿ, ಕಲ್ಯಾಣಿ, ಮೃತರ ಪತ್ನಿ ರತ್ನಾ ಎಸ್. ನಾಯ್ಕ , ಮಗ ರಜನಿಕಾಂತ್, ಮಗಳು ರೇಖಾ ದೀಪಕ್, ಸೊಸೆ ಜೋಶ್ನಾ ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು. ಮರಾಠಿ ಸೇವಾ ಸಂಘದ ಕಾರ್ಯದರ್ಶಿ ರಾಮ್ ಚಂದ್ರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.