ಪುತ್ತೂರು: ಗ್ರಾಮಿಣ ಪ್ರದೇಶದ ಒಬ್ಬ ವಿದ್ಯಾರ್ಥಿನಿ ಸಮಾಜದ ಪಿಡುಗುಗಳನ್ನು ಎದುರಿಸಿ ಪದಕ ಪಡೆಯುವ ಒಂದು ಉತ್ತಮ ಸನ್ನಿವೇಶವನ್ನು ಇಟ್ಟುಕೊಂಡಿರುವ ‘ಪದಕ’ ಕಿರುಚಿತ್ರ ದ ಮುಹೂರ್ತ ೨ರಂದು ಇಲ್ಲಿನ ದಿನೇಶ್ ಭವನದ ಹಾಲ್ನಲ್ಲಿ ನಡೆಯಿತು.
ಶಾಸಕರಾದ ಶ್ರೀ ಸಂಜೀವ ಮಟಂದೂರು ಕಿರುಚಿತ್ರದ ಮುಹೂರ್ತ ಮಾಡಿ ಮಾತನಾಡಿ ಕಿರುಚಿತ್ರ ರಾಜ್ಯಾದ್ಯಂತ ಮನೆ ಮಾತಾಗಲಿ ಎಂದರು. ಕರ್ನಾಟಕ ತುಳು ಸಾಹಿತ್ಯ ಅಕಾಡಾಮಿಯ ಮಾಜಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ, ತಾಲೂಕು ಜನಜಾಗ್ರತಿ ವೇದಿಕೆಯ ನಿಕಟಪೂರ್ವ ಅದ್ಯಕ್ಷ ಪದ್ಮನಾಭ ಶೆಟ್ಟಿ, ರೋಟರಿ ಸೆ೦ಟ್ರಲ್ ಸ್ಥಾಪಕಾದ್ಯಕ್ಷ ಸಂತೋಷ್ ಶೆಟ್ಟಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅತಿಥಿಗಳಾಗಿ ಭಾಗವಹಿಸಿದ್ದರು. ಸನತ್ ಕುಮಾರ್ ರೈ, ರಾಮ್ದಾಸ್ ಹಾರಾಡಿ, ಅಶ್ರಫ಼್ ಮುಕ್ವೆ, ನಜ಼ೀರ್ ಎಚ್,ಉಲ್ಲಾಸ್ ಪೈ ಕಲಾವಿದರುಗಳಾದ ಅಕ್ಷತ್ ವಿಟ್ಲ, ಪೇಮ್ ರಾಜ್, ಯತೀಶ್, ಶರತ್, ನಾಗೇಶ್, ಅಶ್ವತ್, ಸಹನಾ, ತನ್ವಿ, ಮೊಹಿನಿ, ಸೌಮ್ಯಶ್ರಿ , ವಿದ್ಯಾಶ್ರಿ, ಶೋಭಾ ಭಾಗವಹಿಸಿದರು. ವಿಂದ್ಯಾಶ್ರೀ ಪ್ರಾರ್ಥಿಸಿದರು. ನಿರ್ಮಾಪಕ ರಫ಼ೀಕ್ ದರ್ಬೆ ಸ್ವಾಗತಿಸಿ, ನಿರ್ದೇಶಕ ರಜ಼ಾಕ್ ಪುತ್ತೂರು ವಂದಿಸಿದರು.