HomePage_Banner
HomePage_Banner
HomePage_Banner
HomePage_Banner

ಜ. 4,5: ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ – ಊರ ಭಕ್ತಾಭಿಮಾನಿಗಳ ಸಮಾಲೋಚನಾ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ೨೦೨೧ ಜನವರಿ ೪ ಮತ್ತು ೫ ರಂದು ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಜರಗಲಿದ್ದು, ಜಾತ್ರೋತ್ಸವದ ಸಿದ್ಧತೆಗಳ ಬಗ್ಗೆ ಊರ ಭಕ್ತಾಭಿಮಾನಿಗಳ ಸಭೆಯು ದ.1 ರಂದು ದೇವಾಲಯದ ಸಭಾಂಗಣದಲ್ಲಿ ದೇವಾಲಯದ ಪ್ರಭಾರ ಅಧ್ಯಕ್ಷ ಸತೀಶ್ ರೈ ಡಿಂಬ್ರಿಗುತ್ತುರವರ ಅಧ್ಯಕ್ಷತೆಯಲ್ಲಿ ಜರಗಿತು.

ಜಾತ್ರೋತ್ಸವದ ಪ್ರಯುಕ್ತ ಜ. ೪ ರಂದು ದೇವಾಲಯದ ವಠಾರದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ವಾರ್ಷಿಕೋತ್ಸವ ಮತ್ತು ಸತೀಶ್ ಶೆಟ್ಟಿ ಪಟ್ಲ ನೇತ್ರತ್ವದ ಪಾವೆಂಜೆ ಮೇಳದವರಿಂದ ಯಕ್ಷಗಾನ ಬಯಲಾಟ, ರಾತ್ರಿ ರಂಗಪೂಜೆ, ಜ. ೫ ರಂದು ಪೂರ್ವಹ್ನ ದೇವಾಲಯದಲ್ಲಿ ವಿವಿಧ ವೈದಿಕ ಕಾರ್‍ಯಕ್ರಮ, ಸತ್ಯನಾರಾಯಣ ಪೂಜೆ, ದರ್ಶನ ಬಲಿ, ದೈವಗಳ ನೇಮೋತ್ಸವ ಸಹಿತ ಅನೇಕ ಕಾರ್‍ಯಕ್ರಮಗಳು ನಡೆಯಲಿದ್ದು, ಕೋವಿಡ್ ನಿಯಮನುಸಾರವಾಗಿ ಕಾರ್‍ಯಕ್ರಮವನ್ನು ನಡೆಸಲು ಸಭೆ ನಿರ್ಣಯಿಸಿತು.

ದೇವಾಲಯದ ಗೌರವ ಸಲಹೆಗಾರರಾದ ಬೂಡಿಯಾರ್ ರಾಧಾಕೃಷ್ಣ ರೈ, ನೊಣಾಲು ಜೈರಾಜ್ ಭಂಡಾರಿ ಡಿಂಬ್ರಿ, ವಾಸುದೇವ ಹೊಳ್ಳ ಮಾಪಾಲ, ಚಂದ್ರಹಾಸ್ ರೈ ತುಂಬೆದಕೋಡಿ, ದೇವಾಲಯದ ಪ್ರಧಾನ ಅರ್ಚಕ ಪ್ರಕಾಶ್ ರಾವ್ ಕೊಡ್ಲಾರು, ಅರ್ಚಕ ಗುರುರಾಜ್ ಮಡುಕುಲ್ಲಾಯ, ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೆ.ಎಸ್, ರವೀಂದ್ರನಾಥ ರೈ ಬಳ್ಳಮಜಲುಗುತ್ತು, ಬಾಲಚಂದ್ರ ರೈ ಕುರಿಯಗುತ್ತು, ಜಯಶೀಲ ರೈ ಕುರಿಯ ಏಳ್ನಾಡುಗುತ್ತು, ವಿಶ್ವನಾಥ ರೈ ನಿರಾಳ, ಮಧು ನರಿಯೂರು, ಸುಂದರ ಪೂಜಾರಿ ಬೊಳಂತಿಮಾರು, ಪ್ರಸಾದ್ ರೈ ಪಟ್ಟೆ, ಶಿವಪ್ರಸಾದ್ ರೈ ಡಿಂಬ್ರಿ, ಆನಂದಕುಮಾರ್ ಉಳ್ಳಾಲ, ವಿಷ್ಣುಮೂರ್ತಿ ಬಡೆಕಿಲ್ಲಾಯ ಉಳ್ಳಾಲ, ಶಶಿಧರ್ ಕಿನ್ನಿಮಜಲು, ಗಣೇಶ್ ರೈ ಬಳ್ಳಮಜಲು, ಅರುಣಾ ಜಿ.ರೈ ಬಳ್ಳಮಜಲು, ಸುಕನ್ಯಾ ರೈ ಡಿಂಬ್ರಿ, ದಿನೇಶ್ ಪೂಜಾರಿ ಬೊಳಂತಿಮಾರು, ಗೌರವ್ ಶೆಟ್ಟಿ ವಿಷ್ಣುನಗರರವರುಗಳು ಉಪಸ್ಥಿತರಿದ್ದರು. ಜಯರಾಮ ರೈ ಅಡ್ಯೆತ್ತಿಮಾರು ಸ್ವಾಗತಿಸಿ, ವಿಶ್ವನಾಥ ಶೆಟ್ಟಿ ವಿಷ್ಣುನಗರ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.