ವಿಟ್ಲ: ಪರಿಚಯಸ್ಥ ವ್ಯಕ್ತಿಯೋರ್ವ ವಿನಾಃ ಕಾರಣ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ವ್ಯಕ್ತಿಯೋರ್ವರು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ವಿಟ್ಲ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕಡಂಬು ಸಮೀಪದ ಸುರಂಗಮೂಲೆ ನಿವಾಸಿ ಮೋನಪ್ಪ ಮೂಲ್ಯರವರ ಪುತ್ರ ಚಿದಾನಂದ (44 ವ) ರವರು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದು,
ನಾನು ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಕಲಾಸಿ ಪಾಳ್ಯ ಎಂಬಲ್ಲಿಗೆ ಬಂದು ನನ್ನ ಗೆಳೆಯ ಸತ್ತರ್ರವರ ಜೊತೆಯಲ್ಲಿ ವಾಪಾಸು ಮನೆಗೆ ಹೊರಟಾಗ ಪರಿಚಯಸ್ಥ ಜಯ ಕೊಟ್ಟಾರಿ ಎಂಬಾತನು ಬಂದು ನನ್ನನ್ನು ತಡೆದು ನಿಲ್ಲಿಸಿ ನೀನು ಕ್ಯಾಟರಿಂಗ್ ವ್ಯವಹಾರದಲ್ಲಿ ಭಾರಿ ದುಡ್ಡು ಮಾಡುತ್ತಿಯಾ ನೀನು ದೊಡ್ಡ ಜನವಾ ಎಂದೆಲ್ಲ ಹೇಳಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಮುಖಕ್ಕೆ ಹೊಡೆದು ಗುದ್ದಿದ ನೋವು ಮಾಡಿದ್ದಲ್ಲದೆ ಅಲ್ಲೇ ಪಕ್ಕದಲ್ಲಿದ್ದ ಕಬ್ಬಿಣದ ಪೈಪಿನಿಂದ ನನ್ನ ಮೇಲೆ ಹಲ್ಲೆ ನಡೆಸಿ ಜೀವಬೆಧರಿಕೆ ಒಡ್ಡಿ ಪರಾರಿಯಾಗಿದ್ದಾನೆ. ಹಲ್ಲೆಯಿಂದ ಗಾಯಗೊಂಡ ನನ್ನನ್ನು ಗೆಳೆಯರಾದ ಸತ್ತರ್ ಹಾಗೂ ಲಕ್ಷ್ಮಣ ರವರು ವಿಟ್ಲದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ ಎಂದು ಗಾಯಾಳು ಚಿದಾನಂದರವರು ತಿಳಿಸಿದ್ದಾರೆ. ಈ ಬಗ್ಗೆ ಗಾಯಾಳು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.