HomePage_Banner
HomePage_Banner
HomePage_Banner
HomePage_Banner

ವಿಟ್ಲದ ಸಪ್ತ ಜ್ಯುವೆಲ್ಸ್‌ನಲ್ಲಿ `ಸಪ್ತ ಸ್ವರ್ಣ ಸಂಭ್ರಮ’ಕ್ಕೆ ಚಾಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ:  ಚಿನ್ನಾಭರಣ ಕ್ಷೇತ್ರದಲ್ಲಿ ಅತ್ಯಲ್ಪ ಅವಧಿಯಲ್ಲೇ ಗ್ರಾಮೀಣ ಭಾಗದ ಜನರ ಮನ ಗೆದ್ದ ಸಪ್ತ ವೆಂಚರ್ಸ್‌ನ ಅಧೀನದಲ್ಲಿರುವ ವಿಟ್ಲ ಎಂಪಾಯರ್ ಮಾಲ್ ನಲ್ಲಿ ಕಾರ್ಯಾಚರಿಸುತ್ತಿರುವ  ಸಪ್ತ ಜ್ಯುವೆಲ್ಸ್ ತನ್ನ ನಾಲ್ಕನೇ ವರ್ಷದ ಪಾದಾರ್ಪಣೆ ಪ್ರಯುಕ್ತ ವಿಟ್ಲ ಶಾಖೆಯಲ್ಲಿ ಡಿ.೩೧ರ ವರೆಗೆ ನಡೆಯಲಿರುವ  ‘ಸಪ್ತ ಸ್ವರ್ಣ ಸಂಭ್ರಮ’ ಕಾರ್ಯಕ್ರಮವನ್ನು  ಡಿ.4ರಂದು ವಿಟ್ಲ ಹನುಮಾನ್ ಪ್ರಿಂಟರ್ಸ್ ನ ಮಾಲಕರಾದ ವೆಂಕಟೇಶ್ ಭಟ್ ಹಾಗೂ ಮುಕ್ತಾ ವಿ. ಭಟ್ ರವರು ದೀಪಬೆಳಗಿಸಿ ಚಾಲನೆ ನೀಡಿದರು.

ಪಾಲುದಾರರಾದ ಅಜಕ್ಕಳ ಶ್ಯಾಮ್ ಭಟ್ ಮಾತನಾಡಿ ದಕ್ಷಿಣ ಕನ್ನಡದಲ್ಲಿ ಪ್ರಚಲಿತವಿರುವ ನುರಿತ ಕುಶಲ ಕರ್ಮಿಗಳಿಂದ ತಯಾರಿಸಲ್ಪಟ್ಟ ಪುರಾತನ ಶೈಲಿಯ ಚಿನ್ನಾಭರಣಗಳ ಬೃಹತ್ ಸಂಗ್ರಹವಿದೆ. ಪಾರಂಪಾರಿಕ ಆಭರಣಗಳು, ಮಾಂಗಲ್ಯ ಸರ, ನವರತ್ನದ ಉಂಗುರ, ಕರ್ಟ್ಸ್ ಬಳೆಗಳು, ಬೆಂಡೋಲೆಗಳು, ಹವಳ – ಮುತ್ತಿನ ಸರಗಳು, ಕೊತ್ತಂಬರಿಸರ, ಮೋಹನಸರ, ಕನಕಸರ, ರೇಡಿಯೋ ಚೈನ್, ಲೈಟ್ ವೈಟ್ ಸಿರಾಮಿಕ್ ಸ್ಟಡ್ಸ್, ಕೊಡಗು ಶೈಲಿಯ ಕೊಕ್ಕೆತಾತಿ ಪೆಂಡೆಂಟ್ ಗಳು, ಕೊಕ್ಕೆತಾತಿ ಕಿವಿಯೋಲೆಗಳು, ಕೊಲ್ಕತ್ತಾ, ಬೆಂಗಾಳಿ, ಬಾಂಬೆ ಶೈಲಿಯ ಆಭರಣಗಳ  ಸಹಿತ ಹಲವಾರು ಬಗೆಯ ವಿನೂತನ ಶೈಲಿಯ ಚಿನ್ನಾಭರಣಗಳು ಲಭ್ಯವಿದೆ.

ಬೆಳ್ಳಿಯ ಕಾಲು ಚೈನ್, ಕಾಲುಂಗುರ, ಸರಗಳು, ಉಂಗುರಗಳು, ಬರ್ತ್ ಸ್ಟೋನ್, ಉಂಗುರಗಳು, ಪೆಂಡೆಂಟ್ ಗಳು, ಮಕ್ಕಳ ದೃಷ್ಟಿಬಳೆ, ದೃಷ್ಟಿ ಚೈನ್ ಗಳು, ಬೆಳ್ಳಿಯ ಮದುಪರ್ಕ, ದೀಪ, ಹರಿವಾಣ,ಬೆಳ್ಳಿಯ ಆರ್ಟ್ ವರ್ಕ್ ಗಳು ಲಭ್ಯವಿದೆ.ಗ್ರಾಹಕರಿಗೆ ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಪಾಲುದಾರರಾದ ಶಿವಪ್ರಕಾಶ್  ಪಂಜಿಬಲ್ಲೆರವರು  ಮಾತನಾಡಿ ಸಪ್ತ ಅಕ್ಷಯ ಯೋಜನೆ ಮೂಲಕ ಗ್ರಾಹಕರಿಗೆ ಆಭರಣ ಖರೀದಿಗೆ ಅವಕಾಶವಿದೆ. ಸಪ್ತ ಸ್ವರ್ಣ ಸಂಭ್ರಮ’ದ ಪ್ರಯುಕ್ತ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳ ಖರೀದಿಸಿದಲ್ಲಿ ವಿಶೇಷ ರಿಯಾಯಿತಿಯನ್ನು ಹಾಗೂ ಕೊಡುಗೆಗಳನ್ನು ನೀಡಲಿದೆ.  ಚಿನ್ನಾಭರಣಗಳ ಮೇಲೆ ಪ್ರತಿ ಗ್ರಾಂ.ಗೆ ೧೨೫ರೂಪಾಯಿ ಕಡಿತ. ಆಭರಣಗಳ ಮುಂಗಡ ಆರ್ಡರ್ ನಲ್ಲಿ ವಿಎ ಮೇಲೆ ವಿಶೇಷ ರಿಯಾಯಿತಿ ದೊರೆಯಲಿದೆ. ಬೆಳ್ಳಿಯ ಆಭರಣ ಮೇಲೆ ೧೦% ಹಾಗೂ ಬೆಳ್ಳಿಯ ಪರಿಕರಗಳ ಮೇಲೆ ೫% ವರೆಗೆ ರಿಯಾಯಿತಿ ದೊರೆಯಲಿದೆ. ಪ್ರತಿ ಖರೀದಿಗೆ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಗೆಲ್ಲುವ ಅವಕಾಶವಿದೆ. ರತ್ನದ ಹರಳು(ಬರ್ತ್ ಸ್ಟೋನ್)ಗಳ ಮೇಲೆ ೫- ೧೦% ರಿಯಾಯಿತಿ ದೊರೆಯಲಿದೆ. ‘ಸಪ್ತ ಸ್ವರ್ಣ ಸಂಭ್ರಮ’ ದ ಸಂದರ್ಭದಲ್ಲಿ ‘ಸಪ್ತ ಅಕ್ಷಯ’ ಯೋಜನೆಗೆ ಸೇರ್ಪಡೆ ಗೊಂಡಲ್ಲಿ ಬೆಳ್ಳಿಯ ನಾಣ್ಯವನ್ನು ಉಡುಗೊರೆಯಾಗಿ ಪಡೆಯಬಹುದಾಗಿದೆ. ಆಭರಣಗಳ ವಿನ್ಯಾಸದ ಆಯ್ಕೆಗೆ ವಿಶೇಷ ಸಹಕಾರ, ಆರ್ಡರ್ ಮಾಡಿದ ಆಭರಣಗಳನ್ನು ಅತೀ ಕಡಿಮೆ ಸಮಯದಲ್ಲಿ ತಯಾರಿಸಿಕೊಡಲಾಗುವುದು. ಗ್ರಾಹಕರ ಕನಸಿನ ಆಭರಣಗಳ ತಯಾರಿಕೆಗೆ ವಿಶೇಷ ಕಾಳಜಿ ವಹಿಸುವ ಜತೆಗೆ ಹಾಲ್ ಮಾರ್ಕ್ ಹೊಂದಿದ ಸಂಸ್ಥೆಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಪ್ತ ಪುಡ್ ವತಿಯಿಂದ ತಯಾರಿಸಲಾದ ಅಗಸೆ ಬೀಜದ ಚಪಾತಿ ಹಾಗೂ ಮಲೆನಾಡು ಶೈಲಿಯ ಅಕ್ಕಿ ರೊಟ್ಟಿಯನ್ನು ಮಹಾಲಕ್ಷ್ಮೀ ಭಟ್ ಮಿತ್ತೂರು, ಸವಿತಾ ಭಟ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಗ್ರಾಹಕರಾದ ಪ್ರೀತಾ ಭಟ್, ಸಪ್ತ ಪಾಲುದಾರರಾದ  ಸುದರ್ಶಣ್ ಕುಮಾರ್ ಇರ್ಕಾಜೆ, ಕೃಷ್ಣ ಪ್ರಸಾದ್ ಕಡವ,  ಗೋವಿಂದರಾಜ ಕಲ್ಲಮಜಲು, ದೇವಿಪ್ರಸಾದ್ ಚಂಗಲ್ಪಾಡಿ, ಸುಕುಮಾರ ಕಲ್ಲಮಜಲು, ನಿಶಾಪ್ರಶಾಂತ್ ಸರಳಾಯ. ಸಿಬ್ಬಂದಿಗಳಾದ ಗಣೇಶ್ ಕಿರಣ್, ಗುರುರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

`ಸಪ್ತ ಅಕ್ಷಯ’ ಆಭರಣ ಖರೀದಿ ಯೋಜನೆ:
ಇದು ಗ್ರಾಹಕರಿಗೆ ಉಪಕಾರಿಯಾಗಿರುವ ಒಂದು ಯೋಜನೆಯಾಗಿದೆ. ಗ್ರಾಹಕರು ಪ್ರತಿ ತಿಂಗಳು ತಮ್ಮ ಆದಾಯದಲ್ಲಿನ ಸಣ್ಣಮೊತ್ತವನ್ನು ವಿನಿಯೋಗಿಸಿ, ಪ್ರತಿ ವರುಷ ಬಂಗಾರವನ್ನು ಖರೀದಿಸುವ ಒಂದು ಉತ್ತಮ ಯೋಜನೆಯಾಗಿದೆ. ಹನ್ನೊಂದು ತಿಂಗಳ ಯೋಜನೆ ಇದಾಗಿದ್ದು, ಪ್ರತೀ ತಿಂಗಳು ೫೦೦ ರೂಪಾಯಿಗಿಂತ ಮೇಲ್ಪಟ್ಟು ಎಷ್ಟು ಹಣ ಬೇಕಾದರೂ ಪಾವತಿಸಬಹುದಾಗಿದೆ.  ಆ ಮೊತ್ತದ ಚಿನ್ನಾಭರಣವನ್ನು ತಮ್ಮ ಅಕೌಂಟಿನಲ್ಲಿ ಜಮೆ ಮಾಡಲಾಗುತ್ತದೆ. ತಾವು ಪಾವತಿಸಿದ ಮೊತ್ತಕ್ಕೆ ಬೋನಸ್ ಲಭಿಸಲಿದೆ ಮಾತ್ರವಲ್ಲದೆ ಆಭರಣ ಖರೀದಿಸುವ ವೇಳೆ ವಿಎ ಮೇಲೆ ೧೦% ರಿಯಾಯಿತಿ ದೊರೆಯಲಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.