ಪುತ್ತೂರು : ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ ಡಿ.10ರಂದು ಬೆಳಿಗ್ಗೆ 10 ರಿಂದ ಪುತ್ತೂರು ಅಂಚೆ ಅಧೀಕ್ಷಕರ ಕಛೇರಿಯಲ್ಲಿ ನಡೆಯಲಿದೆ. ಈ ಅದಾಲತ್ತಿನಲ್ಲಿ ಪುತ್ತೂರ, ಬಂಟ್ವಾಳ, ಬೆಲ್ತಂಗಡಿ, ಕಾರ್ಕಳ ಹಾಗೂ ಸುಳ್ಯ ತಾಲೂಕುಗಳ ವ್ಯಾಪ್ತಿಯ ಅಂಚೆ ಸೇವೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಸಾರ್ವಜನಿಕ ಕುಂದುಕೊರತೆಗಳನ್ನು ತಕರಾರುಗಳನ್ನು ಪರಿಶೀಲಿಸಲಾಗುವುದ. ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಪತ್ರಮುಕೇನ ಅಂಚೆ ಅದಾಲತ್ ತಲೆಬರಹದಡಿಯಲ್ಲಿ ಡಿ.9ರ ಒಳಗೆ ಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು ವಿಭಾಗ, ಪುತ್ತೂರು 574201 ವಿಳಾಸಕ್ಕೆ ದೂರುಗಳನ್ನು ಕಳುಹಿಸಬಹುದು. ಅಥವಾ ಅದೇ ದಿನ ಬೆಳಿಗ್ಗೆ 10 ರಿಂದ 11 ರ ಒಳಗಡೆ ಸ್ಥಿರ ದೂರವಾಣಿ ಸಂಖ್ಯೆ 08251230201 ಸಂಪರ್ಕಿಸಬಹುದು ಎಂದು ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಪಿಂಚಣಿ ಅದಾಲತ್ : ಡಿ.10ರಂದು ಬೆಳಿಗ್ಗೆ 11.30ರಿಂದ ಪುತ್ತೂರು ಅಂಚೆ ವಿಭಾಗದ ದ್ವಿತೀಯ ಅರ್ಧ ವಾರ್ಷಿಕ ಪಿಂಚಣಿ ಅದಾಲತ್ ನಡೆಯಲಿದೆ. ಈ ಅದಾಲತ್ತಿನಲ್ಲಿ ಪುತ್ತೂರು ಅಂಚೆ ವಿಭಾಗದಿಂದ ನಿವೃತ್ತಿ ಹೊಂದಿ ಪಿಂಚಣಿ ಪಡೆಯುವ ಅಂಚೆ ಪಿಂಚಣಿದಾರರ ಕುಂದುಕೊರತೆಗಳನ್ನು ಪರಿಶೀಲಿಸಲಾಗುವುದು. ಕುಂದುಕೊರತೆಗಳನ್ನು ಕಳುಹಿಸಲು ಇಚ್ಚಿಸುವ ಅಂಚೆ ಪಿಂಚಣಿದಾರರು ಬರಹ ಮೂಲಕ ಡಿ.8ರ ಮೊದಲು ತಲುಪುವಂತೆ ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು, ದ.ಕ. 574201 ಇವರಿಗೆ ಪಿಂಚಣಿ ಅದಾಲತ್ನಲ್ಲಿ ವಿಚಾರಣೆಗಾಗಿ ಎಂಬ ಮೇಲ್ಬರಹ ಹೊಂದಿದ ಲಕೋಟೆಯಲ್ಲಿ ಕಳುಹಿಸಬಹುದು. ಅಥವಾ ಡಿ.10ರಂದು ಬೆಳಿಗ್ಗೆ 11.30 ಗಂಟೆಗೆ ಕಛೇರಿಯಲ್ಲಿ ಹಾಜರಿದ್ದರೆ ಸಮಕ್ಷಮ ಪರಿಶೀಲಿಸಲು ಅನುಕೂಲವಾಗುವುದು.